‘ನಮ್ಮ ತಂಟೆಗೆ ಬಂದರೆ ಬಿಡುವುದಿಲ್ಲ !’ (ಅಂತೆ) – ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ

ಮಸೀದಿಯ ಮೇಲಿನ ಭೋಂಗಾಗಳ ವಿರುದ್ಧ ನಡೆಯುತ್ತಿರುವ ರಾಷ್ಟ್ರವ್ಯಾಪಿ ಆಗುಹೋಗುಗಳು

ಜಿಹಾದಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದಿಂದ ಬೆದರಿಕೆ !

ಮಾಡುವುದನ್ನು ಮಾಡಿ ನಮ್ಮದೇ ಸರಿ ಅನ್ನುವ ನಿಲುವನ್ನು ಹೊಂದಿರುವ ಜಿಹಾದಿ ಮಾನಸಿಕತೆಯ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ! ಅನೇಕ ಜಿಹಾದಿ ದಾಳಿಗಳಲ್ಲಿ ತೊಡಗಿರುವ ಇಂತಹ ಪ್ರವೃತ್ತಿಗಳನ್ನು ಆಗಿಂದಾಗಲೇ ನಿಗ್ರಹಿಸುವುದು ಅಗತ್ಯವಿದೆ ! ಈಗಲಾದರೂ ಈ ಸಂಘಟನೆಯನ್ನು ಕೇಂದ್ರ ಸರಕಾರ ಶೀಘ್ರವೇ ನಿಷೇಧಿಸಬೇಕು, ಎಂದು ರಾಷ್ಟ್ರಪ್ರೇಮಿಗಳ ಅಪೇಕ್ಷೆಯಾಗಿದೆ!

ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಹಿಂದೂಗಳಿಗೇ ಬೆದರಿಕೆಯೊಡ್ಡಿರುವುದು ದುರದೃಷ್ಟಕರ !

ಠಾಣೆ – ಮುಂಬ್ರಾದಲ್ಲಿ ಕೆಲವರು ವಾತಾವರಣವನ್ನು ಹಾಳು ಮಾಡುತ್ತಿದ್ದಾರೆ. ‘ಛೇಡೊಗೆ ತೊ ಚೋಡೇಂಗೆ ನಹೀ’ ಎಂಬುದು ನಮ್ಮ ಘೋಷವಾಕ್ಯವಾಗಿದೆ. ದೇಶದಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಯುತ್ತಿದೆ. ನಮ್ಮ ತಂಟೆಗೆ ಬಂದರೆ ಬಿಡುವುದಿಲ್ಲ, ಇದೇ ನಮ್ಮ ಘೋಷಣೆಯಾಗಿದೆ.

ಒಂದೇ ಒಂದು ಭೊಂಗಾ ಮುಟ್ಟಿದರೆ ನಮ್ಮನ್ನು ಎದುರಿಸಬೇಕು, ಎಂದು ಮುಂಬ್ರಾದಲ್ಲಿ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ನ (ಪಿಎಫ್‌ಐ) ಅಧ್ಯಕ್ಷ ಮತಿನೆ ಶೇಖಾನಿ ಎಂಬವನು ಎಚ್ಚರಿಕೆ ನೀಡಿದ್ದಾನೆ. ಈ ಬಗ್ಗೆ ‘ಪಿ.ಎಫ್.ಐ.’ನಿಂದ ಪೊಲೀಸ್ ಠಾಣೆಯಲ್ಲೂ ಮನವಿಯನ್ನು ನೀಡಲಾಗಿದೆ.