ಕೊರೊನಾ ಒಂದು ರೋಗವಲ್ಲ, ಅಲ್ಲಾನ ಎದುರು ಅಳುತ್ತಾ ಕ್ಷಮೆ ಕೇಳಿದರೆ ಅದು ನಾಶವಾಗುತ್ತದೆ !

ಮುಸಲ್ಮಾನ ಮತ್ತು ಕ್ರೈಸ್ತ ನಾಯಕರು ಕೊರೊನಾದ ನಾಶಕ್ಕಾಗಿ ದೇವರಿಗೆ ಶರಣಾಗುವ ಕರೆಯನ್ನು ನೀಡುತ್ತಾರೆ; ಆದರೆ ಯಾವುದೇ ಹಿಂದೂ ನಾಯಕನು ಇಂತಹ ಮನವಿಯನ್ನು ಮಾಡುವುದಿಲ್ಲ; ಏಕೆಂದರೆ ಅವರು ತಮ್ಮನ್ನು ಪ್ರಗತಿ(ಅಧೋಗತಿ)ಪರ ಹಾಗೂ ವಿಜ್ಞಾನನಿಷ್ಠರೆಂದು ತಿಳಿದುಕೊಳ್ಳುತ್ತಾರೆ !

ಆಂಧ್ರಪ್ರದೇಶ ಸರಕಾರ ಮತ್ತು ಪೊಲೀಸರಿಗೆ ಚಾಟಿ ಬೀಸಿದ ಸರ್ವೋಚ್ಚ ನ್ಯಾಯಾಲಯ !

ವೈ.ಎಸ್.ಆರ್. ಕಾಂಗ್ರೆಸ್ ಸರಕಾರದ ಕ್ರೈಸ್ತಪ್ರೇಮವನ್ನು ಬಹಿರಂಗಪಡಿಸಿದ ತನ್ನದೇ ಪಕ್ಷದ ಸಂಸದನನ್ನು ಅಧಿಕಾರವನ್ನು ದುರುಪಯೋಗಿಸಿ ಬಂಧಿಸಿತು. ಇದು ಸರಕಾರದ ಮೊಗಲ್‍ಶಾಹಿ ಆಗಿದ್ದು ಇದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವೇ ಆಗಿದೆ. ಇದಕ್ಕಾಗಿ ನ್ಯಾಯಾಲಯವು ಸಂಬಂಧಪಟ್ಟವರನ್ನು ಶಿಕ್ಷಿಸಬೇಕು !

ಕೊರೋನಾ ಲಸಿಕೆ ತುಂಬಿದ್ದ ಸಿರಿಂಜ್ ಅನ್ನು ಎಸೆದು ಬಿಡುತ್ತಿದ್ದ ಆರೋಗ್ಯ ಸಿಬ್ಬಂದಿ ನೇಹಾ ಖಾನ ಇವರ ಮೇಲೆ ಅಪರಾಧ ದಾಖಲು

ಜಮಾಲಪುರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಸದ ತೊಟ್ಟಿಯಲ್ಲಿ ಕೊರೊನಾ ಲಸಿಕೆ ತುಂಬಿದ ೨೯ ಸಿರಿಂಜ್‍ಗಳು ಪತ್ತೆಯಾಗಿವೆ. ಪೊಲೀಸರು ಇಲ್ಲಿಯ ವ್ಯಾಕ್ಸಿನೇಷನ್ ವಿಭಾಗದ ಮುಖ್ಯಸ್ಥೆ ನೇಹಾ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮಕ್ಕಳ ಲೈಂಗಿಕತೆಯ ಪ್ರಸಾರ ಮಾಡುವ ‘ಬಾಂಬೆ ಬೇಗಮ್ಸ್’ ವೆಬ್ ಸರಣಿಯ ಮೇಲೆ ನಿರ್ಬಂಧ ಹೇರಿ ! – ಹಿಂದೂ ಜನಜಾಗೃತಿ ಸಮಿತಿ

‘ನೆಟ್‌ಫ್ಲಿಕ್ಸ್’ ಮತ್ತು ‘ಒಟಿಟಿ ಪ್ಲಾಟ್‌ಫಾರ್ಮ್’ಗಳಲ್ಲಿ ಪ್ರಸಾರವಾಗುತ್ತಿರುವ ‘ಬಾಂಬೆ ಬೇಗಮ್ಸ್’ ಎಂಬ ವೆಬ್ ಸರಣಿಯಲ್ಲಿ ಶಾಲೆಯ ವಿದ್ಯಾರ್ಥಿಗಳು ಅಶ್ಲೀಲ ಚಿತ್ರಗಳನ್ನು ನೋಡುವುದು, ಮಕ್ಕಳು ಮಾದಕ ಪದಾರ್ಥಗಳ ಸೇವನೆ ಮಾಡುವುದು ಇತ್ಯಾದಿ ಪ್ರಚೋದನಕಾರಿ ಹಾಗೂ ಆಕ್ಷೆಪಾರ್ಹ ದೃಶ್ಯಗಳನ್ನು ತೋರಿಸಲಾಗಿದೆ.

ಪ್ರಯಾಗರಾಜನಲ್ಲಿ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಬಳಿ ಕೋಟ್ಯಂತರ ರೂಪಾಯಿ ಆಸ್ತಿ ಇದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತನ ಆರೋಪ

ಪ್ರಯಾಗರಾಜ ಜಿಲ್ಲೆಯ ಓರ್ವ ಪೊಲೀಸ್ ಕಾನ್‌ಸ್ಟೆಬಲ್ ಬಳಿ ಕೋಟಿಗಟ್ಟಲೆ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಆತನ ಬಳಿ ದುಬಾರಿ ಕಾರುಗಳು ಮತ್ತು ಫ್ಲ್ಯಾಟ್‌ಗಳು, ಜೊತೆಗೆ ಭೂಮಿಯೂ ಇದೆ. ಈ ಬಗ್ಗೆ ತನಿಖೆ ನಡೆಸಬೇಕು, ಎಂದು ಆರ್‌ಟಿಐ ಕಾರ್ಯಕರ್ತ ನೂತನ ಠಾಕೂರ ಅವರು ರಾಜ್ಯದ ಪೊಲೀಸ್ ಮಹಾನಿರ್ದೇಶಕರಿಗೆ ಪತ್ರ ಕಳುಹಿಸಿ ಒತ್ತಾಯಿಸಿದ್ದಾರೆ.