ಲಡಾಖ್ ಗಡಿಯಲ್ಲಿ ಬೀಡುಬಿಟ್ಟಿದ್ದ ಶೇಕಡಾ ೯೦ ರಷ್ಟು ಸೈನಿಕರು ಹೆಪ್ಪುಗಟ್ಟುವಂತಹ ಚಳಿಯಿಂದ ಅನಾರೋಗ್ಯಪೀಡಿತರಾದ ಕಾರಣ ಅವರನ್ನು ವಾಪಾಸು ಕರೆಸಿಕೊಂಡ ಚೀನಾ

ಹೆಪ್ಪುಗಟ್ಟುವಂತಹ ಚಳಿಯಿಂದ ಲಡಾಖ್ ಗಡಿಯಲ್ಲಿ ಬೀಡುಬಿಟ್ಟಿರುವ ಚೀನಾದ ಶೇ. ೯೦ ರಷ್ಟು ಸೈನಿಕರನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷದ ನಂತರ ಚೀನಾ ೫೦೦೦೦ ಕ್ಕೂ ಹೆಚ್ಚು ಸೈನಿಕರನ್ನು ಅಲ್ಲಿ ನಿಯೋಜಿಸಿತ್ತು. ವಾಪಸ ಕರೆಸಲಾದ ಸೈನಿಕರ ಜಾಗದಲ್ಲಿ ಇತರ ಸ್ಥಳಗಳಲ್ಲಿ ಬೀಡುಬಿಟ್ಟಿರುವ ಸೈನಿಕರನ್ನು ಲಡಾಖ್ ಗಡಿಗೆ ಕರೆತರಲಾಗಿದೆ.

ಚೀನಾದಿಂದ ಗಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರ ಸಾವಿನ ಸಂಖ್ಯೆಯ ಮೇಲೆ ಸಂದೇಹ ಪಟ್ಟಿದ್ದ ಬ್ಲಾಗರ್ ನ ಬಂಧನ

ಕಳೆದ ವರ್ಷ ಲಡಾಖ್‍ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯಲ್ಲಿ ಮೃತಪಟ್ಟ ಚೀನಾದ ಸೈನಿಕರ ಸಂಖ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬ್ಲಾಗರ್ ನನ್ನು ಚೀನಾ ಬಂಧಿಸಿದೆ. ಆತನಿಗೆ ೮ ತಿಂಗಳು ಶಿಕ್ಷೆ ವಿಧಿಸಲಾಗಿದೆ.

ಚೀನಾದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು

ಕೊರೊನಾ ಆರಂಭವಾದ ಚೀನಾದಲ್ಲಿ ಕೊರೋನಾ ಸೋಂಕು ಮತ್ತೆ ಹರಡುತ್ತಿದೆ. ಕೊರೋನಾ ರೋಗಿಗಳು ಮತ್ತೆ ಕಾಣಿಸಿಕೊಂಡಿದ್ದರಿಂದ ಚೀನಾದ ಗ್ವಾಂಗದೊಂಗ ಪ್ರದೇಶದಲ್ಲಿ ಹಲವಾರು ನಿರ್ಬಂಧಗಳನ್ನು ಹೇರಲಾಗಿದೆ.