ಊಘೂರ ಮುಸಲ್ಮಾನರ ಅವಯವಗಳ ವ್ಯಾಪಾರ ಮಾಡುತ್ತಿರುವ ಚೀನಾ !

* ಇಸ್ಲಾಮೀ ದೇಶಗಳು ಈಗಲಾದರೂ ಒಗಟ್ಟಿನಿಂದ ವಿರೋಧಿಸುವರೇ? ಅಥವಾ ಅದರ ಶಕ್ತಿಯ ಮುಂದೆ ಶರಣಾಗುವರೇ ?- ಸಂಪಾದಕರು 

* ಭಾರತದಲ್ಲಿ ಯಾರಾದರೂ ಒಬ್ಬ ಮುಸಲ್ಮಾನನ ಮೇಲೆ ಗುಂಪೊಂದು ದಾಳಿ ಮಾಡಿದರೆ, ತಕ್ಷಣ ಸಿಡಿದೇಳುವ ಮುಸಲ್ಮಾನರು ಮತ್ತು ಅವರ ಸಂಘಟನೆಗಳು ಹಾಗೂ ಜಾತ್ಯತೀತರು ಈ ವಿಷಯದಲ್ಲಿ ಮಾತ್ರ ಏಕೆ ಏನೂ ಮಾತನಾಡುವುದಿಲ್ಲ ? – ಸಂಪಾದಕರು 

ಬೀಜಿಂಗ (ಚೀನಾ) – ಚೀನಾವು ಉಘೂರ ಮುಸಲ್ಮಾನರನ್ನು ಚಿತ್ರಹಿಂಸೆ ನೀಡುವ ಶಿಬಿರಗಳಲ್ಲಿ ಬಂಧಿಸಿಟ್ಟಿರುವುದು ಈ ಹಿಂದೆಯೇ ಬಹಿರಂಗವಾಯಿತು. ಈಗ ಚೀನಾವು ಉಘೂರ ಮುಸಲ್ಮಾನರ ಶರೀರದಲ್ಲಿರುವ ಅವಯವಗಳನ್ನು ತೆಗೆದು ಅದರ ವ್ಯಾಪಾರವನ್ನು ಪ್ರಾರಂಭಿಸಿದೆ. ಆಸ್ಟ್ರೇಲಿಯಾದ ಮೆಲಬರ್ನನಲ್ಲಿನ ದೈನಿಕ `ದ ಹೆರಾಲ್ಡ ಸನ’ ಈ ವಿಷಯದ ಬಗ್ಗೆ ಸುದ್ಧಿಯನ್ನು ಪ್ರಕಟಿಸಿದೆ.

1. ಆ ದೈನಿಕದ ಸುದ್ಧಿಯಲ್ಲಿ ‘ಉಘೂರ ಮುಸಲ್ಮಾನರ ಯಕೃತ್ತನ್ನು 1 ಕೋಟಿ 20 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಈ ವ್ಯಾಪಾರದಿಂದ ಚೀನಾಗೆ ಪ್ರತೀವರ್ಷ 7 ಸಾವಿರದ 492 ಕೋಟಿ ರೂಪಾಯಿಗಳ ಆದಾಯ ಸಿಗುತ್ತಿದೆ.

2. ಈ ವರ್ಷ ಜೂನನಲ್ಲಿ ವಿಶ್ವ ಸಂಸ್ಥೆಯ ಮಾನವಾಧಿಕರ ಆಯೋಗವು ಈ ವಿಷಯದ ಬಗ್ಗೆ ಅಂಶಗಳನ್ನು ಮಂಡಿಸಿತ್ತು, ಅದೇ ರೀತಿ ಕೇವಲ ಉಘೂರರಷ್ಟೇ ಅಲ್ಲದೆ ಟಿಬೇಟಿಯನ್ನರು, ಕ್ರೈಸ್ತರು ಮತ್ತು ಫಾಲುನ ಗೋಂಗ ಎಂಬ ಸಮಾಜದ ಜನರಿಗೂ ಅದೇ ರೀತಿ ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

3. ವಿಶ್ವ ಸಂಸ್ಥೆಯೂ 2006-07 ನೇ ಇಸವಿಯಲ್ಲಿ ಈ ಅಂಶಗಳನ್ನು ಮಂಡಿಸಿತ್ತು. ಆಗ ಚೀನಾವು ಆ ವ್ಯಾಪಾರದ ಹಿಂದೆ ಕಳ್ಳಸಾಗಾಣಿಕೆಯಿದೆ ಎಂದು ಹೇಳಿತ್ತು.

4. ‘ಆಸ್ಟ್ರೇಲಿಯನ ಸಟ್ರೇಟೆಜಿಕ ಪಾಲಿಸೀ ಇನ್ಸಟಿಟ್ಯೂಟ’ನ ಮಾಹಿತಿಯಂತೆ ಚೀನಾದಿಂದ 2017 ರಿಂದ 2019 ನ ಇಸವಿಯ ಅವಧಿಯಲ್ಲಿ 80 ಸಾವಿರ ಉಘೂರ ಮುಸಲ್ಮಾನರ ಅವಯವಗಳನ್ನು ಈ ರೀತಿ ಮಾರಾಟ ಮಾಡಲಾಗಿದೆ. ಈ ವ್ಯಾಪಾರಕ್ಕೆಂದೆ ಅನೇಕ ಡಾಕ್ಟರ ಹಾಗೂ ವೈದ್ಯಕೀಯ ತಜ್ಞರ ಸಹಾಯವನ್ನು ಪಡೆದುಕೊಳ್ಳಲಾಗುತ್ತಿದೆ.

5. ‘ಇಂಟರನ್ಯಾಶನಲ್ ಫೋರಮ ಫಾರ ರಾಯಿಟ್ಸ ಆಂಡ ಸಿಕ್ಯೂರಿಟೀ’ ಎಂಬ ಸಂಸ್ಥೆಯು ಚೀನಾದಲ್ಲಿ ಅನೇಕರ ಅವಯವಗಳನ್ನು ಬಲವಂತವಾಗಿ ತೆಗೆದುಕೊಂಡು ಅವರ ‘ಡಿ.ಎನ್.ಎ’ (ವೈಯಕ್ತಿಕ ಮೂಲವನ್ನು ಪರಿಚಯಿಸುವ ಶರೀರದಲ್ಲಿನ ಘಟಕ) ಒಟ್ಟಾಗಿ ಮಾಡಲಾಗುತ್ತಿದೆ. ಯಾವ ಮುಸಲ್ಮಾನರು ಅದನ್ನು ವಿರೋಧಿಸುತ್ತಾರೋ, ಅವರನ್ನು ಕಣ್ಮರೆಯಾಗಿಸುತ್ತಾರೆ ಎಂದು ಕೂಡ ಹೇಳಿದೆ.