ಚೀನಾದಲ್ಲಿ ಕೊರೋನಾದ ಕೇವಲ 13 ರೋಗಿಗಳು ಪತ್ತೆಯಾಗಿದ್ದಕ್ಕೆ ಶಾಲೆಗಳನ್ನು ಮುಚ್ಚಲಾಗಿದೆ, ಹಾಗೂ ವಿಮಾನ ಹಾರಾಟ ಸ್ಥಗಿತ !

* ಕೊರೋನಾದ ಕಡಿಮೆ ರೋಗಿಗಳು ಪತ್ತೆಯಾದರೂ ಕೂಡಲೇ ಕಠಿಣ ಕ್ರಮ ಕೈಗೊಳ್ಳುವ ಚೀನಾದಿಂದ ಭಾರತವು ಯಾವಾಗ ಕಲಿಯುವುದು ? – ಸಂಪಾದಕರು 

ಬಿಚಿಂಗ (ಚೀನಾ) – ಚೀನಾದಲ್ಲಿ ಮತ್ತೆ ಕೋರೋನಾದ ರೋಗಿಗಳು ಪತ್ತೆಯಾಗಿದ್ದಾರೆ. ಪ್ರವಾಸಿಗರ ಮೂಲಕ ಕೊರೋನಾವು ಹರಡುತ್ತಿದೆ ಎಂದು ಹೇಳಲಾಗುತ್ತಿದೆ. ಆದ್ದರಿಂದ ಶಾಲೆಗಳನ್ನು ಪುನಃ ಮುಚ್ಚಲಾಗಿದೆ. ವಿಮಾನ ಹಾರಾಟ ನಿಲ್ಲಿಸಲಾಗಿದೆ. ಚೀನಾದಲ್ಲಿ ಪ್ರಸ್ತುತ ಆಂತರಿಕ ಸೋಂಕು ಹರಡಿಲ್ಲ. ಆದರೆ ಸತತ 5 ದಿನ 13 ಹೊಸ ರೋಗಿ ಪತ್ತೆಯಾಗಿದ್ದಾರೆ.

ಚೀನಾದ ಉತ್ತರ ಮತ್ತು ವಾಯುವ್ಯ ಭಾಗದ ಪ್ರವಾಸಕ್ಕಾಗಿ ಬಂದಿರುವ ಹಿರಿಯ ನಾಗರಿಕರ ಒಂದು ಗುಂಪಿನಿಂದ ಈ ಸೋಂಕು ಹರಡಿದೆ ಎಂದು ಹೇಳಲಾಗುತ್ತಿದೆ. ಈ ಗುಂಪು ಮೊದಲು ಶಾಂಘೈಗೆ ಬಂದಿತ್ತು. ಅಲ್ಲಿಂದ ಅವರು ಗಾಂಸ್ಸು ಪ್ರಾಂತದಲ್ಲಿನ ಶೀಯಾನ ಮತ್ತು ಇನ್ನರ್ ಮಂಗೊಲಿಯಾಗೆ ಹೋದರು. ಈ ನಾಗರಿಕರ ಸಂಪರ್ಕಕ್ಕೆ ಬಂದಿರುವ ಅನೇಕ ಜನರು ಕೊರೋನಾ ಪೀಡಿತರಾಗಿರುವುದು ಕಂಡುಬಂದಿದೆ. ಇವರಲ್ಲಿ ಕೆಲವರು ರಾಜಧಾನಿ ಬೀಜಿಂಗ್‍ನಲ್ಲಿ ಇದ್ದಾರೆ. ಈ ಹಿನ್ನಲೆಯಲ್ಲಿ ಚೀನಾವು ಪರೀಕ್ಷಣೆಯ ಸಂಖ್ಯೆಗಳನ್ನು ಹೆಚ್ಚಿಸಿದೆ. ಜನಜಂಗುಳಿಯ ಸ್ಥಳಗಳು, ಪ್ರವಾಸಿ ತಾಣಗಳು, ಶಾಲೆ, ಮನೋರಂಜನೆಯ ಸ್ಥಳಗಳನ್ನು ಮುಚ್ಚಲಾಗಿದೆ. ಸೋಂಕು ಹೆಚ್ಚಿರುವ ಸ್ಥಳಗಳಲ್ಲಿ ಸಂಚಾರ ನಿರ್ಬಂಧ ಹೇರಲಾಗಿದೆ. ಮನೆಯಿಂದ ಹೊರಗೆ ಹೋಗಬೇಕಿದ್ದಲ್ಲಿ ಕೊರೋನಾ ಪರೀಕ್ಷಣೆ ಅನಿವಾರ್ಯ ಮಾಡಲಾಗಿದೆ.