ಬಾಂಗ್ಲಾದೇಶಕ್ಕೆ ಗುಜರಿಯ ಶಸ್ತ್ರಗಳನ್ನು ಮಾರಾಟ ಮಾಡುತ್ತಿದೆ ಚೀನಾ ! – ತಸ್ಲೀಮಾ ನಸ್ರೀನ್ ಇವರ ಹೇಳಿಕೆ

ಚೀನಾ ಇಲ್ಲಿಯ ವರೆಗೆ ಯಾವೆಲ್ಲ ದೇಶಗಳಿಗೆ ಶಸ್ತ್ರಾಸ್ತ್ರಗಳು, ಕೊರೋನಾ ಬಗೆಗಿನ ಉಪಕರಣ ಮುಂತಾದವು ಮಾರಾಟ ಮಾಡಿದೆಯೋ ಅದೆಲ್ಲವೂ ಕಳಪೆ ಗುಣಮಟ್ಟದ್ದು ಎಂದು ಬೆಳಕಿಗೆ ಬಂದಿದೆ. ಚೀನಾ ವಿಶ್ವಾಸದ್ರೋಹಿ ಆಗಿದೆ, ಇದು ಈಗ ಜಗತ್ತಿಗೆ ತಿಳಿಯುತ್ತಿದೆ ! – ಸಂಪಾದಕರು 

ಬಾಂಗ್ಲಾದೇಶದ ಲೇಖಕಿಯ ತಸ್ಲೀಮಾ ನಸ್ರೀನ್

ನವ ದೆಹಲಿ – ಬಾಂಗ್ಲಾದೇಶವು ಚೀನಾದಿಂದ ಶಸ್ತ್ರಾಸ್ತ್ರ ಖರೀದಿಸಲು ಕೋಟಿಗಟ್ಟಲೆ ಡಾಲರ್ಸ ಖರ್ಚು ಮಾಡಿದೆ. ಈಗ ಚೀನಾವು ನೀಡಿರುವ ಶಸ್ತ್ರಾಸ್ತ್ರಗಳನ್ನು ಬಾಂಗ್ಲಾದೇಶದ ತಜ್ಞರು ಪರೀಕ್ಷಿಸುತ್ತಿದ್ದಾರೆ. ಅವರು, ‘ಈ ಶಾಸ್ತ್ರಾಸ್ತ್ರಗಳು ಏನು ಕೆಲಸ ಮಾಡುತ್ತಿಲ್ಲ’ ಎಂದು ಹೇಳುತ್ತಿದ್ದಾರೆ. ಇಂತಹ ಶಸ್ತ್ರಾಸ್ತ್ರಗಳನ್ನು ಚೀನಾವು ಗುಜರಿಯಿಂದ ಕಳಿಸುತ್ತಿದೆ ಎಂದು ಬಾಂಗ್ಲಾದೇಶದ ಲೇಖಕಿಯ ತಸ್ಲೀಮಾ ನಸ್ರೀನ್ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.