ನವದೆಹಲಿ – ಲಾಡಖನ ಗಲವಾನ ಕಣಿವೆಯಲ್ಲಿ ಕಳೆದ ವರ್ಷ ಭಾರತ ಮತ್ತು ಚೀನಾದ ಸೈನಿಕರ ನಡುವೆ ನಡೆದ ಘರ್ಷಣೆಯ ನಂತರ ಈವರೆಗೆ ಅಲ್ಲಿ ಉದ್ವಿಗ್ನ ಸ್ಥಿತಿ ಮುಂದುವರೆದಿದೆ. ಅಲ್ಲಿ ಉಭಯ ದೇಶಗಳಿಂದ ಅಗಾಧ ಸಂಖ್ಯೆಯಲ್ಲಿ ಸೈನಿಕರನ್ನು ನೇಮಿಸಲಾಗಿದೆ. ಅಲ್ಲಿಯ ಅನೇಕ ಬಂಕರ್‌ಗಳು ಎತ್ತರದಲ್ಲಿವೆ. ಭಾರತೀಯ ಸೈನಿಕರು ಇಷ್ಟು ಎತ್ತರದ ಬಂಕರ್‌ಗಳಲ್ಲಿ ವಾಸವಿರುವ ಅನುಭವ ಮತ್ತು ಪ್ರಶಿಕ್ಷಣ ಪಡೆದಿದ್ದಾರೆ; ಆದರೆ ಚೀನಾ ಸೈನಿಕರಿಗೆ ಇದು ಬಹಳ ಕಷ್ಟವಾಗುತ್ತ್ತಿದೆ. ಅಲ್ಲಿ ನೇಮಕವಾಗಿರುವ ಅನೇಕ ಸೈನಿಕರು ಸಾವನ್ನಪ್ಪುತ್ತಿರುವುದು ಬೆಳಕಿಗೆ ಬಂದಿದೆ. ಇದಕ್ಕೆ ಆಮ್ಲಜನಕದ ಕೊರತೆ ಇದು ಒಂದು ಕಾರಣವಾಗಿದೆ. ಇದರಿಂದ ಚೀನಾ ಚಿಂತೆಗೆ ಒಳಗಾಗಿದೆ.
बॉर्डर पर अपने सैनिकों की बलि देकर चीन फिर कर रहा कायराना हरकत?#LAC | #China | #IndianArmy | @manishmedia https://t.co/AnKKnoWbAi
— Zee News (@ZeeNews) November 2, 2021
ಹಿಮಾಲಯದಲ್ಲಿ ಎತ್ತರದ ಬಂಕರ್‌ನ ಸ್ಥಳಗಳಲ್ಲಿ ಆಮ್ಲಜನಕದ ಕೊರತೆಯಿದೆ. ಆದ್ದರಿಂದ ಚೀನಾ ಸೈನಿಕರಿಗೆ ಉಸಿರಾಡಲು ತೊಂದರೆ ಆಗುತ್ತಿದೆ. ಆದ್ದರಿಂದ ಚೀನಾವು ಈಗ ತನ್ನ ಸೈನಿಕರಿಗಾಗಿ ವಿಶೇಷವಾಗಿ ತಯಾರಿಸಿರುವ ಆಮ್ಲಜನಕ ಉಪಕರಣಗಳು ಪೂರೈಕೆ ಮಾಡಲಿದೆ.