ಅಫ್ಘಾನಿಸ್ತಾನದ ಪ್ರಕರಣದಲ್ಲಿ ಭಾರತದಿಂದ ಇಂದು ೮ ದೇಶಗಳ ಜೊತೆ ಸಭೆ

  • ಸಭೆಯಲ್ಲಿ ಅಫ್ಘಾನಿಸ್ತಾನದ ತಾಲಿಬಾನಿ ಸರಕಾರಕ್ಕೆ ಮಾನ್ಯತೆ ನೀಡದಿರುವ ದೇಶಗಳ ಸಮಾವೇಶ

  • ಚೀನಾ ಮತ್ತು ಪಾಕಿಸ್ತಾನದಿಂದ ಈ ಸಭೆಯಲ್ಲಿ ಭಾಗವಹಿಸಲು ನಕಾರ

ನವ ದೆಹಲಿ – ಭಾರತವು ಅಫಘಾನಿಸ್ತಾನದ ವಿಷಯವಾಗಿ ನವೆಂಬರ್ ೧೦ ರಂದು ವಿಶೇಷ ಅಂತರಾಷ್ಟ್ರೀಯ ಸಭೆಯನ್ನು ಆಯೋಜಿಸಿದೆ. ಈ ಸಭೆಯಲ್ಲಿ ಭಾರತ ಸಹಿತ ಇರಾನ್, ರಶಿಯಾ, ಉಜ್ಬೇಕಿಸ್ತಾನ್, ಕಜಾಕಿಸ್ತಾನ್, ತುರ್ಕೆಮೆನಿಸ್ತಾನ್, ತಾಜಿಕಿಸ್ತಾನ್ ಮತ್ತು ಕಿರ್ಗಿಸ್ತಾನ್ ಈ ದೇಶದ ಪ್ರತಿನಿಧಿಗಳು ಭಾಗವಹಿಸುವರು. ಈ ಸಭೆಯನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಟ್ಟದಲ್ಲಿ ಆಯೋಜಿಸಲಾಗಿದೆ. ಈ ಸಭೆಯ ಆಮಂತ್ರಣ ದೊರೆತರೂ ಪಾಕಿಸ್ತಾನ ಮತ್ತು ಚೀನಾ ಇದರಲ್ಲಿ ಭಾಗವಹಿಸಲು ನಿರಾಕರಿಸಿದೆ. ಚೀನಾ ಈ ಸಭೆಯ ಸಮಯದಲ್ಲಿ ಬೇರೆ ಕಾರ್ಯಕ್ರಮವಿರುವುದರಿಂದ ಭಾಗವಹಿಸಲು ಸಾಧ್ಯವಿಲ್ಲ ಎಂದು ಕಾರಣ ನೀಡಿದೆ. ಈ ಸಭೆಯ ಅಧ್ಯಕ್ಷತೆಯನ್ನು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ಡೋವಾಲ ವಹಿಸಿಕೊಂಡಿದ್ದಾರೆ.

ಈ ಸಭೆಗೆ ಅಫಘಾನಿಸ್ತಾನಕ್ಕೆ ಆಮಂತ್ರಣ ನೀಡಿಲ್ಲ. ಈ ವಿಷಯವಾಗಿ, ಸಭೆಯಲ್ಲಿ ಭಾಗವಹಿಸುವ ೮ ದೇಶಗಳಲ್ಲಿ ಯಾರೂ ಅಫಘಾನಿಸ್ತಾನದ ತಾಲಿಬಾನ್ ಸರಕಾರಕ್ಕೆ ಮಾನ್ಯತೆ ನೀಡಿಲ್ಲ ಎಂದು ಹೇಳಲಾಗಿದೆ. ಭಾರತವು ಸಹ ಇದು ವರೆಗೆ ತಾಲಿಬಾನ್ ಸರಕಾರಕ್ಕೆ ಮಾನ್ಯತೆ ನೀಡಿಲ್ಲ.