ಬೀಜಿಂಗ (ಚೀನಾ) – ಕಳೆದ ವರ್ಷ ಲಡಾಖ್‍ನಲ್ಲಿ ಗಲವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದಿರುವ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಹುತಾತ್ಮರಾಗಿದ್ದರು ಹಾಗೂ ಚೀನಾದ 45 ಕ್ಕಿಂತಲೂ ಹೆಚ್ಚಿನ ಸೈನಿಕರು ಹತರಾಗಿದ್ದರು; ಆದರೆ ಚೀನಾ ಅಧಿಕೃತವಾಗಿ ಅವರ ಸೈನಿಕರ ಮೃತ್ಯು ಆಗಿರುವುದು ನಿರಾಕರಿಸಿತ್ತು. ಆದರೂ ಗೌಪ್ಯ ಮಾಹಿತಿಗನುಸಾರ ಚೀನಾ ಮೃತಪಟ್ಟಿರುವ ಸೈನಿಕರ ಒಂದು ಸ್ಮಾರಕ ನಿರ್ಮಿಸಿದ್ದು ಬೆಳಕಿಗೆ ಬಂದಿತ್ತು. ಈ ಸ್ಮಾರಕಗಳ ಮತ್ತು ಅವರನ್ನು ಹೂಳಿರುವ ಸ್ಥಳದ ಛಾಯಾಚಿತ್ರಗಳನ್ನು ವ್ಯಕ್ತಿಯೊಬ್ಬನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದನು. ಚೀನಾದ ಝಿಂಜಿಯಾಂಗ್‍ನಲ್ಲಿನ ಸ್ಥಳೀಯ ನ್ಯಾಯಾಲಯವು ಈ ಪ್ರಕರಣದಲ್ಲಿ ಆ ವ್ಯಕ್ತಿಗೆ 7 ತಿಂಗಳ ಜೈಲು ಶಿಕ್ಷೆಯನ್ನು ನೀಡಿದೆ.
Chinese blogger sentenced to 7 months for ‘insulting’ PLA soldiers who died in Galwan clash https://t.co/wY7uLXQDaI
— TOI World News (@TOIWorld) November 15, 2021