ಭಾರತದಲ್ಲಿ ಮುಸಲ್ಮಾನರ ವಿರುದ್ಧ ಏನೇ ನಡೆದರೂ, ‘ಇಸ್ಲಾಮ್ ಅಪಾಯದಲ್ಲಿದೆ’ ಎಂದು ಬೊಬ್ಬೆ ಹೊಡೆಯುವ ಮುಸಲ್ಮಾನ ನಾಯಕರು ಮತ್ತು ಅವರ ಸಂಘಟನೆಗಳು ಈಗ ತಮ್ಮ ಚೀನಿ ಬಾಂಧವರಿಗಾಗಿ ಏಕೆ ಏನೂ ಮಾತನಾಡುತ್ತಿಲ್ಲ ? – ಸಂಪಾದಕರು
ಬೀಜಿಂಗ್ (ಚೀನಾ) – ಚೀನಾದಲ್ಲಿ ಈಗ ಮಸೀದಿಗಳ ಮೇಲಿರುವ ಗುಮ್ಮಟ ಮತ್ತು ಮಿನಾರಗಳನ್ನು ತೆರವು ಗೊಳಿಸಲಾಗುತ್ತಿದೆ. ಆ ಸ್ಥಳಗಳಲ್ಲಿ ಚೀನಿ ಪದ್ಧತಿಯಂತೆ ಮಿನಾರಗಳನ್ನು ನಿರ್ಮಿಸಲಾಗುತ್ತಿದೆ. ಚೀನಾ ಸರಕಾರವು, ‘ಮಸೀದಿಗಳ ಮೇಲಿನ ಚಿಹ್ನೆಗಳು ಮಧ್ಯಪೂರ್ವ ಏಶಿಯಾದಲ್ಲಿನ ಇಸ್ಲಾಮೀಕರಣದ ಭಾಗ ಎಂದು ಅನಿಸಬಾರದು ಮತ್ತು ಅದು ಹೆಚ್ಚೆಚ್ಚು ಚೀನಿ ಅನಿಸಬೇಕು, ಅದಕ್ಕಾಗಿ ಹೀಗೆ ಮಾಡಲಾಗಿದೆ.’ ಎಂದು ಹೇಳಿದೆ. ಇತ್ತೀಚೆಗೆ ಚೀನಾದಲ್ಲಿ ಪಶ್ಚಿಮ ಕ್ವೀನ್‍ಗಾಯಿ ಪ್ರಾಂತದಲ್ಲಿನ ಶೀನಿಂಗ ನಗರದ ಡಾಗಗುವಾನ್ ಮಸೀದಿಯ ಗುಮ್ಮಟ ಮತ್ತು ಮಿನಾರ್ ತೆರವು ಗೊಳಿಸಲಾಗಿದೆ.
China has been removing Arab-style features from mosques while remodelling them to appear more “Chinese”https://t.co/1DnbIq1caT
— WION (@WIONews) October 26, 2021
ಚೀನಾ ದೇಶದಲ್ಲಿ ಮಸೀದಿಗಳಲ್ಲಿರುವ ಇಸ್ಲಾಮಿ ವಾಸ್ತುಕಲೆಯ ಪ್ರತೀಕ, ಉದಾ. ಗುಮ್ಮಟ ಮಿನಾರ ಇತ್ಯಾದಿಗಳನ್ನು 1990 ನೆಯ ದಶಕದಿಂದ ತೆರವುಗೊಳಿಸುವ ಕಾರ್ಯಾಚರಣೆ ನಡೆಯುತ್ತಿದೆ. ಮೊದಲು ಮಸೀದಿಯ ಹತ್ತಿರ ಇರುವ ಜನರನ್ನು ಸ್ಥಳಾಂತರಿಸಲಾಯಿತು. ನಂತರ ಅಲ್ಲಿಯ ವಾಸ್ತುಶಿಲ್ಪ ಬದಲಾಯಿಸಲು ಪ್ರಾರಂಭಿಸಲಾಗಿದೆ. ರಾಷ್ಟ್ರಪತಿ ಶೀ ಜಿನ್ ಪಿಂಗ್ ಇವರ ಕಾಲದಲ್ಲಿ ಈ ಪ್ರಕಾರ ಇನ್ನು ಹೆಚ್ಚಾಯಿತು. ಜಿನ್ ಪಿಂಗ್ ಇವರು ಈ ಕಾರ್ಯಾಚರಣೆಗೆ ಸಾಂಸ್ಕೃತಿಕ ಏಕೀಕರಣ ಎಂದು ಹೆಸರು ನೀಡಿದ್ದಾರೆ. ಇತರ ಧರ್ಮದ ಸಾಂಸ್ಕೃತಿಕ ಪ್ರತೀಕಗಳನ್ನು ತೆರವುಗೊಳಿಸುವುದು ಶುರುಮಾಡಿದೆ.