ಮುಂದಿನ ದಲೈ ಲಾಮಾರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಚೀನಾಗೆ ಹಸ್ತಕ್ಷೇಪ ಮಾಡುವ ಯಾವುದೇ ಅಧಿಕಾರವಿಲ್ಲ ! – ತವಾಂಗ್ ಮಠದ ಮುಖ್ಯಸ್ಥ, ಗ್ಯಾಂಗ್‍ಬುಂಗ್ ರಿನ್‍ಪೋಚೆ

ಬಲಭಾಗದಲ್ಲಿ ತವಾಂಗ್ ಮಠದ ಮುಖ್ಯಸ್ಥ ಗ್ಯಾಂಗ್‍ಬುಂಗ್ ರಿನ್‍ಪೋಚೆ

ತವಾಂಗ್ (ಅರುಣಾಚಲ ಪ್ರದೇಶ) – ಮುಂದಿನ ದಲೈ ಲಾಮಾ ಅವರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡಲು ಚೀನಾಕ್ಕೆ ಯಾವುದೇ ಅಧಿಕಾರವಿಲ್ಲ, ಎಂದು ಇಲ್ಲಿನ ತವಾಂಗ್ ಮಠದ ಮುಖ್ಯಸ್ಥ ಗ್ಯಾಂಗ್‍ಬುಂಗ್ ರಿನ್‍ಪೋಚೆ ಇವರು ಚೀನಾದ ಕಿವಿ ಹಿಂಡಿದ್ದಾರೆ. ರಿನಪೊಚೆ ಇವರು ಮಾತನಾಡುತ್ತಾ, ಚೀನಾ ಸರಕಾರವು ಯಾವುದೇ ಧರ್ಮವನ್ನು ನಂಬುವುದಿಲ್ಲ. ಉತ್ತರಾಧಿಕಾರಿಯನ್ನು ನೇಮಿಸುವ ಸೂತ್ರವು ಆಧ್ಯಾತ್ಮಿಕವಾಗಿದೆ. ಆದ್ದರಿಂದ, ಚೀನಾಗೆ ಈ ಅಧಿಕಾರವೇ ಇಲ್ಲ ಎಂದು ಹೇಳಿದ್ದಾರೆ.

ಗ್ಯಾಂಗಬುಂಗ್ ರಿನ್‍ಪೋಚೆ ತಮ್ಮ ಮಾತನ್ನು ಮುಂದುವರೆಸುತ್ತಾ, ಚೀನಾದ ವಿಸ್ತರಣಾ ನೀತಿಗೆ ಉತ್ತರಿಸಬೇಕಾಗಿದೆ. ಅಲ್ಲದೆ, ಭಾರತ ಸರಕಾರವು ಚೀನಾದೊಂದಿಗೆ ತಾಗಿರುವ ಪ್ರತ್ಯಕ್ಷ ನಿಯಂತ್ರಣ ರೇಖೆಯ ಮೇಲೆ ಸೂಕ್ಷ್ಮವಾಗಿ ನಿಗಾ ಇಡಬೇಕಿದೆ ಎಂದು ಹೇಳಿದರು.