|
ಬೀಜಿಂಗ (ಚೀನ) – ಚೀನಾ ಅತ್ಯಾಧುನಿಕ ‘ಟೈಪ ೦೫೪’ ಯುದ್ಧನೌಕೆಯನ್ನು ಪಾಕಿಸ್ತಾನಕ್ಕೆ ನೀಡಲಿದೆ. ಮುಂದಿನ ೩ ವರ್ಷಗಳಲ್ಲಿ ಪಾಕ್‌ಗೆ ಇನ್ನೂ ೩ ಯುದ್ಧ ನೌಕೆಗಳನ್ನು ನೀಡಲಿದೆ. ಈ ಹಿಂದೆ ಚೀನಾವು ಪಾಕಗೆ ‘ಜೆಎಫ್-೧೭ ಎಂಬ ನಾಲ್ಕನೇಯ ಶ್ರೇಣಿಯ ಯುದ್ಧ ವಿಮಾನವನ್ನು ವಿಕಸಿತಗೊಳಿಸಲು ಸಹಾಯ ಮಾಡಿತ್ತು. ಜೆಎಫ್-೧೭ ಇದು ಪಾಕಿಸ್ತಾನ ವಾಯುದಳಕ್ಕೆ ಸೇರಿದ ಮಹತ್ವವಾದ ಯುದ್ಧವಿಮಾನವಾಗಿದೆ.
China State Shipbuilding Corporation Limited (CSSC) while handing over the warship to the Pakistan Navy said it is the ‘largest and most advanced warship ever exported’https://t.co/PiC73jTNy0
— WION (@WIONews) November 9, 2021
‘ಟೈಪ್ ೦೫೪’ ಅಂದಾಜು ೪ ಸಾವಿರ ಟನ್ ತೂಕದ ಯುದ್ಧನೌಕೆಯು ಜಗತ್ತಿನಲ್ಲಿ ಅತ್ಯಾಧುನಿಕ ಯುದ್ಧನೌಕೆಗಳ ಪೈಕಿ ಒಂದಾಗಿದೆ ಎಂದು ತಿಳಿಯಲಾಗುತ್ತದೆ. ಈ ಯುದ್ಧನೌಕೆಯನ್ನು ರಡಾರ್.ಗೂ ಪತ್ತೆಯಾಗದಿರುವಂತೆ ರಚಿಸಲಾಗಿದೆ. ಭೂಮಿಯ ಮೇಲೆ ಮತ್ತು ಗಾಳಿಯಲ್ಲಿ ನಾನಾವಿಧದ ಕ್ಷಿಪಣಿಗಳನ್ನು ಹಾರಿಸುವ ಕ್ಷಮತೆ ಈ ಯುದ್ಧನೌಕೆಗಿದ್ದು ಜಲಾಂತರ್ಗಾಮಿ ನೌಕೆಯ ವಿರುದ್ಧ ಕಾರ್ಯಾಚರಣೆ ನಡೆಸಲು ಕೂಡ ಈ ಯುದ್ಧನೌಕೆಯನ್ನು ಉತ್ಕೃಷ್ಟವೆಂದು ತಿಳಿಯಲಾಗುತ್ತದೆ. ಇಂತಹ ೨೫ ಕ್ಕಿಂತ ಹೆಚ್ಚು ಯುದ್ಧನೌಕೆಗಳು ಚೀನಾದ ನೌಕಾಪಡೆಯ ಬಳಿ ಸಕ್ರಿಯವಾಗಿದೆ.