ಭಾರತ ವಿರೋಧಿ ಮತ್ತು ಮೋದಿ ವಿರೋಧಿ ವಿಚಾರಸರಣಿಯ ವರದಿಗಾರರು ಬೇಕಾಗಿದ್ದಾರೆ ! – ‘ನ್ಯೂಯಾರ್ಕ್ ಟೈಮ್ಸ್’ನ ಜಾಹಿರಾತು

ಅಮೇರಿಕಾದ ‘ನ್ಯೂಯಾರ್ಕ್ ಟೈಮ್ಸ್’ ಈ ದೈನಿಕವು ವರದಿಗಾರರು ಬೇಕಾಗಿದ್ದಾರೆ ಎಂದು ಜಾಹೀರಾತನ್ನು ನೀಡುತ್ತಾ ಅದರಲ್ಲಿ ‘ಭಾರತ ವಿರೋಧೀ ಮತ್ತು ಮೋದಿ ವಿರೋಧಿ’ ವಿಚಾರಸರಣಿಯವರು ಅರ್ಹರಾಗಿದ್ದಾರೆ ಎಂದು ಅರ್ಹತೆಯನ್ನು ನೀಡಿದೆ. ಜುಲೈ ೧ ರಂದು ಈ ಜಾಹಿರಾತನ್ನು ಪ್ರಕಟಿಸಲಾಯಿತು. ದಕ್ಷಿಣ ಏಶಿಯಾ ಉದ್ಯೋಗದ ಬಗ್ಗೆ ವರದಿಯನ್ನು ಸಂಕಲನ ಮಾಡುವ ಕೆಲಸಕ್ಕಾಗಿ ಈ ಜಾಹೀರಾತನ್ನು ನೀಡಲಾಗಿತ್ತು ದೆಹಲಿಯಿಂದ ಕೆಲಸ ಮಾಡಬೇಕಾಗಲಿದೆ ಎಂದು ಅದರಲ್ಲಿ ಹೇಳಲಾಗಿದೆ.

ಗಲ್ವಾನ್ ಕಣಿವೆಯಲ್ಲಿನ ಸಂಘರ್ಷದ ನಂತರ ಚೀನಾದ ಸೈನ್ಯಕ್ಕೆ ಇನ್ನೂ ಉತ್ತಮವಾದ ತರಬೇತಿಯ ಅವಶ್ಯಕತೆ ಇದೆ ! – ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್

ಪ್ರತ್ಯಕ್ಷ ಗಡಿರೇಖೆಯಲ್ಲಿರುವ ಗಲ್ವಾನ್ ಕಣಿವೆಯಲ್ಲಿ ಹಾಗೂ ಇತರ ಸ್ಥಳಗಳಲ್ಲಾದ ಚಕಮಕಿಯ ನಂತರ ಚೀನಾದ ಸೈನ್ಯಕ್ಕೆ ಇನ್ನೂ ಸಿದ್ಧತೆಯ ಹಾಗೂ ಒಳ್ಳೆಯ ತರಬೇತಿಯ ಅವಶ್ಯಕತೆ ಇದೆ, ಎಂಬುದು ಅರಿವಾಯಿತು, ಎಂದು ಭಾರತದ ಚೀಫ್ ಆಫ್ ಡಿಫೆನ್ಸ್ ಜನರಲ ಬಿಪಿನ ರಾವತ್ ಹೇಳಿದರು.

ಲಡಾಖ್ ಗಡಿಯಲ್ಲಿ ಭಾರತವೇ ಹಿಂದೆ ಸಾಗುತ್ತಿದ್ದು ಚೀನಾವು ಮುಂದೆ ಸರಿಯುತ್ತಿದೆ ! – ಡಾ. ಸುಬ್ರಹ್ಮಣ್ಯಂ ಸ್ವಾಮಿಯ ಹೇಳಿಕೆ

ಲಡಾಖ್‍ನಲ್ಲಿ ಸಂಘರ್ಷ ನಡೆದ ಸ್ಥಳದಿಂದ ಭಾರತೀಯ ಸೇನೆಯು ಮಾತ್ರ ಹಿಂದೆ ಸರಿದಿದೆ ಆದರೆ, ಚೀನಾ ಸೇನೆ ಇನ್ನೂ ಇದೆ ಮತ್ತು ಅದು ಮುಂದೆ ಬಂದಿದೆ ಎಂದು ಬಿಜೆಪಿ ಸಂಸದ ಡಾ. ಸುಬ್ರಹ್ಮಣ್ಯಂ ಸ್ವಾಮಿಯವರು ಟ್ವೀಟ್ ಮಾಡಿದ್ದಾರೆ.

ಲಡಾಖ್ ಗಡಿಯಲ್ಲಿ ಬೀಡುಬಿಟ್ಟಿದ್ದ ಶೇಕಡಾ ೯೦ ರಷ್ಟು ಸೈನಿಕರು ಹೆಪ್ಪುಗಟ್ಟುವಂತಹ ಚಳಿಯಿಂದ ಅನಾರೋಗ್ಯಪೀಡಿತರಾದ ಕಾರಣ ಅವರನ್ನು ವಾಪಾಸು ಕರೆಸಿಕೊಂಡ ಚೀನಾ

ಹೆಪ್ಪುಗಟ್ಟುವಂತಹ ಚಳಿಯಿಂದ ಲಡಾಖ್ ಗಡಿಯಲ್ಲಿ ಬೀಡುಬಿಟ್ಟಿರುವ ಚೀನಾದ ಶೇ. ೯೦ ರಷ್ಟು ಸೈನಿಕರನ್ನು ವಾಪಸ್ ಕರೆಸಿಕೊಳ್ಳಲಾಗಿದೆ. ಕಳೆದ ವರ್ಷ ಗಾಲ್ವಾನ್ ಕಣಿವೆಯಲ್ಲಿ ಸಂಘರ್ಷದ ನಂತರ ಚೀನಾ ೫೦೦೦೦ ಕ್ಕೂ ಹೆಚ್ಚು ಸೈನಿಕರನ್ನು ಅಲ್ಲಿ ನಿಯೋಜಿಸಿತ್ತು. ವಾಪಸ ಕರೆಸಲಾದ ಸೈನಿಕರ ಜಾಗದಲ್ಲಿ ಇತರ ಸ್ಥಳಗಳಲ್ಲಿ ಬೀಡುಬಿಟ್ಟಿರುವ ಸೈನಿಕರನ್ನು ಲಡಾಖ್ ಗಡಿಗೆ ಕರೆತರಲಾಗಿದೆ.

ಚೀನಾದಿಂದ ಗಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರ ಸಾವಿನ ಸಂಖ್ಯೆಯ ಮೇಲೆ ಸಂದೇಹ ಪಟ್ಟಿದ್ದ ಬ್ಲಾಗರ್ ನ ಬಂಧನ

ಕಳೆದ ವರ್ಷ ಲಡಾಖ್‍ನ ಗಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆಯಲ್ಲಿ ಮೃತಪಟ್ಟ ಚೀನಾದ ಸೈನಿಕರ ಸಂಖ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬ್ಲಾಗರ್ ನನ್ನು ಚೀನಾ ಬಂಧಿಸಿದೆ. ಆತನಿಗೆ ೮ ತಿಂಗಳು ಶಿಕ್ಷೆ ವಿಧಿಸಲಾಗಿದೆ.

ಚೀನಾದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು

ಕೊರೊನಾ ಆರಂಭವಾದ ಚೀನಾದಲ್ಲಿ ಕೊರೋನಾ ಸೋಂಕು ಮತ್ತೆ ಹರಡುತ್ತಿದೆ. ಕೊರೋನಾ ರೋಗಿಗಳು ಮತ್ತೆ ಕಾಣಿಸಿಕೊಂಡಿದ್ದರಿಂದ ಚೀನಾದ ಗ್ವಾಂಗದೊಂಗ ಪ್ರದೇಶದಲ್ಲಿ ಹಲವಾರು ನಿರ್ಬಂಧಗಳನ್ನು ಹೇರಲಾಗಿದೆ.