ಅರುಣಾಚಲ ಪ್ರದೇಶ: ಕಳೆದ ೧೦ ದಿನಗಳಲ್ಲಿ ಪಾಕಿಸ್ತಾನಕ್ಕಾಗಿ ಗೂಢಚಾರಿಕೆ ನಡೆಸುತ್ತಿದ್ದ ೪ ಮಂದಿಯ ಬಂಧನ !
ಬಂಧಿತ ಶಂಕಿತರು ಸ್ಥಳೀಯ ಮುಸಲ್ಮಾನ ಸಮುದಾಯಗಳಲ್ಲಿ ಬೆರೆತು ‘ಸ್ಲೀಪರ್ ಸೆಲ್’ (ರಹಸ್ಯವಾಗಿ ಭಯೋತ್ಪಾದಕರಿಗೆ ಸಹಾಯ ಮಾಡುವ ಮತಾಂಧರ ಸ್ಥಳೀಯ ಗುಂಪುಗಳು) ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿದ್ದರು. ಕೆಲವು ಬಾಂಗ್ಲಾದೇಶಿ ಯುವಕರ ಪಾತ್ರವೂ ಸಂಶಯಾಸ್ಪದವಾಗಿದೆ ಎಂದು ಪರಿಗಣಿಸಲಾಗಿದೆ.