ಗಾಜಿಯಾಬಾದ್(ಉತ್ತರಪ್ರದೇಶ)ನಲ್ಲಿ ನಡೆದ ಬಿಜೆಪಿಯ ಸಭೆಯಲ್ಲಿ ೨ ನಾಯಕರ ಹೊಡೆದಾಟ !

ಜನಾಂಗೀಯ ಅವಹೇಳನ ಮಾಡಿದರೆಂದು ಬಿಜೆಪಿಯ ಕಾರ್ಯಕಾರಣಿ ಸಭೆಯಲ್ಲಿ ೨ ನಾಯಕರ ನಡುವೆ ಜೋರಾಗಿ ಹೊಡೆದಾಟ ನಡೆಯಿತು. ಅವರು ಪರಸ್ಪರರಿಗೆ ಕಾಲುಗಳಿಂದ ಒದ್ದರು. ಈ ಪ್ರಕರಣದಲ್ಲಿ ಓರ್ವ ಕಾರ್ಯಕರ್ತನ ಮೇಲೆಯೂ ಹಲ್ಲೆ ಮಾಡಿದ್ದರಿಂದ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು.

ಅಸ್ಸಾಂನಲ್ಲಿಯೂ ಬರಲಿದೆ ‘ಲವ್ ಜಿಹಾದ್’ ವಿರುದ್ಧ ಕಾನೂನು !

ಜಿಹಾದ್ ವಿರೋಧಿ ಕಾನೂನು ಜಾರಿಗೆ ತಂದ ದೇಶದಲ್ಲಿ ತಮಿಳುನಾಡು ರಾಜ್ಯ ಮೊದಲನೆಯದು; ಆದಾಗ್ಯೂ, ೨೦೦೩ ರಲ್ಲಿ ಅವರು ಅದನ್ನು ರದ್ದುಗೊಳಿಸಿದರು. ಪ್ರಸ್ತುತ, ಉತ್ತರಾಖಂಡ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಅರುಣಾಚಲ ಪ್ರದೇಶ, ರಾಜಸ್ಥಾನ, ಜಾರ್ಖಂಡ್, ಛತ್ತೀಸಗಡ, ಮಧ್ಯಪ್ರದೇಶ, ಗುಜರಾತ್ ಮತ್ತು ಒಡಿಶಾದಲ್ಲಿ ಜಿಹಾದ್ ವಿರೋಧಿ ಕಾನೂನುಗಳನ್ನು ಜಾರಿಗೆ ತರಲಾಗಿದೆ.

‘ಅಲ್ಲಾಹನು ಎಲ್ಲರನ್ನೂ ಜನ್ಮ ನೀಡುತ್ತಾನೆ ಮತ್ತು ಅವರನ್ನು ಪೋಷಿಸುತ್ತಾನೆ !'(ಅಂತೆ)

‘ಅಲ್ಲಾಹನು ಪ್ರತಿಯೊಬ್ಬರಿಗೆ ಜನ್ಮ ನೀಡುತ್ತಾನೆ ಮತ್ತು ಅವರನ್ನು ಪೋಷಿಸುತ್ತಾನೆ.’ ವ್ಯಕ್ತಿ ಬಡವನಾಗಿರಲಿ ಅಥವಾ ಶ್ರೀಮಂತನಾಗಿರಲಿ ಪೋಷಿಸುತ್ತಾನೆ. ಅವರನ್ನು ವಿರೋಧಿಸುವುದು ಸೂಕ್ತವಲ್ಲ. ಇದರಿಂದ ಹಾನಿಯೇ ಆಗುತ್ತದೆ. ಇದು ಜನರ ಹಿತದ ಕಾನೂನು ಅಲ್ಲ’, ಎಂಬಂತಹ ಹುರುಳಿಲ್ಲದ ಟೀಕೆಯನ್ನು ಮಾಡಿದರು.

ಉತ್ತರಪ್ರದೇಶದ ಬಿಜೆಪಿ ಸರಕಾರದಿಂದ ಜನಸಂಖ್ಯಾನಿಯಂತ್ರಣ ಕಾಯ್ದೆಯ ಕರಡು ಸಿದ್ಧ !

ಉತ್ತರಪ್ರದೇಶದ ಸರಕಾರದಿಂದ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಜ್ಯಾರಿಗೆ ತರಲಾಗುತ್ತಿದೆ. ಈ ಕಾಯ್ದೆಯಿಂದ ೨ ಕ್ಕಿಂತ ಹೆಚ್ಚು ಮಕ್ಕಳಿರುವವರಿಗೆ ಸರಕಾರದ ಅನುದಾನ ಅಥವಾ ಯೋಜನೆಗಳ ಲಾಭ ಪಡೆಯಲು ಸಾಧ್ಯವಿಲ್ಲ, ಅವರಿಗೆ ಕೆಲಸದಲ್ಲಿ ಭತ್ಯೆ ಸಿಗುವುದಿಲ್ಲ ಮತ್ತು ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಈ ಕಾಯ್ದೆಯ ಕರಡನ್ನು ನಿರ್ಮಿಸಲಾಗಿದೆ.

ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರ ಖಾತೆಯನ್ನು ಒಂದು ಗಂಟೆಗಾಗಿ ಬಂದ್ ಮಾಡಿದ ಟ್ವಿಟರ್‌ !

ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಅವರ ಟ್ವಿಟ್ಟರ್ ಖಾತೆಯನ್ನು ಒಂದು ಗಂಟೆಗಳ ಕಾಲ ಬಂದ್ ಮಾಡಿತ್ತು. ನಂತರ, ಟ್ವಿಟರ್ ರವಿಶಂಕರ್ ಪ್ರಸಾದ್ ಅವರಿಗೆ ಎಚ್ಚರಿಕೆ ನೀಡಿ ಅದನ್ನು ಪುನರಾರಂಭಿಸಿತು.

ಬಿಹಾರದ ಚಿರಾಗ್ ಪಾಸ್ವಾನ್ ರ ವಿರುದ್ಧ ಲೋಕ ಜನಶಕ್ತಿ ಪಕ್ಷದ ಐದೂ ಸಂಸದರಿಂದ ಬಂಡಾಯ !

ಬಿಹಾರದ ಲೋಕ ಜನಶಕ್ತಿ ಪಕ್ಷದ ಮುಖಂಡ ರಾಮ ವಿಲಾಸ ಪಾಸ್ವಾನ್ ಅವರ ನಿಧನದ ನಂತರ ಅವರ ಪಕ್ಷವು ವಿಭಜನೆಯ ಹಾದಿಯಲ್ಲಿದೆ. ಪಕ್ಷದ ಎಲ್ಲಾ ಐದು ಸಂಸದರು ರಾಮ ವಿಲಾಸ ಪಾಸ್ವಾನ್ ಅವರ ಪುತ್ರ ಮತ್ತು ಅವರ ರಾಜಕೀಯ ಉತ್ತರಾಧಿಕಾರಿ ಚಿರಾಗ್ ಪಾಸ್ವಾನ್ ವಿರುದ್ಧ ಬಂಡಾಯ ಎದ್ದಿದ್ದಾರೆ.