ಮುಸಲ್ಮಾನ ಶಿಲ್ಪಿಗಳೆಲ್ಲರೂ ಭಗವಾನ್ ವಿಶ್ವಕರ್ಮನ ವಂಶಸ್ಥರು !

ಭಾಜಪದ ಶಾಸಕ ರಾಮಚಂದ್ರ ಜಾಂಗಡಾರವರ ದಾವೆ

ಭಾಜಪದ ಶಾಸಕ ರಾಮಚಂದ್ರ ಜಾಂಗಡಾರವರ ದಾವೆ

ಮುಝಫ್ಫರನಗರ (ಉತ್ತರಪ್ರದೇಶ) – ಶಿಲ್ಪಿಗಳೆಲ್ಲರೂ ಭಗವಾನ ವಿಶ್ವಕರ್ಮನ ವಂಶಸ್ಥರಾಗಿದ್ದಾರೆ. ಉತ್ತರಪ್ರದೇಶವು ಕೇವಲ ಹಿಂದೂಗಳಷ್ಟೇ ಅಲ್ಲ ಮುಸಲ್ಮಾನ ಶಿಲ್ಪಿಗಳಿಂದಲೂ ಕೂಡ ತುಂಬಿದೆ. ಬಾಬರ್ ತನ್ನ ಜೊತೆಗೆ ಶಿಲ್ಪಿಗಳನ್ನು ಕರೆದುಕೊಂಡು ಬಂದಿರಲಿಲ್ಲ. ಮಧ್ಯಪೂರ್ವದಲ್ಲಿ ಶಿಲ್ಪಿಗಳಿರಲು ಸಾಧ್ಯವೇ ಇಲ್ಲ. ಇರಾಕ್ ಹಾಗೂ ಇರಾನ್ ದೇಶದಲ್ಲಿ ಹುಲ್ಲುಕಡ್ಡಿ ಕೂಡ ಬೆಳೆಯುವುದಿಲ್ಲ, ಹೀಗಿರುವಾಗ ಅಲ್ಲಿ ಶಿಲ್ಪಕಲೆ ನಿರ್ಮಾಣವಾಗಲು ಹೇಗೆ ತಾನೆ ಸಾಧ್ಯ? ಅಲ್ಲಿ ಖನಿಜಗಳು ಸಿಗುವುದಿಲ್ಲ. ಅಲ್ಲಿ ಕೇವಲ ಎಣ್ಣೆ ಸಿಗುತ್ತದೆ ಹಾಗೂ ಎಣ್ಣೆಯಲ್ಲಿ ಶಿಲ್ಪಕಲೆ ಮಾಡಲು ಸಾಧ್ಯವಿಲ್ಲ, ಎಂದು ಭಾಜಪದ ರಾಜ್ಯಸಭೆಯ ಶಾಸಕ ಹಾಗೂ ಹಿಂದುಳಿದ ವರ್ಗದ ಆಯೋಗದ ಸದಸ್ಯರಾದ ರಾಮಚಂದ್ರ ಜಾಂಗಡಾರವರು ಹೇಳಿದ್ದಾರೆ. ಅವರು ಇಲ್ಲಿ ರಾಮಪುರೀಯಲ್ಲಿನ ಗೌರವ ಸಮಾರಂಭದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ಜಾಂಗಡಾರವರು ಮುಂದೆ, ಇಲ್ಲಿ ಮುಸಲ್ಮಾನ ಬಾಂಧವರೆಲ್ಲರೂ ಭಗವಾನ್ ವಿಶ್ವಕರ್ಮನ ವಂಶಸ್ಥರಾಗಿದ್ದಾರೆ. ಅವರು ಕಾರಣಾಂತರದಿಂದ ಮತಾಂತರಗೊಂಡಿರಬಹುದು. ನಾನು ಇತಿಹಾಸವನ್ನು ಓದಿದ್ದೇನೆ. ನನಗೆ ಅದಕ್ಕೆ ಕಾರಣ ಕೂಡ ಚೆನ್ನಾಗಿ ತಿಳಿದಿದೆ. ಅನೇಕ ವಿಷಯಗಳು ಕೇವಲ ಹೇಳುವುದಕ್ಕಷ್ಟೇ ಇರುತ್ತದೆ; ಆದರೆ ಒಂದು ವಿಷಯವಂತೂ ಖಚಿತ, ಎಲ್ಲಿ ಶ್ರಮಕ್ಕೆ ಪ್ರತಿಷ್ಠೆ ಹಾಗೂ ಗೌರವ ಸಿಗುವುದಿಲ್ಲವೋ, ಪುರುಷಾರ್ಥಕ್ಕೆ ಗೌರವ ಸಿಗುವುದಿಲ್ಲವೋ, ಅಲ್ಲಿ ವ್ಯಕ್ತಿಯು ಧರ್ಮವನ್ನು ದೂಷಿಸುತ್ತಾನೆ. ಅದನ್ನು ಕೇವಲ ಮುಸಲ್ಮಾನ ಶಿಲ್ಪಿಗರೇ ಮಾಡಿದ್ದಾರೆ ಎಂದಲ್ಲ, ಅದನ್ನು ಬಾಬಾಸಾಹೇಬ ಅಂಬೇಡಕರರವರು ಕೂಡ ಮಾಡಿದ್ದಾರೆ. ‘ನಾನು ಹಿಂದೂ ಎಂದು ಜನಿಸಿದ್ದರೂ ಕೂಡ ಹಿಂದೂವಾಗಿ ಸಾಯುವುದಿಲ್ಲ’, ಎಂದು ಅವರಿಗೆ ಹೇಳಬೇಕಾಗಿ ಬಂತು. ಅವರು ಬ್ಯಾರಿಸ್ಟರ್ ಹಾಗೂ ಅರ್ಥತಜ್ಞರಾಗಿದ್ದರು. ಸಮಾಜದಿಂದ ಅವರಿಗೆ ಸಿಗಬೇಕಾಗಿದ್ದ ಗೌರವ ಸಿಗಲಿಲ್ಲ. ಮುಸಲ್ಮಾನ ಶಿಲ್ಪಿಗಳಿಗೂ ಕೂಡ ಹೀಗೇ ಆಗಿರಬಹುದು. ಗೌರವ ಸಿಗಲಿಲ್ಲ ಎಂದು ಅವರು ಮತಾಂತರದ ಮೂಲಕ ಪ್ರತಿಕ್ರಿಯೆ ನೀಡಿದರು ಎಂದು ಹೇಳಿದರು. (ಈಗ ಅವರಿಗೆ ಗೌರವ ಸಿಗುತ್ತಿದೆ, ಹಾಗಾದರೆ ಅವರು ‘ಘರವಾಪಸೀ’ (ಪುನರಾಗಮ) ಏಕೆ ಮಾಡುವುದಿಲ್ಲ? ಸರಕಾರವು ಘರವಾಪಸೀ ಮಾಡುವ ಸೌಲಭ್ಯಗಳನ್ನು ಹಾಗೂ ಸಂರಕ್ಷಣೆಯನ್ನು ಪೂರೈಸಬೇಕು, ಎಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು)