ಸಾಮಾಜಿಕ ಮಾಧ್ಯಮಗಳ ಮೂಲಕ ದೇಶದ ಪ್ರತಿಯೊಂದು ನಗರದಲ್ಲಿಯೂ ಈ ರೀತಿ ಪ್ರಯತ್ನಿಸಲು ಆಗ್ರಹ !
ವಡೋದರಾ (ಗುಜರಾತ) – ವಡೋದರಾ ನಗರದಲ್ಲಿ ೧೦೮ ದೇವಸ್ಥಾನಗಳಲ್ಲಿ ಪ್ರತಿದಿನ ೨ ಬಾರಿ ಆರತಿ ಹಾಗೂ ಹನುಮಾನ್ ಚಾಲಿಸಾವನ್ನು ಧ್ವನಿವರ್ಧಕದಲ್ಲಿ ಕೇಳಿಸಲಾಗುತ್ತಿದೆ. ಸ್ಥಳೀಯ ಸಂಘಟನೆ ‘ಮಿಶನ್ ರಾಮ ಸೇತುನ ವತಿಯಿಂದ ಪ್ರಯತ್ನಿಸಲಾಗುತ್ತಿದೆ. ಈ ಸಂಘಟನೆಯು ಕಳೆದ ವರ್ಷ ಕೂಡ ಶ್ರಾವಣ ಮಾಸದಲ್ಲಿ ಕೆಲವು ದೇವಸ್ಥಾನಗಳಿಗೆ ಧ್ವನಿವರ್ಧಕಗಳನ್ನು ವಿತರಣೆ ಮಾಡಿತು. ಸಾಮಾಜಿಕ ಮಾಧ್ಯಮಗಳಲ್ಲಿ ಈ ಪ್ರಯತ್ನಗಳಿಗೆ ಬೆಂಬಲ ವ್ಯಕ್ತವಾಗುತ್ತಿದೆ. ಅದೇ ರೀತಿ ‘ದೇಶದ ಎಲ್ಲಾ ನಗರಗಳಲ್ಲಿ ಈ ರೀತಿ ಪ್ರಯತ್ನಿಸಬೇಕು, ಎಂದು ಬೇಡಿಕೆ ಮಾಡಲಾಗುತ್ತಿದೆ.
Gujarat: 108 temples of Vadodara to get loudspeakers to play Hanuman Chalisa twice a dayhttps://t.co/ONnm75s2wv
— OpIndia.com (@OpIndia_com) August 12, 2021
ನಗರದ ಕಾಲಾಘೋಡಾದಲ್ಲಿನ ಪಂಚಮುಖೀ ಹನುಮಾನ ದೇವಸ್ಥಾನದಲ್ಲಿ ಮೊದಲ ಶ್ರಾವಣ ಸೋಮವಾರದಂದು ಧ್ವನಿವರ್ಧಕವನ್ನು ವಿತರಣೆ ಮಾಡಲಾಯಿತು. ಧ್ವನಿವರ್ಧಕವನ್ನು ಹಂಚುವಾಗ ಭಾಜಪದ ಕೆಲವು ಪದಾಧಿಕಾರಿಗಳು ಕೂಡ ಉಪಸ್ಥಿತರಾಗಿದ್ದರು.
ಈ ವಿಷಯವಾಗಿ ‘ಮಿಶನ್ ರಾಮ ಸೇತೂವಿನ ಅಧ್ಯಕ್ಷರಾದ ದೀಪ ಅಗ್ರವಾಲರವರು ಮಾತನಾಡುತ್ತಾ, ‘ಭಾವಿಕರು ಮನೆಯಲ್ಲಿದ್ದೇ ಆರತಿ ಹಾಗೂ ಹನುಮಾನ ಚಾಲೀಸಾವನ್ನು ಕೇಳಬಹುದು; ಆದ್ದರಿಂದ ಧ್ವನಿವರ್ಧಕಗಳನ್ನು ಹಾಕಲಾಗುತ್ತಿದೆ. ಕೊರೊನಾದ ಕಾಲದಲ್ಲಿ ನಿಯಮಗಳಿರುವುದರಿಂದ ಜನರಿಗೆ ದೇವಸ್ಥಾನಕ್ಕೆ ಹೋಗಲು ನಿರ್ಬಂಧಗಳಿರುವುದರಿಂದ ಜನರು ಮನೆಯಲ್ಲಿದ್ದುಕೊಂಡು ಧ್ವನಿವರ್ಧಕದಲ್ಲಿ ಆರತಿಯ ಲಾಭ ಪಡೆಯಬಹುದು, ಎಂದಿದ್ದಾರೆ.