ಪ್ರಧಾನಮಂತ್ರಿಗಳಿಗೆ ರಕ್ತದಿಂದ ಬರೆದ ಪತ್ರವನ್ನು ಕಳುಹಿಸಿದ ಉತ್ತರಾಖಂಡದ ಚಾರಧಾಮ ತೀರ್ಥಕ್ಷೇತ್ರದ ಅರ್ಚಕರು !
|
ಡೆಹರಾಡೂನ್ (ಉತ್ತರಾಖಂಡ) – ಉತ್ತರಾಖಂಡ ಸರಕಾರದ ‘ದೇವಸ್ಥಾನಮ್ ಬೋರ್ಡ್ ಆಕ್ಟ್ ಅನ್ನು ರದ್ದು ಪಡಿಸಲು ರಾಜ್ಯದಲ್ಲಿನ ಚಾರಧಾಮ ತೀರ್ಥಕ್ಷೇತ್ರಗಳ ಅರ್ಚಕರು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಹಸ್ತಕ್ಷೇಪ ಮಾಡಲು ರಕ್ತದಲ್ಲಿ ಪತ್ರ ಬರೆದಿದ್ದಾರೆ. ಈ ಕಾಯಿದೆಯ ಮೂಲಕ ಚಾರಧಾಮ ಹಾಗೂ ಬೇರೆ ದೇವಸ್ಥಾನಗಳ ಸರಕಾರೀಕರಣ ಮಾಡಲಾಗುವುದು. ಅದರ ವಿರುದ್ಧವಾಗಿ ಈ ಹಿಂದೆಯೇ ಭಾಜಪದ ವರಿಷ್ಠ ಮುಖಂಡರು ಹಾಗೂ ಸಾಂಸದರಾದ ಡಾ. ಸುಬ್ರಮಣಿಯನ್ ಸ್ವಾಮಿಯವರು ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲಿಸಿದ್ದಾರೆ.
೧. ಈ ಪತ್ರವು ‘ಅಖಿಲ ಭಾರತೀಯ ತೀರ್ಥ ಪುರೋಹಿತ ಯುವಾ ಮಹಾಸಭೆ ಹಾಗೂ ‘ಶ್ರೀ ಕೇದಾರನಾಥ ಧಾಮದ ಅರ್ಚಕರಾದ ಸಂತೋಷ ತ್ರಿವೇದಿಯವರ ಹಸ್ತಾಕ್ಷರದಲ್ಲಿದೆ. ಇದರಲ್ಲಿ ರಾಜ್ಯ ಸರಕಾರದಿಂದ ಮಾಡಲಾದ ದೇವಸ್ಥಾನಮ್ ಬೋರ್ಡ್ ರೂಪಿಸುವ ಪ್ರಯತ್ನವು ಸನಾತನ ಧರ್ಮದ ಪೌರಾಣಿಕ ಪರಂಪರೆಗಳನ್ನು ಹತ್ತಿಕ್ಕುವಂತಿದೆ. ಪುರೋಹಿತರ ಅಧಿಕಾರದೊಂದಿಗೆ ಆಟವಾಡಲಾಗುತ್ತಿದೆ. ಅದು ನ್ಯಾಯೋಚಿತವಲ್ಲ. ಆದ್ದರಿಂದ ಆ ಬೋಡ್ ಅನ್ನು ವಿಸರ್ಜಿಸಬೇಕು ಎಂದು ಹೇಳಲಾಗಿದೆ.
೨. ಚಾರಧಾಮದೊಂದಿಗೆ ಸಂಬಂಧಪಟ್ಟ ಪುರೋಹಿತ ಸಮಿತಿಯು ಸೇರಿದಂತೆ ೪೭ ದೇವಸ್ಥಾನಗಳ ಬೋರ್ಡ್‌ಗಳು ಅದನ್ನು ವಿರೋಧಿಸಲು ಆಗಸ್ಟ್ ೧೭ರಂದು ರಾಜ್ಯಮಟ್ಟದಲ್ಲಿ ಧರಣಿ ನಡೆಸುವ ತೀರ್ಮಾನ ತೆಗೆದುಕೊಂಡಿದೆ. ಮಾಜಿ ಮುಖ್ಯಮಂತ್ರಿ ತ್ರಿವೇಂದ್ರಸಿಂಹ ರಾವತ ಹಾಗೂ ತೀರರ್ಥಸಿಂಹ ರಾವತರವರ ನಂತರ ಈಗಿನ ಮುಖ್ಯಮಂತ್ರಿಗಳಾದ ಪುಷ್ಕರಸಿಂಹ ಧಾಮಿಯವರು ಬೋರ್ಡ್‌ಅನ್ನು ರದ್ದು ಪಡಿಸುವ ವಿಷಯದಲ್ಲಿ ನಿರಾಶೆ ಮಾಡಿಸಿದ್ದಾರೆ, ಎಂದು ಪುರೋಹಿತರು ಹೇಳಿದ್ದಾರೆ.