ನೆಹರು ಕುಟುಂಬದಿಂದ ದೇಶದ ಅರ್ಥವ್ಯವಸ್ಥೆ ಹಾಳಾಯಿತು ! – ಮಧ್ಯಪ್ರದೇಶದಲ್ಲಿ ಭಾಜಪ ಸರಕಾರದ ಮಂತ್ರಿ ವಿಶ್ವಾಸ ಸಾರಂಗರವರ ಆರೋಪ

ಭೋಪಾಲ (ಮಧ್ಯಪ್ರದೇಶ) – ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಅರ್ಥವ್ಯವಸ್ಥೆಯನ್ನು ದುರ್ಬಲಗೊಳಿಸಿ ಹಣದುಬ್ಬರವನ್ನು ಹೆಚ್ಚಿಸಿದ ಶ್ರೇಯಸ್ಸನ್ನು ಯಾರಿಗಾದರೂ ನೀಡುವುದಾದರೆ ಅದನ್ನು ನೆಹರುರವರ ಕುಟುಂಬಕ್ಕೆ ನೀಡಬೇಕು. ಹಣದುಬ್ಬರ ಒಂದು ಅಥವಾ ಎರಡು ದಿನಗಳಲ್ಲಿ ಹೆಚ್ಚಾಗುವುದಿಲ್ಲ. ಅರ್ಥವ್ಯವಸ್ಥೆಯ ಅಡಿಪಾಯವನ್ನು ಒಂದು ಅಥವಾ ಎರಡು ದಿನಗಳಲ್ಲಿ ನಿರ್ಮಿಸಲು ಸಾಧ್ಯವಾಗುವುದಿಲ್ಲ. ನೆಹರುರವರು ಆಗಸ್ಟ್ 15 1947 ರ ದಿನದಂದು ಕೆಂಪು ಕೋಟೆಯಲ್ಲಿ ಭಾಷಣ ನೀಡುವಾಗ ಮಾಡಿದ ತಪ್ಪುಗಳಿಂದ ದೇಶದ ಅರ್ಥವ್ಯವಸ್ಥೆಯು ಕುಸಿದಿದೆ. ಅದೇ ಭಾಜಪದ ಆಡಳಿತಾವಧಿಯಲ್ಲಿ ಬೆಲೆಯೇರಿಕೆ ಕಡಿಮೆಯಾಗಿದ್ದು ಜನರ ಉತ್ಪನ್ನವು ದುಪಟ್ಟಾಗಿದೆ ಎಂದು ಮಧ್ಯಪ್ರದೇಶದ ಭಾಜಪ ಸರಕಾರದ ವೈದ್ಯಕೀಯ ಶಿಕ್ಷಣಮಂತ್ರಿ ವಿಶ್ವಾಸ ಸಾರಂಗರವರು ಹೇಳಿದ್ದಾರೆ. ಅವರು ಭೋಪಾಲದಲ್ಲಿ ಪ್ರಚಾರಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ಸಾರಂಗರರು ಮುಂದೆ, ಭಾರತದ ಅರ್ಥವ್ಯವಸ್ಥೆಯು ಕೃಷಿಯ ಮೇಲೆ ಅವಲಂಬಿಸಿದ್ದರೂ ಕೂಡ ನೆಹರುರವರು ಅದನ್ನು ದುರ್ಲಕ್ಷ್ಯ ಮಾಡಿದರು. ಶೇಕಡ 70 ರಷ್ಟು ಜನಸಂಖ್ಯೆಯು ಕೃಷಿಯ ಮೇಲೆ ಅವಲಂಬಿಸಿತ್ತು. ಆದರೂ ನೆಹರುರವರು ಆ ಕ್ಷೇತ್ರದ ಬಗ್ಗೆ ಚಿಂತೆ ಮಾಡಲೇ ಇಲ್ಲ. ಗ್ರಾಮೀಣ ಅರ್ಥವ್ಯವಸ್ಥೆಯು ಸ್ವಾವಲಂಬಿ ಹಾಗೂ ಸ್ಥಿರವಾಗಿತ್ತು. ನೆಹರುರವರು ತಮ್ಮ ಪಾಶ್ಚಿಮಾತ್ಯ ವಿಚಾರಸರಣಿಯನ್ನು ಹೇರಿದರು ಹಾಗೂ ಗ್ರಾಮೀಣ ಅರ್ಥವ್ಯವಸ್ಥೆಯನ್ನು ಕೊನೆಗಾಣಿಸಿದರು. ಇಂದಿನ ಸ್ಥಿತಿಗೆ ನೆಹರುರವರ ತಪ್ಪಾದ ಧೋರಣೆಯೇ ಜವಾಬ್ದಾರವಾಗಿದೆ. ಉದ್ಯೋಗಗಳು ಹೆಚ್ಚಾಗಬೇಕಾಗಿತ್ತು; ಆದರೆ ಕೃಷಿಯು ಅದರ ಮೂಲ ಆಧಾರವಾಗಿರುವುದು ಅಗತ್ಯವಾಗಿತ್ತು ಎಂದು ಹೇಳಿದರು.