ಭಾರತಕ್ಕೇ ಶೌರ್ಯಶಾಲಿ ಇತಿಹಾಸ ಇದ್ದರೂ ಕೂಡ ನಾವು ಕಾಬೂಲಿಗೆ ಸೈನ್ಯ ಕಳಿಸಲು ನಿರಾಕರಿಸಿದೆವು ! – ಡಾ. ಸುಬ್ರಹ್ಮಣ್ಯ ಸ್ವಾಮಿ

ನವದೆಹಲಿ – ಅಫ್ಘಾನಿಸ್ತಾನದ ಗಡಿ ಭಾರತಕ್ಕೆ (ಪಾಕ ಆಕ್ರಮಿತ ಕಾಶ್ಮೀರಕ್ಕೆ) ಅಂಟಿಕೊಂಡಿದೆ. ಅಫ್ಘಾನಿಸ್ತಾನದಲ್ಲಿ ಭಾರತ ಸಹ ಆಡಳಿತ ನಡೆಸಿದೆ. ಮಹಾಭಾರತ ಕಾಲದಿಂದ ಇತ್ತೀಚಿನ ಮಹಾರಾಜ ರಣಜಿತ್ ಸಿಂಹ ಇವರ ತನಕ ನಾವು ಅಫ್ಘಾನಿಸ್ತಾನದ ಮೇಲೆ ರಾಜ್ಯವಾಳಿದ ಇತಿಹಾಸವಿದೆ. ಭಾರತದ ಈ ಶೌರ್ಯಶಾಲಿ ಇತಿಹಾಸವಿರುವಾಗ, ‘ನಾವು ಲಡಾಖ್‌ನಲ್ಲಿ ಚೀನಾ ‘ಆಕ್ರಮಣಕಾರಿ’ಯಾಗಿತ್ತು’, ಎಂದು ಹೇಳಲು ಭಯಪಡುತ್ತೇವೆ, ಅದೇ ರೀತಿ ಕಾಬುಲ್‌ನಲ್ಲಿ ಸೈನ್ಯ ಕಳಿಸಲು ನಿರಾಕರಿಸುತ್ತೇವೆ ಎಂದು ಬಿಜೆಪಿಯ ನಾಯಕ ಹಾಗೂ ಸಂಸದ ಡಾ. ಸುಬ್ರಹ್ಮಣ್ಯ ಸ್ವಾಮಿ ಟ್ವೀಟ್ ಮಾಡಿ ಟೀಕಿಸಿದ್ದಾರೆ.