ಭಾರತದಲ್ಲಿ ಎಲ್ಲಾ ರಾಜಕೀಯ ಪಕ್ಷದವರು ಯಾವುದಾದರೂ ಒಂದು ವಸ್ತುವನ್ನು ಉಚಿತವಾಗಿ ನೀಡುವ ಕೆಟ್ಟಅಭ್ಯಾಸ ಮಾಡಿರುವುದರಿಂದ ಈ ಸ್ಥಿತಿ ನಿರ್ಮಾಣವಾಗಿದೆ. ರಾಜಕೀಯ ಪಕ್ಷದವರು ಜನತೆಗೆ ಸಾಧನೆಯನ್ನು ಕಲಿಸಿಕೊಟ್ಟಿದ್ದರೆ, ಅವರು ತಾವಾಗಿ ತಿರಂಗಾ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದರು ! – ಸಂಪಾದಕರು
ಕೌಶಾಂಬಿ (ಉತ್ತರಪ್ರದೇಶ) – ಇಲ್ಲಿ ಸ್ವಾತಂತ್ರ್ಯ ದಿನದ ನಿಮಿತ್ತ ಆಗಸ್ಟ್ 15 ರಂದು ಶಾಸಕರಾದ ಸಂಜಯ ಕುಮಾರ ಗುಪ್ತಾರವರು ತಿರಂಗಾ ಯಾತ್ರೆಯನ್ನು ಆಯೋಜಿಸಿದ್ದರು. ದೊಡ್ಡ ಸಂಖ್ಯೆಯಲ್ಲಿ ಜನರು ಬರಬೇಕೆಂದು ಭಾಜಪದ ಕಾರ್ಯಕರ್ತರಿಗೆ ಶಾಸಕ ಗುಪ್ತಾರವರು ಉಚಿತವಾಗಿ ಪೆಟ್ರೋಲ್ ನೀಡುವ ಯೋಜನೆಯನ್ನು ರೂಪಿಸಿದ್ದರು. ಆದ್ದರಿಂದ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಯಾತ್ರೆಗೆಂದು ಬಂದಿದ್ದರು. ಆದರೆ ಪೆಟ್ರೋಲ್‍ಗಾಗಿ ಬಿಜೆಪಿ ಕಾರ್ಯಕರ್ತರೇ ಪರಸ್ಪರ ವಿರೋಧವಾಗಿ ನಿಂತುಕೊಂಡರು. ನಂತರ ನೂಕುನುಗ್ಗಲು ಹೊಡೆದಾಟವಾಗಿ ಮಾರ್ಪಾಟಾಯಿತು.
( ಸೌಜನ್ಯ : Oneindia Hindi)
ತಮ್ಮ ಜೀವವನ್ನು ಅಪಾಯಕ್ಕೊಡ್ಡಿ ಜನರು ಪೆಟ್ರೋಲ್‍ನ ಬಾಟಲಿಯನ್ನು ಪಡೆದುಕೊಳ್ಳಲು ಒದ್ದಾಡುತ್ತಿದ್ದರು. ಆಗೇನಾದರೂ ಅಲ್ಲಿ ಅನರ್ಥವಾಗಿದ್ದರೆ, ನೂರಾರು ಜನರ ಜೀವಕ್ಕೆ ಅಪಾಯವಾಗಿರುತ್ತಿತ್ತು; ಆದರೆ ಜನರು ಆ ಬಗ್ಗೆ ಯಾವುದೇ ರೀತಿಯಲ್ಲಿ ಚಿಂತಿಸದೆ ಉಚಿತ ಪೆಟ್ರೋಲ್‍ಗಾಗಿ ದುಂಬಾಲು ಬೀಳುವ ದೃಶ್ಯವು ಕಾಣಿಸುತ್ತಿತ್ತು.