ಮಾಹೀಂ ದರ್ಗಾ ಟ್ರಸ್ಟ್ ಸಹಿತ ಮುಂಬೈನಲ್ಲಿ ೨೯ ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳದಿಂದ ದಾಳಿ !

ಕುಖ್ಯಾತ ರೌಡಿ ದಾವೂದ್ ಇಬ್ರಾಹಿಂ ಜೊತೆಗೆ ನಂಟು ಇರುವ ಸಂಶಯದ ಮೇಲೆ ಮಾಹೀಂ ದರ್ಗಾದ ಟ್ರಸ್ಟ್ ಸಹಿತ ಮುಂಬೈ ನಲ್ಲಿ ೨೯ ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿದರು. ನಾಗಪಾಡಾ, ಗೊರೆಗಾವ್, ಮುಂಬ್ರಾ, ಬೋರಿವಲಿ, ಸಾಂತಾಕ್ರೂಜ್, ಬೆಂಡಿ ಬಜಾರ್ ಮುಂತಾದ ಸ್ಥಳಗಳಲ್ಲಿ ದಾಳಿ ನಡೆದಿದೆ.

ಹನುಮಾನ ದೇವಸ್ಥಾನದ ಮೇಲಿನ ಧ್ವನಿವರ್ಧಕ ತೆರವುಗೊಳಿಸುವುದಕ್ಕೆ ಮುಸಲ್ಮಾನ ಗೂಂಡಾನಿಂದ ವಿಶ್ವಹಿಂದೂ ಪರಿಷತ್ತಿನ ಕಾರ್ಯಕರ್ತನ ಕೊಲೆ ಮಾಡುವ ಬೆದರಿಕೆ !

ಹನುಮಾನ ದೇವಸ್ಥಾನದ ಮೇಲಿನ ಧ್ವನಿವರ್ಧಕ ತೆರವುಗೊಳಿಸುವುದಕ್ಕೆ ವಿಶ್ವಹಿಂದೂ ಪರಿಷತ್ತಿನ ಕಾರ್ಯಕರ್ತ ಮಹೇಂದ್ರ ಮಾಲಿ ಇವರಿಗೆ ಕೊಲೆ ಬೆದರಿಕೆ ನೀಡಿರುವ ಪ್ರಕರಣದಲ್ಲಿ ಪೊಲೀಸರು ಸಿರಾಜ್ ಅಲಿಯಾಸ್ ಸಿರೋ ಡಾನ್ ಎಂಬವನನ್ನು ಬಂಧಿಸಿದ್ದಾರೆ.

ದೆಹಲಿಯಲ್ಲಿ ಚಿಕ್ಕಮಕ್ಕಳ ಜಗಳದ ಕಾರಣ ಮತಾಂಧರಿಂದ ಹಿಂದೂಗಳ ಮೇಲೆ ದಾಳಿ

ಇಲ್ಲಿಯ ವೆಲ್ಕಮ್ ಭಾಗದಲ್ಲಿ ಚಿಕ್ಕಮಕ್ಕಳ ಜಗಳದ ಕಾರಣ ಮತಾಂಧರಿಂದ ಹಿಂದೂಗಳ ಮೇಲೆ ದಾಳಿ ನಡೆದಿದೆ. ಪೊಲೀಸರು ಈ ಪ್ರಕರಣದಲ್ಲಿ ೩ ಜನರನ್ನು ಬಂಧಿಸಿದ್ದಾರೆ ಹಾಗೂ ೩೭ ಜನರನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಮೇ ೪ ರಂದು ರಾತ್ರಿ ನಡೆದಿದೆ.

ಕೇರಳದಲ್ಲಿ ಸಂಘ ಕಾರ್ಯಕರ್ತನ ಹತ್ಯೆಯ ಪ್ರಕರಣದಲ್ಲಿ ಪಿ.ಎಫ್.ಐ.ಯ ೪ ಜನರ ಬಂಧನ

ಜಿಲ್ಲೆಯಲ್ಲಿ ಕಳೆದ ತಿಂಗಳ ನಡೆದಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಬ್ಬ ನಾಯಕನ ಹತ್ಯೆ ಪ್ರಕರಣದಲ್ಲಿ ಇನ್ನೂ ೪ ಜನರನ್ನು ಬಂಧಿಸಲಾಗಿದೆ. ಆದ್ದರಿಂದ ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಬಂಧಿಸಲಾಗಿರುವ ಒಟ್ಟು ಆರೋಪಿಗಳ ಸಂಖ್ಯೆ ೨೦ ಕೆ ತಲುಪಿದೆ, ಎಂಬ ಮಾಹಿತಿ ಹೆಚ್ಚುವರಿ ಪೊಲೀಸ್ ಮಹಾ ಸಂಚಾಲಕರು (ಕಾನೂನು ಮತ್ತು ಸುವ್ಯವಸ್ಥೆ) ವಿಜಯ ಸಾಖರೆ ಇವರು ನೀಡಿದರು.

ಕರ್ನಾಲ (ಹರಿಯಾಣ)ದಲ್ಲಿ ೪ ಖಲಿಸ್ತಾನಿ ಭಯೋತ್ಪಾದಕರನ್ನು ದೊಡ್ಡ ಶಸ್ತ್ರಸಂಗ್ರಹದೊಂದಿಗೆ ಬಂಧಿಸಲಾಯಿತು !

ರಾಜಧಾನಿ ದೆಹಲಿಯಲ್ಲಿ ಬಾಂಬ್‌ಸ್ಫೋಟಗಳನ್ನು ನಡೆಸುವ ದೊಡ್ಡ ಷಡ್ಯಂತ್ರವನ್ನು ಧ್ವಂಸಗೊಳಿಸಲಾಯಿತು. ಇಲ್ಲಿ ಕರ್ನಾಲ ಮತ್ತು ಪಂಜಾಬ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಿಂದ ಗುರಪ್ರೀತ, ಅಮನದೀಪ, ಪರಮಿಂದರ ಮತ್ತು ಭೂಪಿಂದರ ಎಂಬ ೪ ಖಲಿಸ್ತಾನಿ ಭಯೋತ್ಪಾದಕರನ್ನು ಬಂಧಿಸಲಾಗಿದೆ.

ನನ್ನ ಬಂಧನವು ಮುಖ್ಯಮಂತ್ರಿ ವಿಜಯನ್ ಇವರಿಂದ ಜಿಹಾದಿಗಳಿಗೆ ನೀಡಿರುವ ರಮಝಾನ ಉಡುಗೊರೆ – ಮಾಜಿ ಶಾಸಕ ಪಿ.ಸಿ. ಜಾರ್ಜ

ನನ್ನ ಬಂಧನವು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಮಝಾನ ನಿಮಿತ್ತ ಭಯೋತ್ಪಾದಕ ಮುಸಲ್ಮಾನರಿಗೆ ನೀಡಿರುವ ಉಡುಗೊರೆಯಾಗಿದೆಯೆಂದು ಮಾಜಿ ಶಾಸಕ ಮತ್ತು ಕಾಂಗ್ರೆಸ್ಸಿನ ಮಾಜಿ ಮುಖಂಡ ಪಿ.ಸಿ. ಜಾರ್ಜ ಟೀಕಿಸಿದ್ದಾರೆ.

ಜೋಧಪುರದಲ್ಲಿ ಭಗವಾ ತೆಗೆದು ಹಸಿರು ಧ್ವಜ ಹಾಕಿದ್ದರಿಂದ ಹಿಂಸಾಚಾರ !

ಜಾಲೋರೀ ಗೇಟ್‌ ಚೌಕನಲ್ಲಿ ಮೇ ೨ರ ರಾತ್ರಿ ಭಗವಾ ಧ್ವಜವನ್ನು ತೆಗೆದು ಅಲ್ಲಿ ಹಸಿರು ಧ್ವಜ, ಹಾಗೆಯೇ ಧ್ವನಿಕ್ಷೇಪಕವನ್ನು ಹಾಕಿದ್ದರಿಂದ ಎರಡೂ ಬದಿಗಳಿಂದ ಪರಸ್ಪರ ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟವಾಯಿತು. ಇದರಲ್ಲಿ ಪೊಲೀಸ ಉಪಾಯುಕ್ತರು, ಪೊಲೀಸ ಠಾಣೆಯ ಪ್ರಮುಖರೊಂದಿಗೆ ಅನೇಕರು ಗಾಯಗೊಂಡಿದ್ದಾರೆ.

ದೇವಬಂದನ ಇಸ್ಲಾಮಿಕ ಶಿಕ್ಷಣ ಸಂಸ್ಥೆಯಿಂದ ಬಾಂಗ್ಲಾದೇಶಿ ಯುವಕನ ಬಂಧನ

ಭಯೋತ್ಪಾದಕ ನಿಗ್ರಹ ದಳವು ದೆವಬಂದನ ದಾರುಲ ಉಲುಮ ಎಂಬ ಶಿಕ್ಷಣ ಸಂಸ್ಥೆಯಿಂದ ಶಿಕ್ಷಣ ಪಡೆದಿರುವ ಒಬ್ಬ ಬಾಂಗ್ಲಾದೇಶಿ ಯುವಕನನ್ನು ಬಂಧಿಸಿದೆ. ಆತ ನಕಲಿ ಗುರುತಿನ ಚೀಟಿಯ ಮೂಲಕ ಇಲ್ಲಿ ಶಿಕ್ಷಣ ಪಡೆಯುತ್ತಿದ್ದನು.

ಲಕ್ಷ್ಮಣಪುರಿಯಲ್ಲಿ ಗೋವಿನ ಮೇಲೆ ಬಲಾತ್ಕಾರ ನಡೆಸಿದ ಮಜೀದನ ಬಂಧನ

ಇಲ್ಲಿಯ ಒಂದು ಗೋವಿನ ಮೇಲೆ ಬಲಾತ್ಕಾರ ನಡೆಸಿರುವ ಮಜೀದ್ ಎಂಬ ಮತಾಂಧನನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ನಗರದ ಸರೋಜಿನಿನಗರದ ನಿವಾಸಿ. ಈ ಘಟನೆ ಏಪ್ರಿಲ್ ೨೩ ರಂದು ನಡೆದಿದೆ. ಆದರೆ ಏಪ್ರಿಲ್ ೨೬.೨೦೨೨ ರಂದು ಸಿಸಿಟಿವಿಯ ಚಿತ್ರೀಕರಣ ನೋಡಿದ ನಂತರ ಬಲಾತ್ಕಾರದ ಪ್ರಕರಣ ಬೆಳಕಿಗೆ ಬಂದಿದೆ.

ಉತ್ತರಾಖಂಡದಲ್ಲಿ ಆಡಳಿತವು ಹಿಂದೂ ಮಹಾಪಂಚಾಯತಕ್ಕೆ ಅನುಮತಿ ನಿರಾಕರಿಸಿತು !

ಉತ್ತರಾಖಂಡದಲ್ಲಿ ಡಾಡಾ ಜಲಾಲಪೂರ ಎಂಬ ಗ್ರಾಮದಲ್ಲಿ ಆಯೋಜಿಸಲಾದ ಹಿಂದು ಮಹಾಪಂಚಾಯತಕ್ಕೆ ಹರಿದ್ವಾರ ಜಿಲ್ಲಾಡಳಿತವು ಅನುಮತಿಯನ್ನು ನಿರಾಕರಿಸಿದೆ. ಅಲ್ಲಿ ಅನುಚ್ಛೇದ ೧೪೪ (ಸಂಚಾರ ನಿಶೇಧಾಜ್ಞೆ) ಅನ್ನು ಜಾರಿಗೊಳಿಸಲಾಗಿದೆ.