ಜೋಧಪುರದಲ್ಲಿ ಭಗವಾ ತೆಗೆದು ಹಸಿರು ಧ್ವಜ ಹಾಕಿದ್ದರಿಂದ ಹಿಂಸಾಚಾರ !

ಅನಿಶ್ಚಿತ ಸಮಯದ ವರೆಗೆ ಸಂಚಾರ ನಿರ್ಬಂಧ ಜ್ಯಾರಿ

ಜೋಧಪುರ (ರಾಜಸ್ತಾನ) – ಜಾಲೋರೀ ಗೇಟ್‌ ಚೌಕನಲ್ಲಿ ಮೇ ೨ರ ರಾತ್ರಿ ಭಗವಾ ಧ್ವಜವನ್ನು ತೆಗೆದು ಅಲ್ಲಿ ಹಸಿರು ಧ್ವಜ, ಹಾಗೆಯೇ ಧ್ವನಿಕ್ಷೇಪಕವನ್ನು ಹಾಕಿದ್ದರಿಂದ ಎರಡೂ ಬದಿಗಳಿಂದ ಪರಸ್ಪರ ದೊಡ್ಡ ಪ್ರಮಾಣದಲ್ಲಿ ಕಲ್ಲುತೂರಾಟವಾಯಿತು. ಇದರಲ್ಲಿ ಪೊಲೀಸ ಉಪಾಯುಕ್ತರು, ಪೊಲೀಸ ಠಾಣೆಯ ಪ್ರಮುಖರೊಂದಿಗೆ ಅನೇಕರು ಗಾಯಗೊಂಡಿದ್ದಾರೆ. ಈ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಧ್ವಂಸ ನಡೆಯಿತು. ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಮೊದಲು ಲಾಠಿಚಾರ್ಜ ಮಾಡಿದರು ಮತ್ತು ಅಶ್ರುವಾಯುವನ್ನು ಸಿಡಿಸಿದರು. ಈ ಘಟನೆಯ ನಂತರ ಜಿಲ್ಲಾಧಿಕಾರಿಗಳು ಜೋಧಪುರದಲ್ಲಿ ಅನಿಶ್ಚಿತ ಸಮಯದ ವರೆಗೆ ಇಂಟರನೆಟ್‌ ಸೇವೆಯನ್ನು ಸ್ಥಗಿತಗೊಳಿಸುವ ಆದೇಶವನ್ನು ನೀಡಿದ್ದಾರೆ, ಹಾಗೆಯೇ ಅನಿಶ್ಚಿತ ಸಮಯದ ವರೆಗೆ ಸಂಚಾರನಿರ್ಬಂಧವನ್ನು ಜ್ಯಾರಿಗೊಳಿಸಲಾಗಿದೆ. ಈ ಹಿಂಸಾಚಾರದ ಪ್ರಕರಣದಲ್ಲಿ ಇಲ್ಲಿಯವರೆಗೆ ಮೂವರನ್ನು ಬಂಧಿಸಲಾಗಿದೆ. ಈ ಘಟನೆಯ ನಂತರ ಮೇ ೩ರಂದು ಬೆಳಿಗ್ಗೆ ಮತಾಂಧರಿಂದ ಪುನಃ ಇಲ್ಲಿ ಕಲ್ಲುತೂರಾಟ ಮಾಡಲಾಯಿತು. ಈ ಸಮಯದಲ್ಲಿ ಪೊಲೀಸರು ಅವರ ಮೇಲೆ ಲಾಠಿಚಾರ್ಜ ಮಾಡಿ ಅವರನ್ನು ಓಡಿಸಿದರು.

೧. ಮೇ ೨ರ ರಾತ್ರಿ ೧೧.೩೦ಕ್ಕೆ ಜಾಲೋರಿ ಗೇಟ್‌ ಚೌಕ್‌ನಲ್ಲಿ ಸ್ವಾತಂತ್ರ್ಯ ಸೇನಾನಿ ಬಾಲ ಮುಕುಂದ ಬಿಸ್ಸಾರವರ ಪ್ರತಿಮೆಯ ಮೇಲೆ ಧ್ವಜ ಹಾಗೂ ಈದ್‌ ಗೆ ಸಂಬಂಧಿಸಿದ ಫಲಕವನ್ನು ಹಚ್ಚಿದಾಗ ಒಂದು ಸಮುದಾಯದ ಜನರು ಘೋಷಣೆಗಳನ್ನು ಕೂಗಿದರು. ಈ ಭಾಗದಲ್ಲಿ ನಮಾಜು ಪಠಣ ಮಾಡಲಾಗುತ್ತದೆ, ಅಲ್ಲಿ ಭಗವಾನ ಶ್ರೀ ಪರಶುರಾಮರ ಧ್ವಜವಿತ್ತು. ಈದ್‌ನ ನಿಮಿತ್ತ ಸ್ಥಳೀಯ ಮುಸಲ್ಮಾನರು ಧ್ವಜವನ್ನು ಹಚ್ಚುತ್ತಿರುವುದರಿಂದ ಶ್ರೀ ಪರಶುರಾಮರ ಧ್ವಜವನ್ನು ತೆಗೆಯುವ ಬಗ್ಗೆ ವಾದ ನಿರ್ಮಾಣವಾಯಿತು. ಈ ವಾದದ ಸ್ವರೂಪವು ಕಲ್ಲುತೂರಾಟದಲ್ಲಿ ಆಯಿತು.

೨. ಪೊಲೀಸ ಆಯುಕ್ತರಾದ ನವಜ್ಯೋತ ಗೋಗೋಯಿಯವರು ಮಾತನಾಡುತ್ತ, ಘಟನಾಸ್ಥಳದಲ್ಲಿ ಹಾಕಲಾಗಿದ್ದ ಸಿಸಿಟಿವಿ ಕ್ಯಾಮರಾಗಳು ಮತ್ತು ಘಟನಾಸ್ಥಳದಲ್ಲಿ ೨ ಪಕ್ಷಗಳು ಮಾಡಿದ ಮೊಬೈಲ್‌ ಚಿತ್ರೀಕರಣಗಳ ತಪಾಸಣೆ ನಡೆಯುತ್ತಿದೆ. ಕಲ್ಲುತೂರಾಟವನ್ನು ಯಾರು ಆರಂಭಿಸಿದ್ದಾರೆ ? ಹಾಗೆಯೇ ಕಲ್ಲುತೂರಾಟ ಮಾಡಿದವರನ್ನು ಗುರುತಿಸಿ ಅವರನ್ನು ಬಂಧಿಸುವ ಪ್ರಯತ್ನವು ನಡೆದಿದೆ, ಎಂದು ಹೇಳಿದರು.

ಸಂಪಾದಕೀಯ ನಿಲುವು

  • ಕಾಂಗ್ರೆಸ್ಸಿನ ರಾಜ್ಯದಲ್ಲಿ ಭಗವಾಧ್ವಜವನ್ನು ತೆಗೆದು ಹಸಿರು ಧ್ವಜವನ್ನು ಹಾಕಲಾಗುತ್ತದೆ, ಎಂಬುದನ್ನು ಗಮನದಲ್ಲಿಡಿ ! 
  • ಇಂತಹ ಘಟನೆ ನಡೆಯಲು ಜೋಧಪುರವು ಭಾರತದಲ್ಲಿದೆಯೇ ಅಥವಾ ಪಾಕಿಸ್ತಾನದಲ್ಲಿ ?
  • ರಾಜಸ್ತಾನದಲ್ಲಿ ಹಿಂದೂಗಳ ಮೇಲೆ ಸತತವಾಗಿ ನಡೆಯುತ್ತಿರುವ ಆಕ್ರಮಣಗಳನ್ನು ತಡೆಯಲು ಕೇಂದ್ರ ಸರಕಾರವು ಹಸ್ತಕ್ಷೇಪ ಮಾಡಬೇಕು !

ಪೊಲೀಸರಿಂದ ಹಿಂದೂಗಳ ಮೇಲೆ ಲಾಠಿಚಾರ್ಜ ! – ಭಾಜಪದ ಸಂಸದರ ಆರೋಪ

ತಡರಾತ್ರಿ ಸೂರಸಾಗರ ಮತದಾರಕ್ಷೇತ್ರದ ಭಾಜಪದ ಮಹಿಳಾ ಸಂಸದರಾದ ಸೂರ್ಯಕಾಂತಾ ವ್ಯಾಸ ಮತ್ತು ಮಹಾಪೌರರಾದ ವಿನಿತಾ ಸೇಠರವರು ಘಟನಾಸ್ಥಳವನ್ನು ತಲುಪಿದರು. ಜಾಲೊರೀ ಗೇಟ್‌ ಪೊಲೀಸ ಚೌಕಿಯ ಹೊರಗೆ ಕುಳಿತು ಇಬ್ಬರೂ ಪೊಲೀಸರು ಹಿಂದೂಗಳ ಮೇಲೆ ಮಾಡಿರುವ ಲಾಠಿಚಾರ್ಜವನ್ನು ವಿರೋಧಿಸಿದರು. ‘ಎರಡೂ ಬದಿಗಳಿಂದ ಕಲ್ಲುತೂರಾಟವಾಗುತ್ತಿರುವಾಗ ಪೊಲೀಸರು ಕೇವಲ ಹಿಂದೂಗಳ ಮೇಲೆ ಮಾತ್ರ ಏಕೆ ಕಲ್ಲುತೂರಾಟ ಮಾಡಿದರು ?’ ಎಂದು ವ್ಯಾಸರವರು ಕೇಳಿದರು. ಅವರು ಈ ಪ್ರಕರಣದಲ್ಲಿ ತನಿಖೆ ನಡೆಸಿ ಅಪರಾಧಿಗಳ ಮೇಲೆ ಕಾರ್ಯಾಚರಣೆ ಮಾಡಬೇಕಾಗಿ ಮುಖ್ಯಮಂತ್ರಿ ಅಶೋಕ ಗೆಹ್ಲೋಟ್‌ರವರಲ್ಲಿ ಮನವಿ ಮಾಡಿದರು. ಈ ಹಿಂಸಾಚಾರದ ಸಮಯದಲ್ಲಿ ಸಂಸದರಾದ ವ್ಯಾಸರವರ ಮನೆಯ ಎದುರು ದ್ವಿಚಕ್ರವನ್ನು ಸುಡಲಾಯಿತು.

ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಸಹಕರಿಸಿ ! – ಮುಖ್ಯಮಂತ್ರಿ

ಈ ಹಿಂಸಾಚಾರದ ನಂತರ ರಾಜಸ್ತಾನದ ಮುಖ್ಯಮಂತ್ರಿ ಅಶೋಕ ಗೆಹ್ಲೋಟರವರು ಜನರಿಗೆ ಶಾಂತಿಯನ್ನು ಕಾಪಾಡಲು ಕರೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಟ್ವೀಟ್‌ ಮಾಡಿ ‘ಯಾವುದೇ ಪರಿಸ್ಥಿತಿಯಲ್ಲಿಯೂ ಶಾಂತಿ ಹಾಗೆಯೇ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಬಗ್ಗೆ ಆಡಳಿತಕ್ಕೆ ಸೂಚನೆಯನ್ನು ನೀಡಲಾಗಿದೆ. ಜೋಧಪುರ. ಮಾರವಾಡದಲ್ಲಿನ ಪ್ರೇಮ ಮತ್ತು ಬಂಧುತ್ವದ ಪರಂಪರೆಯನ್ನು ಗೌರವಿಸುತ್ತ ನಾನು ಎಲ್ಲ ಪಕ್ಷಗಳಿಗೆ ಶಾಂತಿಯ ಕರೆ ನೀಡುತ್ತೇನೆ’ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಶಾಂತಿಯ ಕರೆ ನೀಡುವುದರಿಂದ ಶಾಂತಿ ನಿರ್ಮಾಣವಾಗುವುದಿಲ್ಲ, ಅದನ್ನು ಬಲಪ್ರಯೋಗಿಸಿ ನಿರ್ಮಿಸಲಾಗುತ್ತದೆ. ಕಾಂಗ್ರೆಸ್ಸಿನ ಸರಕಾರವು ಮತಾಂಧರ ಎದುರು ಮೊಣಕಾಲೂರುತ್ತಿರುವುದರಿಂದ ಕಳೆದ ಕೆಲವು ದಿನಗಳಿಂದ ಮತಾಂಧರಿಂದ ಇಂತಹ ಹಿಂಸಾಚಾರಗಳು ಸತತವಾಗಿ ನಡೆಯುತ್ತಿವೆ, ಇದನ್ನು ನೋಡಿ ‘ಗೆಹ್ಲೋಟರವರು ಏಕೆ ನಿಷ್ಕ್ರೀಯರಾಗಿದ್ದಾರೆ ?’ ಎಂಬುದನ್ನು ಅವರು ಹೇಳಬೇಕು !

ಪೊಲೀಸರಿಂದ ಮತಾಂಧರ ಮೇಲೆ ಕಾರ್ಯಾಚರಣೆ ಮಾಡಲು ಹಿಂದೇಟು ! – ಕೇಂದ್ರೀಯ ಮಂತ್ರಿ ಗಜೇಂದ್ರ ಸಿಂಹ ಶೇಖಾವತರವರ ಆರೋಪ

ಕೇಂದ್ರೀಯ ಮಂತ್ರಿ ಗಜೇಂದ್ರ ಸಿಂಹ ಶೇಖಾವತರವರು ಈ ಪ್ರಕರಣದಲ್ಲಿ ಪತ್ರಿಕಾ ಪರಿಷತ್ತು ನಡೆಸಿ ‘ಮತಾಂಧರು ಅನೇಕ ವಾಹನಗಳನ್ನು ಧ್ವಂಸ ಮಾಡಿದ್ದಾರೆ, ಹಾಗೆಯೇ ದೇವಸ್ಥಾನಗಳ ಮೇಲೆಯೂ ಆಕ್ರಮಣ ಮಾಡಿದ್ದಾರೆ. ಹಿಂದೂಗಳ ಅಂಗಡಿಗಳಲ್ಲಿ ನುಗ್ಗಿ ಹಾನಿ ಮಾಡಿದ್ದಾರೆ. ಹಿಂದೂಗಳ ಮನೆಗೆ ನುಗ್ಗಿ ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ಮಾಡಿದರು. ಚಿಕ್ಕ ಹುಡುಗಿಯರ ಬಟ್ಟೆಗಳನ್ನು ಹರಿದಿದ್ದಾರೆ. ಓರ್ವ ಹಿಂದೂವಿನ ಹೊಟ್ಟೆಗೆ ಚಾಕೂ ಹಾಕಿದ್ದಾರೆ. ಹೀಗಿರುವಾಗಲೂ ಅವರನ್ನು ವಿರೋಧಿಸುವ ಹಿಂದೂಗಳ ಮೇಲೆ ಪೊಲೀಸರು ಲಾಠಿಚಾರ್ಜ ಮಾಡಿದ್ದಾರೆ.

ಹಿಂಸಾಚಾರವನ್ನು ಮಾಡಿದ ನಂತರವೂ ಮತಾಂಧರು ಚೌಕಿಯಲ್ಲಿ ನಿಂತಿದ್ದರೂ ಪೊಲೀಸರು ಅವರ ಮೇಲೆ ಕಾರ್ಯಾಚರಣೆಯನ್ನು ಮಾಡಿಲ್ಲ. ಪೊಲೀಸರು ಇಲ್ಲಿಯ ವರೆಗೆ ಮತಾಂಧರ ಮೇಲೆ ಅಪರಾಧವನ್ನೂ ದಾಖಲಿಸಿಲ್ಲ. ಪೊಲೀಸರು ಕಾರ್ಯಾಚರಣೆಯನ್ನು ಮಾಡದಿದ್ದರೆ ನಾವು ಆಂದೋಲನ ಮಾಡುವೆವು’ ಎಂದು ಹೇಳಿದರು.