ಸಹಾರನಪುರ (ಉತ್ತರ ಪ್ರದೇಶ) – ಭಯೋತ್ಪಾದಕ ನಿಗ್ರಹ ದಳವು ದೆವಬಂದನ ದಾರುಲ ಉಲುಮ ಎಂಬ ಶಿಕ್ಷಣ ಸಂಸ್ಥೆಯಿಂದ ಶಿಕ್ಷಣ ಪಡೆದಿರುವ ಒಬ್ಬ ಬಾಂಗ್ಲಾದೇಶಿ ಯುವಕನನ್ನು ಬಂಧಿಸಿದೆ. ಆತ ನಕಲಿ ಗುರುತಿನ ಚೀಟಿಯ ಮೂಲಕ ಇಲ್ಲಿ ಶಿಕ್ಷಣ ಪಡೆಯುತ್ತಿದ್ದನು. ಈ ಯುವಕನಿಂದ ಬಾಂಗ್ಲಾದೇಶದ ದುಡ್ಡು, ಪುಸ್ತಕಗಳು ಮತ್ತು ಅನ್ಯ ಕೆಲವು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಯುವಕ ಪಾಕಿಸ್ತಾನದ ಜೊತೆಗೆ ಸಂಬಂಧವಿಟ್ಟುಕೊಂಡಿದ್ದ ಎಂದು ಪೊಲೀಸರು ಅನುಮಾನಪಟ್ಟಿದ್ದಾರೆ ಈ ಯುವಕ ೨೦೧೫ ರಿಂದ ದೇವಬಂದ ಇಲ್ಲಿ ವಾಸಿಸುತ್ತಿದ್ದ. (ಸರಿಸುಮಾರು ೭ ವರ್ಷಗಳಿಂದ ಈ ಯುವಕ ಭಾರತದಲ್ಲಿ ನುಸುಳಿ ಬಂದು ವಾಸಿಸುತ್ತಿದ್ದರೂ, ರಕ್ಷಣಾ ವ್ಯವಸ್ಥೆಗೆ ಇದರ ಮಾಹಿತಿ ಇರಲಿಲ್ಲ, ಇದು ನಾಚಿಕೆಗೇಡು ! ಹೀಗೆ ಎಷ್ಟು ಬಾಂಗ್ಲಾದೇಶಿಗಳು ಭಾರತದಲ್ಲಿ ವಾಸಿಸುತ್ತಿದ್ದಾರೆ ಎಂಬುದಕ್ಕೆ ಲೆಕ್ಕ ಇಲ್ಲ. ಅವರನ್ನು ಹುಡುಕಿ ಭಾರತದಿಂದ ಯಾವಾಗ ಹೊರಗೆ ಅಟ್ಟುತ್ತಾರೆಯೋ ಎಂಬ ಪ್ರಶ್ನೆ ! – ಸಂಪಾದಕರು) ಅವನ ಹೆಸರು ತಲಹಾ ತಾರುಲಕದಾರ ಬಿನ ಫಾರುಕ ಎಂದಿದ್ದು, ಅವನು ಬಾಂಗ್ಲಾದೇಶದ ಚಿತಗಾವ ನಿವಾಸಿ. ಅವನು ಮೇಘಾಲಯದಿಂದ ನಕಲಿ ಆಧಾರಕಾರ್ಡ ಕೂಡ ಮಾಡಿಸಿಕೊಂಡಿದ್ದಾನೆ.
Uttar Pradesh: ATS arrests a Bangladeshi student with suspected Pakistan link from Darul Uloom in Deoband, recovers fake Indian IDshttps://t.co/gRDXyCtK0S
— OpIndia.com (@OpIndia_com) April 29, 2022