ಮಾಹೀಂ ದರ್ಗಾ ಟ್ರಸ್ಟ್ ಸಹಿತ ಮುಂಬೈನಲ್ಲಿ ೨೯ ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳದಿಂದ ದಾಳಿ !

ದಾವೂದ ಇಬ್ರಾಹಿಂ ಜೊತೆ ನಂಟು ಇರುವ ಸಂಶಯ

ಮುಂಬಯಿ – ಕುಖ್ಯಾತ ರೌಡಿ ದಾವೂದ್ ಇಬ್ರಾಹಿಂ ಜೊತೆಗೆ ನಂಟು ಇರುವ ಸಂಶಯದ ಮೇಲೆ ಮಾಹೀಂ ದರ್ಗಾದ ಟ್ರಸ್ಟ್ ಸಹಿತ ಮುಂಬೈ ನಲ್ಲಿ ೨೯ ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿದರು. ನಾಗಪಾಡಾ, ಗೊರೆಗಾವ್, ಮುಂಬ್ರಾ, ಬೋರಿವಲಿ, ಸಾಂತಾಕ್ರೂಜ್, ಬೆಂಡಿ ಬಜಾರ್ ಮುಂತಾದ ಸ್ಥಳಗಳಲ್ಲಿ ದಾಳಿ ನಡೆದಿದೆ.

ಮಾಹೀಂ ಭಾಗದ ೪ ಸ್ಥಳಗಳಲ್ಲಿ ನಡೆಸಿರುವ ದಾಳಿಯಲ್ಲಿ ಮಾಹೀಂ ದರ್ಗಾದ ಟ್ರಸ್ಟಿ ಸೋಹೆಲ್ ಖಂಡವಾನಿ ಇವರ ಮಾಲಮತ್ತೆ ಸೇರಿದೆ. ಪಾಯಧೂನಿ ಭಾಗದಲ್ಲಿ ೭೧ ವಯಸ್ಸಿನ ವ್ಯಕ್ತಿಯ ಸಂಪತ್ತಿಯ ಮೇಲೆ ದಾಳಿ ನಡೆಸಲಾಯಿತು. ಈ ವ್ಯಕ್ತಿಯು ‘ದಾವುದ್ ಟ್ರಸ್ಟ್’ ಎಂಬ ಹೆಸರಿನ ಸಂಸ್ಥೆ ನಡೆಸುತ್ತಿರುವ ಮಾಹಿತಿ ಇದೆ.

ಸೋಹೆಲ್ ಖಂಡವಾನಿ ಇವನು ಯಾಕೂಬ ಮೆಮನ್ ಇವನ ಸಹಚರನಾಗಿದ್ದ. ಯಾಕೂಬ್ ಮೆಮನ್ ಇವನು ಮುಂಬೈನಲ್ಲಿ ೧೯೯೩ ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಆರೋಪಿ ಟೈಗರ್ ಮೆಮನ್ ನ ಸಹೋದರ. ಅವನಿಗೆ ೨೦೧೫ ನೇ ಇಸ್ವಿಯಲ್ಲಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ತನಿಖಾ ದಳಗಳು ಹಿಂದೆಯೂ ಸೋಹೆಲ್ ಖಂಡವಾನಿಯಿಂದ ಲಕ್ಷಾಂತರ ರೂಪಾಯಿ ವಶಪಡಿಸಿಕೊಂಡಿದ್ದರು.

ರಾಷ್ಟ್ರೀಯ ತನಿಖಾ ದಳದಿಂದ ೩ ಜನ ಸೆರೆ !

ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಸೋಹೆಲ್ ಖಂಡವಾನಿ , ಹಾಗೂ ಗ್ರ್ಯಾಂಟ್ ರೋಡ್ ಭಾಗದಿಂದ ಛೋಟಾ ಶಕೀಲ ನ ಭಾವಮೈದ ಸಲೀಂ ಫ್ರೂಟ್ ಈ ಇಬ್ಬರನ್ನು ವಿಚಾರಣೆಗಾಗಿ ವಶಕ್ಕೆ ಪಡೆದಿದ್ದಾರೆ. ಉದ್ಯೋಗಪತಿ ಸಮೀರ್ ಹಿಂಗಾರ ಇವನನ್ನು ಕೂಡ ವಶಕ್ಕೆ ಪಡೆಯಲಾಗಿದೆ.