ಒಂದು ದೇಶ, ಒಂದು ಪೊಲೀಸ ಸಮವಸ್ತ್ರ, ಈ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಚರ್ಚೆ ನಡೆಸಬೇಕು ! – ಪ್ರಧಾನಿ ಮೋದಿ ಅವರ ಕರೆ

‘ಒಂದು ದೇಶ, ಒಂದು ಪೊಲೀಸ ಸಮವಸ್ತ್ರ’ ಈ ಪರಿಕಲ್ಪನೆಯ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಚರ್ಚಿಸಬೇಕೆಂದು ಪ್ರಧಾನಿ ಮೋದಿಯವರು ಕರೆ ನೀಡಿದ್ದಾರೆ. ಅವರು ‘ವಿಡಿಯೋ ಕಾನ್ಫರೆನ್ಸಿಂಗ್‌’ ಮೂಲಕ ಚಿಂತನ ಶಿಬಿರದಲ್ಲಿ ರಾಜ್ಯದ ಗೃಹ ಸಚಿವರನ್ನು ಸಂಬೋಧಿಸುತ್ತ ಮಾತನಾಡುತ್ತಿದ್ದರು.

ದೇಶದಲ್ಲಿ ಇದೇ ಮೊದಲ ಬಾರಿಗೆ ಮಧ್ಯಪ್ರದೇಶದಲ್ಲಿ ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡಲಿದೆ !

ಸ್ವಾತಂತ್ರ್ಯನಂತರ ಏನಾಗಬೇಕಿತ್ತೋ ಅದು ಈಗ ಎಲ್ಲೋ ಆರಂಭವಾಗುತ್ತಿರುವುದು ಇದು ಎಲ್ಲಾ ಪಕ್ಷಗಳ ಆಡಳಿತಗಾರರಿಗೆ ನಾಚಿಕೆಗೇಡಿನ ಸಂಗತಿ !

ಕೊರೊನಾದ ಲಸಿಕೀಕರಣ ಅಭಿಯಾನ ಮುಗಿದ ನಂತರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ !- ಕೇಂದ್ರ ಗೃಹ ಸಚಿವ ಅಮಿತ ಶಾಹ

ಕೊರೊನಾದ ಲಸಿಕೀಕರಣ ಅಭಿಯಾನ ಮುಗಿದ ನಂತರ ತಕ್ಷಣ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿ ಎ ಎ) ಜಾರಿ ಮಾಡಲಾಗುವುದು, ಎಂದು ಕೇಂದ್ರ ಗೃಹ ಸಚಿವ ಅಮಿತ ಶಹಾ ಇವರು ಘೋಷಣೆ ಮಾಡಿದರು.

ಸಮಾನ ನಾಗರಿಕ ಸಂಹಿತೆ ಸಂವಿಧಾನಕ್ಕೆ ವಿರುದ್ಧ(ವಂತೆ) ! – ಗದ್ದಲವೆಬ್ಬಿಸಿದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ !

ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸಮಾನ ನಾಗರಿಕ ಸಂಹಿತೆಯು ಸಂವಿಧಾನಕ್ಕೆ ವಿರುದ್ಧವಾದದ್ದು ಎಂದು ಹೇಳುತ್ತ ಅದನ್ನು ವಿರೋಧಿಸಿದೆ. ಉತ್ತರಾಖಂಡ ಸರಕಾರವು ಸಮಾನ ನಾಗರಿಕ ಸಂಹಿತೆಯ ಕರಡು ತಯಾರಿಸಲು ಸಮಿತಿಯನ್ನು ರಚಿಸಿದೆ.

ಕಾಶ್ಮೀರಿ ಹಿಂದೂಗಳು, ದಲಿತರು ಇತ್ಯಾದಿಗಳ ಮೇಲಾದ ಅತ್ಯಾಚಾರದ ಹಿಂದಿನ ಸತ್ಯವನ್ನು ಬೆಳಕಿಗೆ ತರಲು ಆಯೋಗವನ್ನು ಸ್ಥಾಪಿಸಬೇಕು ! – ಲೋಕಸಭೆಯಲ್ಲಿ ಭಾಜಪದ ಸಂಸದರ ಒತ್ತಾಯ

ಈ ರೀತಿ ಒತ್ತಾಯಿಸುವ ಸಮಯ ಏಕೆ ಬರುತ್ತದೆ ? ಸ್ವಾತಂತ್ರ್ಯನಂತರ 74 ವರ್ಷಗಳವರೆಗೂ ಅಧಿಕಾರದಲ್ಲಿದ್ದ ಎಲ್ಲಪಕ್ಷದ ಸರಕಾರಗಳು ಈ ರೀತಿ ವಿಚಾರಣೆ ಏಕೆ ಮಾಡಲಿಲ್ಲ ? ಕೇಂದ್ರ ಸರಕಾರವು ಸಮಯ ವ್ಯರ್ಥ ಪಡಿಸದೆ ಈ ರೀತಿಯ ಸಮಿತಿಯನ್ನು ಸ್ಥಾಪಿಸಿ ಸತ್ಯವನ್ನು ಬೆಳಕಿಗೆ ತರಬೇಕು

ಅಮೃತಸರ (ಪಂಜಾಬ) ಇಲ್ಲಿಯ ಸ್ವರ್ಣಮಂದಿರದಲ್ಲಿ ಗುರು ಗ್ರಂಥ ಸಾಹಿಬ್‍ನ್ನು ಅವಮಾನಿಸಲು ಪ್ರಯತ್ನಿಸಿದವನು ಗುಂಪಿನಿಂದಾದ ಹಲ್ಲೆಯಲ್ಲಿ ಮೃತ

ಸಿಕ್ಖರ ಸರ್ವೋಚ್ಚ ಧಾರ್ಮಿಕ ಸ್ಥಳವಾಗಿರುವ ಸ್ವರ್ಣಮಂದಿರದಲ್ಲಿನ ಗುರು ಗ್ರಂಥ ಸಾಹಿಬ್ (ಸಿಕ್ಖರ ಪವಿತ್ರ ಧರ್ಮಗ್ರಂಥ)ನ ಅವಮಾನಿಸಲು ಪ್ರಯತ್ನಿಸಿದವನು ಗುಂಪಿನವರು ನಡೆಸಿದ ಹಲ್ಲೆಯಿಂದಾಗಿ ಮೃತಪಟ್ಟಿರುವ ಘಟನೆ ನಡೆದಿದೆ.

ನಾಗಾಲ್ಯಾಂಡ್‌ನಲ್ಲಿ ಭದ್ರತಾಪಡೆಗಳು ಭಯೋತ್ಪಾದಕರೆಂದು ತಿಳಿದು ನಡೆಸಿದ ಗುಂಡಿನ ಹಾರಾಟದಲ್ಲಿ ೧೩ ನಾಗರಿಕರ ಸಾವು

ಈಶಾನ್ಯ ಭಾರತದಲ್ಲಿನ ನಾಗಾಲ್ಯಾಂಡ ರಾಜ್ಯದಲ್ಲಿ ಡಿಸಂಬರ ೪ರ ಸಂಜೆ ಭದ್ರತಾಪಡೆಗಳಿಂದ ಭಯೋತ್ಪಾದಕರೆಂದು ತಿಳಿದು ನಡೆಸಿದ ಗುಂಡಿನ ಹಾರಾಟದಲ್ಲಿ ೧೩ ನಾಗರಿಕರು ಸಾವಿಗೀಡಾದರು.

ನಕ್ಸಲವಾದದ ಸಮಸ್ಯೆಯನ್ನು 1 ವರ್ಷದೊಳಗೆ ಬಗೆಹರಿಸಬೇಕು ! – ಕೇಂದ್ರೀಯ ಗೃಹಮಂತ್ರಿ ಅಮಿತ ಶಾಹ

ದೇಶದಲ್ಲಿನ ನಕ್ಸಲವಾದದ ಸಮಸ್ಯೆಯನ್ನು ಒಂದು ವರ್ಷದೊಳಗೆ ಬಗೆಹರಿಸಲು ಸಾಧ್ಯವಿತ್ತು ಎಂದಾದರೆ ಈಗಾಗಲೇ ಅದನ್ನು ಬಗೆಹರಿಸುವುದು ಅವಶ್ಯಕವಿತ್ತು ಎಂದು ಜನತೆಗೆ ಅನಿಸಬಹುದು !

ಹಿಂದೂ ಧರ್ಮಕ್ಕೆ ಅಪಾಯವಿಲ್ಲ ! ಮಾಹಿತಿ ಹಕ್ಕು ಅಧಿಕಾರದಡಿಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸರಕಾರದ ಉತ್ತರ !

`ಹಿಂದೂ ಧರ್ಮ ಅಪಾಯದಲ್ಲಿರುವ ಬಗ್ಗೆ ಸಾಕ್ಷಿಗಳನ್ನು ನೀಡಬೇಕು’, ಎಂದು ಮಾಹಿತಿ ಹಕ್ಕುಗಳ ಕಾರ್ಯಕರ್ತ ಮೋಹನಿಶ ಜಬಲಪುರೆ ಇವರು ಭಾಜಪದ ನಾಯಕ ಮತ್ತು ಕೇಂದ್ರ ಗ್ರಹ ಮಂತ್ರಿ ಅಮಿತ ಶಹಾ ಅವರ ಅಧಿಕಾರದಲ್ಲಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ಬೇಡಿಕೆ ಇಟ್ಟಿದ್ದರು.

ಕಡೆಗೂ ಕಾಶ್ಮೀರದಲ್ಲಿನ ಲಾಲ್ ಚೌಕದ ಘಂಟಾಘರನಲ್ಲಿ ಹಾರಾಡಿದ ರಾಷ್ಟ್ರಧ್ವಜ !

ಭಾರತೀಯರ ಸ್ವಾಭಿಮಾನ ಮತ್ತು ಗೌರವದ ಚಿಹ್ನೆಯಾಗಿರುವ ರಾಷ್ಟ್ರಧ್ವಜವನ್ನು ಅಲ್ಲಿ ಹಾರಾಡಿಸುವುದು ಕೇವಲ ಒಂದು ಕನಸಾಗಿತ್ತು