Maharashtra Monsoon Sessions : ಜೂನ್ ೩೦ ರಿಂದ ಮುಂಬಯಿಯಲ್ಲಿ ಶಾಸಕಾಂಗದ ಮಳೆಗಾಲದ ಅಧಿವೇಶನ

ಮುಂಬಯಿ – ಬಹು ಚರ್ಚಿತ ಬಜೆಟ್ ಅಧಿವೇಶನ ಮಾರ್ಚ್ ೨೬ ಕ್ಕೆ ಮುಗಿದಿದೆ. ಜೂನ್ ೩೦ ರಿಂದ ಮುಂಬಯಿಯಲ್ಲಿನ ವಿಧಾನ ಭವನದಲ್ಲಿ ಮಳೆಗಾಲದ ಅಧಿವೇಶನ ಪ್ರಾರಂಭವಾಗುವುದು.

ಬಜೆಟ್ ಅಧಿವೇಶನದಲ್ಲಿ ಪ್ರತಿದಿನ ಸುಮಾರು ೯ ಗಂಟೆ ೭ ನಿಮಿಷ ಕಾರ್ಯಕಲಾಪ !

ಬಜೆಟ್ ಅಧಿವೇಶನದ ಸಮಯದಲ್ಲಿ ೧೬ ದಿನ ಪ್ರತ್ಯಕ್ಷ ಕಲಾಪ ನಡೆದಿದೆ. ವಿವಿಧ ಕಾರಣಗಳಿಂದ ೧ ಗಂಟೆ ೨೫ ನಿಮಿಷ ಸಮಯ ವ್ಯರ್ಥವಾಗಿದೆ. ಸಚಿವರ ಉಪಸ್ಥಿತಿ ಇಲ್ಲದಿರುವುದರಿಂದ ೨೦ ನಿಮಿಷ ವ್ಯರ್ಥವಾಗಿದೆ. ಪ್ರತಿದಿನ ಸುಮಾರು ೯ ಗಂಟೆ ೭ ನಿಮಿಷದಷ್ಟು ಕಾರ್ಯಕಲಾಪ ನಡೆದಿದೆ. ೪೯೧ ಪ್ರಶ್ನೆ ಸ್ವೀಕೃತವಾಗಿವೆ. ಅದರಲ್ಲಿನ ೭೬ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದ್ದಾರೆ. ೨ ಸಾವಿರದ ೫೫೭ ಗಮನಸೆಳೆಯುವ ಸೂಚನೆಗಳು ದೊರೆತಿವೆ. ಅದರಲ್ಲಿನ ೪೪೨ ಸ್ವೀಕರಿಸಲಾಗಿವೆ. ಅದರಲ್ಲಿನ ೧೨೯ ರ ಕುರಿತು ಚರ್ಚೆ ನಡೆದಿದೆ. ವಿಧಾನಸಭೆಯಲ್ಲಿ ೯ ಹಾಗೂ ವಿಧಾನಪರಿಷತ್ತಿನಲ್ಲಿ ೩ ನ್ಯಾಯಾಂಗ ಮಸೂದೆ ಅಂಗೀಕರಿಸಲಾಗಿದೆ. ೪೨ ಸರಕಾರೇತರ ಮಸೂದೆಗಳು ಪಡೆದಿದೆ ಅದರಲ್ಲಿನ ೨೨ ರ ಕುರಿತು ಗಮನ ಹರಿಸಲಾಗಿದೆ, ಎಂದು ವಿಧಾನ ಸಭೆಯ ಅಧ್ಯಕ್ಷ ರಾಹುಲ್ ನಾರ್ವೇಕರ್ ಇವರು ಮಾಹಿತಿ ನೀಡಿದರು.