ಮೆರವಣಿಗೆಯಲ್ಲಿನ ಹಾಡಿಗೆ ಆಕ್ಷೇಪ ವ್ಯಕ್ತಪಡಿಸುತ್ತಾ ಜಾಮ ಮಸೀದಿಯ ಹತ್ತಿರ ದಾಳಿ
ಹಜಾರಿಬಾಗ್ (ಜಾರ್ಖಂಡ) – ಇಲ್ಲಿ ರಾಮನವಮಿಯ ಮೊದಲು ನಡೆಸಲಾಗುವ ‘ಮಂಗಲಾ’ ಮೆರವಣಿಗೆಯ ಮೇಲೆ ಜಾಮಾ ಮಸೀದಿಯ ಹತ್ತಿರ ಮತಾಂಧ ಮುಸಲ್ಮಾನರು ದಾಳಿ ನಡೆಸಿದ ನಂತರ. ವಿಧ್ವಂಸಕ ಕೃತ್ಯಗಳು ನಡೆದವು. ಪರಿಸ್ಥಿತಿಯನ್ನು ಹಿಡಿತಕ್ಕೆ ತರುವುದಕ್ಕಾಗಿ ಪೊಲೀಸರು ಅಶೃವಾಯುವನ್ನು ಉಪಯೋಗಿಸಿದರು ಹಾಗೂ ಲಾಠಿಚಾರ್ಜ್ ಮಾಡುವುದರ ಜೊತೆಗೆ ಗಾಳಿಯಲ್ಲಿ ಗುಂಡುಗಳು ಕೂಡ ಹಾರಿಸಿದರು. ಪ್ರಸ್ತುತ ಅಲ್ಲಿ ಬೃಹತ್ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತು ಮಾಡಲಾಗಿದೆ. ಹಜಾರಿಬಾಗ ಇಲ್ಲಿ ಪ್ರತಿವರ್ಷ ಹೋಳಿ ಹಬ್ಬದ ನಂತರ ಮತ್ತು ರಾಮ ನವಮಿಯವರೆಗೆ ಪ್ರತಿ ಮಂಗಳವಾರ ಮೆರವಣಿಗೆ ನಡೆಯುತ್ತದೆ. ಅದನ್ನು’ ಮಂಗಲಾ’ ಮೆರವಣೆಗೆ ಎಂದು ಕರೆಯುತ್ತಾರೆ.
೧. ಮಂಗಲಾ ಮೆರವಣಿಗೆಯ ಸಮಯದಲ್ಲಿ ಅಖಾಡಾದ ಜನರು ಡೋಲು ಬಾರಿಸುತ್ತಾ ಮೆರವಣಿಗೆ ತೆಗೆಯುತ್ತಾರೆ. ಮೆರವಣಿಗೆಯಲ್ಲಿ ಕೆಲವು ಹಾಡುಗಳು ಹಾಕುತ್ತಾರೆ. ಈ ಮೆರವಣಿಗೆ ಜಾಮಾ ಮಸೀದಿಯ ಹತ್ತಿರ ತಲುಪಿದ ನಂತರ ಮುಸಲ್ಮಾನರು ಹಾಡಿನ ಕುರಿತು ಆಕ್ಷೇಪ ವ್ಯಕ್ತಪಡಿಸಿದರು ಮತ್ತು ವಾದ ವಿವಾದ ನಡೆಸಿದರು. ಅದರ ನಂತರ ಅವರು ಮೆರವಣಿಗೆಯ ಮೇಲೆ ಕಲ್ಲುತೂರಾಟ ನಡೆಸಿದರು. ಇದಕ್ಕೆ ಹಿಂದುಗಳಿಂದ ಕೂಡ ಪ್ರತ್ಯುತ್ತರ ನೀಡಿದೆ.
೨. ಕಲ್ಲು ತೂರಾಟದ ನಂತರ ಪರಿಸ್ಥಿತಿ ಎಷ್ಟೊಂದು ಹದಗೆಟ್ಟಿತು ಅಂದರೆ, ಪೊಲೀಸರು ಅವರಿಗೆ ತಿಳಿಸಿ ಹೇಳುವ ಪ್ರಯತ್ನ ಮಾಡಿದರು ಕೂಡ ಶಾಂತಗೊಳ್ಳಲು ಸಿದ್ದರಿರಲಿಲ್ಲ. ಯಾವಾಗ ಪರಿಸ್ಥಿತಿ ಕೈಮೀರುವುದು ಕಂಡುಬಂದಿತು ಆಗ ಪೊಲೀಸರಿಗೆ ಗಾಳಿಯಲ್ಲಿ ಗುಂಡು ಹಾರಿಸಬೇಕಾಯಿತು.
೩. ಹಿಂದುಗಳ ಪ್ರಕಾರ, ಅವರ ಮೆರವಣಿಗೆ ಶಾಂತಿಯಲ್ಲಿಯೇ ನಡೆಯುತ್ತಿತ್ತು; ಆದರೆ ಮತಾಂಧರು ಬೇಕಂತಲೇ ವಾತಾವರಣ ಹದಗೆಡೆಸಿದರು.
೪. ಹಜಾರಿಬಾಗ ಪೊಲೀಸ ಅಧಿಕಾರಿ ನ್ಯಾನ್ಸಿ ಸಹಾಯ ಇವರು, ಈಗ ಪರಿಸ್ಥಿತಿ ಹಿಡಿತದಲ್ಲಿದೆ. ಮೆರವಣಿಗೆಯ ಹಾಡಿನ ಕುರಿತು ನಿಷೇಧದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಿದರು.
೫. ಪೊಲೀಸರು ಸಿಸಿಟಿವಿ ಮತ್ತು ಡ್ರೋನ್ ಇವುಗಳ ಸಹಾಯದಿಂದ ಆರೋಪಿಗಳ ಗುರುತು ಪತ್ತೆ ಹಚ್ಚುವ ಕಾರ್ಯ ಆರಂಭಿಸಿದ್ದಾರೆ.
ಸಂಪಾದಕೀಯ ನಿಲುವು
|