ದೇಶದಲ್ಲಿನ ನಕ್ಸಲವಾದದ ಸಮಸ್ಯೆಯನ್ನು ಒಂದು ವರ್ಷದೊಳಗೆ ಬಗೆಹರಿಸಲು ಸಾಧ್ಯವಿತ್ತು ಎಂದಾದರೆ ಈಗಾಗಲೇ ಅದನ್ನು ಬಗೆಹರಿಸುವುದು ಅವಶ್ಯಕವಿತ್ತು ಎಂದು ಜನತೆಗೆ ಅನಿಸಬಹುದು ! – ಸಂಪಾದಕರು
ನವದೆಹಲಿ – ನಕ್ಸಲವಾದಿಗಳ ವಿರುದ್ಧದ ಹೋರಾಟವು ಈಗ ಅಂತಿಮ ಹಂತವನ್ನು ತಲುಪಿದೆ. ಅದನ್ನು ಶೀಘ್ರದಲ್ಲಿ ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆಯಿದೆ. ನಕ್ಸಲವಾದಿಗಳ ಹಿಂಸಾಚಾರದಿಂದ ಆಗುತ್ತಿರುವ ಮೃತ್ಯುಗಳ ಸಂಖ್ಯೆ 1 ವರ್ಷದಲ್ಲಿ 200 ಕ್ಕೆ ಇಳಿದಿದೆ. ಮುಂಬರುವ 1 ವರ್ಷದಲ್ಲಿ ನಕ್ಸಲರಿಂದ ತೊಂದರೆಗೊಳಗಾದ ಭಾಗದಲ್ಲಿನ ನಕ್ಸಲವಾದಿಗಳ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಕೇಂದ್ರೀಯ ಗೃಹಮಂತ್ರಿ ಅಮಿತ ಶಾಹರವರು ನಕ್ಸಲರಿಂದ ತೊಂದರೆಗೊಳಗಾದ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಹೇಳಿದರು. ಇದಕ್ಕಾಗಿ ಅವರು ಅನೇಕ ಅಂಶಗಳನ್ನು ಮಂಡಿಸಿದರು. ಇವುಗಳಲ್ಲಿ ನಕ್ಸಲವಾದಿಗಳ ಬಳಿಯಿರುವ ಹಣದ ಪೂರೈಕೆಯನ್ನು ತಡೆಯಲು ಅವರು ಸಂಯುಕ್ತ ರಣ ನೀತಿಯನ್ನು ಅವಲಂಬಿಸಲು ಹೇಳಿದರು. ಈ ಸಭೆಯಲ್ಲಿ ನಕ್ಸಲ್ ಪೀಡಿತ ತೊಂದರೆಗೊಳಗಾದ ರಾಜ್ಯಗಳ ಹತ್ತು ಮುಖ್ಯಮಂತ್ರಿಗಳು, ರಾಜ್ಯಮಂತ್ರಿಗಳು ಮತ್ತು ಉಚ್ಚ ಪದವಿಯಲ್ಲಿರುವ ಅಧಿಕಾರಿಗಳು ಉಪಸ್ಥಿತರಿದ್ದರು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಹ ಚೌಹಾನ, ಬಿಹಾರದ ಮುಖ್ಯಮಂತ್ರಿ ನಿತೀಶ ಕುಮಾರ, ಜಾರ್ಖಂಡ್ ನ ಮುಖ್ಯಮಂತ್ರಿ ಹೇಮಂತ ಸೊರೇನ, ಒಡಿಶಾದ ಮುಖ್ಯಮಂತ್ರಿ ನವೀನ ಪಟ್ನಾಯಕ, ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಮತ್ತು ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ ಉಪಸ್ಥಿತರಿದ್ದರು. ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಛತ್ತೀಸಗಡದ ಮುಖ್ಯಮಂತ್ರಿ ಭೂಪೇಶ ಬಘೆಲ, ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನಮೋಹನ ರೆಡ್ಡಿ ಮತ್ತು ಕೇರಳದ ಮುಖ್ಯಮಂತ್ರಿ ಪಿನರಾಯಿ ವಿಜಯನ ಇವರು ಈ ಸಭೆಯಲ್ಲಿ ಉಪಸ್ಥಿತರಿರಲಿಲ್ಲ; ಆದರೆ ವರಿಷ್ಠ ಅಧಿಕಾರಿಗಳು ಈ ನಾಲ್ಕು ರಾಜ್ಯಗಳನ್ನು ಪ್ರತಿನಿಧಿಸಿದರು.
ಶಾಹರವರು ‘ಒಂದೇ ವರ್ಷದಲ್ಲಿ ಇದಕ್ಕಾಗಿ ಒತ್ತಡ ನಿರ್ಮಾಣ ಮಾಡುವುದು, ವೇಗ ಹೆಚ್ಚಿಸುವುದು ಮತ್ತು ಉತ್ತಮ ಸಮನ್ವಯವನ್ನು ಸಾಧಿಸುವುದು ಆವಶ್ಯಕವಾಗಿದೆ. ನಕ್ಸಲವಾದಿಗಳ ಉತ್ಪನ್ನದ ಮೂಲಗಳನ್ನು ಮುಚ್ಚುವುದು ಅತಿ ಮಹತ್ವದ್ದಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ವ್ಯವಸ್ಥೆಯು ಸಂಘಟಿತವಾಗಿ ನಕ್ಸಲವಾದವನ್ನು ತಡೆಯಲು ಪ್ರಯತ್ನಿಸಬೇಕಿದೆ. ಮುಖ್ಯಮಂತ್ರಿ, ಮುಖ್ಯ ಸಚಿವರು ಮತ್ತು ಪೊಲೀಸ್ ಮಹಾಸಂಚಾಲಕರ ಮಟ್ಟದಲ್ಲಿ ನಿಯಮಿತವಾಗಿ ವರದಿಯನ್ನು ತೆಗೆದುಕೊಂಡರೆ ಕೆಳಗಿನ ಮಟ್ಟದಲ್ಲಿನ ಸಮನ್ವಯದ ಸಮಸ್ಯೆಯು ತನ್ನಷ್ಟಕ್ಕೆ ದೂರವಾಗುವುದು’ ಎಂದು ಹೇಳಿದರು.