ಭೋಪಾಲ್ (ಮಧ್ಯಪ್ರದೇಶ) – ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎಂ.ಬಿ.ಬಿ.ಎಸ್.ನ ಅಧ್ಯಯನವನ್ನು ಹಿಂದಿಯಲ್ಲಿ ಕಲಿಸಲಾಗುತ್ತದೆ. ಇದನ್ನು ಮಧ್ಯಪ್ರದೇಶ ರಾಜ್ಯದಲ್ಲಿ ಪ್ರಾರಂಭಿಸಲಾಯಿತು. ಇದಕ್ಕಾಗಿ, ಹಿಂದಿಯಲ್ಲಿ ಪುಸ್ತಕಗಳನ್ನು ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ಮೂರು ಪುಸ್ತಕಗಳನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಇವರ ಹಸ್ತದಿಂದ ಬಿಡುಗಡೆ ಮಾಡಲಾಯಿತು.
#BreakingNews: Union HM Amit Shah is going to be inaugurating India’s first #MBBS course in #Hindi on October 16th in #Bhopal, #MadhyaPradesh.
Afternoon News | @poonam_burde @ManojSharmaBpl pic.twitter.com/NcY7UwM6Ci
— News18 (@CNNnews18) October 12, 2022
ಇಟಲಿ ಮತ್ತು ಚೀನಾ ತಮ್ಮ ಭಾಷೆಯಲ್ಲಿ ಅಧ್ಯಯನ ಮಾಡಬಹುದಾದರೆ, ಭಾರತದಲ್ಲಿ ಏಕೆ ಸಾಧ್ಯವಿಲ್ಲ ? – ಶಿವರಾಜ್ ಸಿಂಗ್ ಚೌಹಾಣ್
ಈ ಸಂದರ್ಭದಲ್ಲಿ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಇಂದು ಐತಿಹಾಸಿಕ ದಿನವಾಗಿದೆ. ಹಿಂದಿ ಮಾಧ್ಯಮದಲ್ಲಿ ಓದುತ್ತಿರುವ ಬಡ ಕುಟುಂಬಗಳ ಮಕ್ಕಳು ವೈದ್ಯಕೀಯ ಕಾಲೇಜಿಗೆ ತಲುಪುತ್ತಾರೆ; ಆದರೆ ಅವರು ಆಂಗ್ಲದ ಬಲೆಗೆ ಬೀಳುತ್ತಾರೆ. ಅನೇಕರು ವೈದ್ಯಕೀಯ ಶಿಕ್ಷಣವನ್ನು ತೊರೆದರು ಅಥವಾ ಆತ್ಮಹತ್ಯೆ ಮಾಡಿಕೊಂಡರು. ಅಂತಹ ಮಕ್ಕಳು ಹಿಂದಿಯಲ್ಲಿ ಅಧ್ಯಯನ ಮಾಡುವುದು ಸಹಾಯಕವಾಗುತ್ತದೆ. ಈ ಕೆಲಸವನ್ನು ಸ್ವಾತಂತ್ರ್ಯನಂತರವೇ ಮಾಡಬೇಕಿತ್ತು. ಆದರೆ ಅದು ಈಗ ನಡೆಯುತ್ತಿದೆ. ಬ್ರಿಟಿಷರು ಅಲ್ಲಿಂದ ಹೊರಟುಹೋದರು; ಆದರೆ ನಾವು ಬ್ರಿಟಿಷರ ಗುಲಾಮರಾದೆವು. ಅನೇಕ ಜನರು ‘ಇಂಗ್ಲಿಷ್ ಮಾತನಾಡುವುದು ಪ್ರಭಾವ ಬೀರುತ್ತದೆ’ ಎಂದು ಭಾವಿಸುತ್ತಾರೆ. ಇಟಲಿ ಮತ್ತು ಚೀನಾ ತಮ್ಮ ಭಾಷೆಯಲ್ಲಿ ಅಧ್ಯಯನ ಮಾಡಬಹುದಾದರೆ, ಭಾರತದಲ್ಲಿ ಏಕೆ ಸಾಧ್ಯವಿಲ್ಲ ? ಈ ವರ್ಷ ೬ ಎಂಜಿನಿಯರಿಂಗ್ ಮತ್ತು ೬ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ಹಿಂದಿ ಕಲಿಸಲಾಗುವುದು. ನಂತರ ‘ಐ.ಐ.ಟಿ.’ಯಲ್ಲಿ ಹಿಂದಿಯನ್ನು ಸಹ ಕಲಿಸಲಾಗುತ್ತದೆ. ‘ಐ.ಐ.ಎಂ.’ ಅನ್ನು ಹಿಂದಿಯಲ್ಲೂ ಅಧ್ಯಯನ ಮಾಡಲಾಗುವುದು ಎಂದು ಹೇಳಿದರು.
ಸಂಪಾದಕೀಯ ನಿಲುವುಸ್ವಾತಂತ್ರ್ಯನಂತರ ಏನಾಗಬೇಕಿತ್ತೋ ಅದು ಈಗ ಎಲ್ಲೋ ಆರಂಭವಾಗುತ್ತಿರುವುದು ಇದು ಎಲ್ಲಾ ಪಕ್ಷಗಳ ಆಡಳಿತಗಾರರಿಗೆ ನಾಚಿಕೆಗೇಡಿನ ಸಂಗತಿ ! |