ವಾಹನಗಳಿಗೆ ಹಾನಿ

ಆಗ್ರಾ (ಉತ್ತರ ಪ್ರದೇಶ) – ಸಮಾಜವಾದಿ ಪಕ್ಷದ ಸಂಸದ ರಾಮ್‌ಜಿಲಾಲ್ ಸುಮನ್ ಇವರು ಮೇವಾಡದ ರಾಜ ಮಹಾರಾಣಾ ಸಾಂಗಾ ಅವರನ್ನು ರಾಜ್ಯಸಭೆಯಲ್ಲಿ ಮಾತನಾಡುತ್ತಾ ‘ದ್ರೋಹಿ’ ಎಂದು ಕರೆದಿದ್ದರಿಂದ ಅವರ ಮನೆ ಮೇಲೆ ಕರಣಿ ಸೇನೆಯ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಇಲ್ಲಿ ಅವರು ಮನೆಯ ಹೊರಗಿನ ವಾಹನಗಳು ಮತ್ತು ಕುರ್ಚಿಗಳನ್ನು ಧ್ವಂಸಗೊಳಿಸಿದರು. ಇದರಿಂದ ಪೊಲೀಸರು ಕಾರ್ಯಕರ್ತರ ಮೇಲೆ ಲಾಠಿ ಪ್ರಹಾರ ನಡೆಸಿದ್ದಾರೆ. ಈ ದಾಳಿಯಲ್ಲಿ ಕೆಲವು ಪೊಲೀಸರಿಗೆ ಗಾಯಗಳಾಗಿವೆ ಎಂದು ವರದಿಯಾಗಿದೆ. ಸದ್ಯ ಅಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ರಾಣಾ ಸಾಂಗಾ ಅವರು ಬಾಬರ್‌ನನ್ನು ಭಾರತಕ್ಕೆ ಆಹ್ವಾನಿಸಿದ್ದರು ಎಂದು ಸುಳ್ಳು ಆರೋಪ ಮಾಡಿದ್ದರು. ಇತಿಹಾಸಕಾರರ ಪ್ರಕಾರ, ರಾಣಾ ಸಾಂಗಾ ಅವರು ಅಂದಿನ ಭಾರತವನ್ನು ಆಳುತ್ತಿದ್ದ ಇಬ್ರಾಹಿಂ ಲೋಧಿಯ ವಿರುದ್ಧ ಹೋರಾಡಲು ಬಾಬರ್‌ನನ್ನು ಆಹ್ವಾನಿಸಿರಲಿಲ್ಲ.
ಸಂಪಾದಕೀಯ ನಿಲುವುಇಂತಹ ಸಂಸದನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಬೇಕು ಮತ್ತು ಆತನ ಸಂಸದ ಸ್ಥಾನವನ್ನೂ ರದ್ದುಗೊಳಿಸಬೇಕು, ಆಗ ಮಾತ್ರ ಇತರರು ಇಂತಹ ಹೇಳಿಕೆಗಳನ್ನು ನೀಡುವ ಮೊದಲು 10 ಬಾರಿ ಯೋಚಿಸುತ್ತಾರೆ! |