Modi Ramzan Gift Muslims: ಭಾಜಪದಿಂದ ಈದ್ ಪ್ರಯುಕ್ತ 32 ಲಕ್ಷ ಮುಸ್ಲಿಂ ಕುಟುಂಬಗಳಿಗೆ “ಸೌಗಾತ್ ಎ ಮೋದಿ” ಉಡುಗೊರೆ !

ನವದೆಹಲಿ – ಈದ್ ಹಬ್ಬದ ಪ್ರಯುಕ್ತ ಭಾಜಪ ಮುಸ್ಲಿಂ ಸಮುದಾಯಕ್ಕೆ ವಿಶೇಷ ಉಡುಗೊರೆ ನೀಡಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾಜಪದ ಅಲ್ಪಸಂಖ್ಯಾತ ಮೋರ್ಚಾ ದೇಶದ 32 ಲಕ್ಷ ಬಡ ಮುಸ್ಲಿಂ ಕುಟುಂಬಗಳಿಗೆ ಈದ್‌ಗಾಗಿ “ಸೌಗಾತ್ ಎ ಮೋದಿ” ಉಡುಗೊರೆ ನೀಡಲಿದೆ. ಇದರಲ್ಲಿ ಆಹಾರ ಪದಾರ್ಥಗಳ ಜೊತೆಗೆ ಬಟ್ಟೆ ಮತ್ತು ಇತರ ವಸ್ತುಗಳು ಇರುತ್ತವೆ.

1. ಭಾಜಪ ಅಲ್ಪಸಂಖ್ಯಾತ ಮೋರ್ಚಾದ 32 ಸಾವಿರ ಪದಾಧಿಕಾರಿಗಳು ದೇಶದ 3 ಸಾವಿರ ಮಸೀದಿಗಳಿಗೆ ತೆರಳಿ ಈ ಉಡುಗೊರೆಗಳನ್ನು ವಿತರಿಸಲಿದ್ದಾರೆ.

2. ಭಾಜಪಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಮಾರ್ಗದರ್ಶನದಲ್ಲಿ ಮಾರ್ಚ್ 25 ರಂದು ದೆಹಲಿಯ ನಿಜಾಮುದ್ದೀನ್‌ನಿಂದ ಈ ಅಭಿಯಾನ ಆರಂಭಿಸಲಾಗಿದೆ.

3. “ಈ ಅಭಿಯಾನದ ಅಡಿಯಲ್ಲಿ ಭಾಜಪ ಅಗತ್ಯವಿರುವ ಮುಸ್ಲಿಂ ಸಮುದಾಯವನ್ನು ತಲುಪಲಿದೆ. ರಂಜಾನ್‌ನ ಪವಿತ್ರ ತಿಂಗಳಲ್ಲಿ ಬಡ ಮುಸ್ಲಿಂ ಕುಟುಂಬಗಳಿಗೆ ಸಹಾಯ ಮಾಡಲು ಭಾಜಪ ಒತ್ತು ನೀಡಿದೆ. ಇದರಿಂದ ಧಾರ್ಮಿಕ ಸೌಹಾರ್ದತೆ ಹೆಚ್ಚಿಸಲು ಸಹಾಯವಾಗುತ್ತದೆ” ಎಂದು ಭಾಜಪ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಭಾಜಪ ಮುಸ್ಲಿಮರನ್ನು ಎಷ್ಟು ಹತ್ತಿರ ಮಾಡಲು ಪ್ರಯತ್ನಿಸಿದರೂ ಮುಸ್ಲಿಮರು ಅವರಿಗೆ ಮತ ನೀಡುವುದಿಲ್ಲ, ಇದು ಈವರೆಗಿನ ಅನೇಕ ಚುನಾವಣೆಗಳಲ್ಲಿ ಸಾಬೀತಾಗಿದೆ. ಆದ್ದರಿಂದ ಭಾಜಪ ತನ್ನ ಶಕ್ತಿ ಮತ್ತು ಹಣವನ್ನು ಮುಸ್ಲಿಮರಿಗಾಗಿ ವ್ಯರ್ಥ ಮಾಡುವ ಬದಲು ಅದನ್ನು ಹಿಂದೂಗಳ ಕಲ್ಯಾಣಕ್ಕಾಗಿ ಬಳಸಬೇಕು. ಇದರಿಂದ ಪಕ್ಷಕ್ಕೆ ಖಂಡಿತವಾಗಿಯೂ ಲಾಭವಾಗುತ್ತದೆ ಎಂದು ಹಿಂದೂಗಳು ಭಾವಿಸುತ್ತಾರೆ!