Murder Accused Acquitted In Japan : ಜಪಾನದಲ್ಲಿ ಹತ್ಯೆಯ ಪ್ರಕರಣದಲ್ಲಿ ೪೭ ವರ್ಷ ಜೈಲು ಶಿಕ್ಷೆ ಅನುಭವಿಸಿದ ನಂತರ ಆರೋಪಿಯ ಖುಲಾಸೆ

ಜಪಾನ್ ಸರಕಾರ ನಷ್ಟ ಪರಿಹಾರ ಎಂದು ೧೨ ಕೋಟಿ ರೂಪಾಯಿ ನೀಡಲಿದೆ

ಟೋಕಿಯೋ (ಜಪಾನ್) – ಜಪಾನದಲ್ಲಿ ಹತ್ಯೆಯ ಪ್ರಕರಣದಲ್ಲಿ ೪೭ ವರ್ಷ ಜೈಲು ಶಿಕ್ಷೆ ಅನುಭವಿಸಿದ ನಂತರ ಖುಲಾಸೆಗೊಳಿಸಿದ ೮೯ ವರ್ಷದ ಇವಾವೋ ಹಾಕಾಮಾತ ಇವರಿಗೆ ಜಪಾನ್ ಸರಕಾರ ೧೨ ಕೋಟಿ ರೂಪಾಯಿ ಪರಿಹಾರ ನೀಡುವ ನಿರ್ಣಯ ತೆಗೆದುಕೊಂಡಿದೆ. ಆರೋಪ ಸಾಬೀತುಪಡಿಸಲು ಸುಳ್ಳು ಸಾಕ್ಷಿಗಳು ಪ್ರಸ್ತುತಪಡಿಸಲಾಗಿದ್ದವು, ಇದು ಬಹಿರಂಗವಾದ ನಂತರ ಅವರನ್ನು ಬಿಡುಗಡೆಗೊಳಿಸಲಾಗಿದೆ.

೧. ೧೯೬೬ ರಲ್ಲಿ ಹಾಕಾಮಾತ ಇವರಿಗೆ ಅವರ ಪ್ರಮುಖ, ಅವರ ಪತ್ನಿ ಮತ್ತು ಅವರ ಇಬ್ಬರು ಮಕ್ಕಳ ಹತ್ಯೆ ಮಾಡಿರುವುದರ ಕುರಿತು ಅವರ ಮನೆಗೆ ಬೆಂಕಿ ಹಚ್ಚಿರುವ ಬಗ್ಗೆ ಮತ್ತು ೨ ಲಕ್ಷ ಏನ್ (ಜಪಾನಿ ಕರೆನ್ಸಿ) ಕಳ್ಳತನ ಮಾಡಿರುವ ಬಗ್ಗೆ ಶಿಕ್ಷೆ ವಿಧಿಸಲಾಗಿತ್ತು.

೨. ಕಳೆದ ವರ್ಷ ಸಪ್ಟೆಂಬರ್‍‌ನಲ್ಲಿ ಜಪಾನದಲ್ಲಿನ ಶಿಝುವೋಕ ನ್ಯಾಯಾಲಯವು ಅವರನ್ನು ಎಲ್ಲಾ ಆರೋಪದಿಂದ ಖುಲಾಸೆಗೊಳಿಸಲಾಯಿತು.

೩. ಹಾಕಾಮಾತ ಇವರ ಸಹೋದರಿ ಹಿದೆಕೋ ಇವರು ಅವರ ಸಹೋದರನನ್ನು ಅಮಾಯಕ ಎಂದು ಸಾಬೀತಪಡಿಸುವುದಕ್ಕಾಗಿ ಸಾಕ್ಷಿಗಳನ್ನು ಒಗ್ಗೂಡಿಸಲು ವರ್ಷಗಟ್ಟಲೆ ಕಠಿಣ ಪರಿಶ್ರಮ ಪಟ್ಟರು. ಅದರ ನಂತರ ನ್ಯಾಯಾಲಯವು ೨೦೧೪ ರಲ್ಲಿ ಮತ್ತೆ ಮೊಕದ್ದಮೆಯ ವಿಚಾರಣೆ ಆರಂಭಿಸಿತು ಮತ್ತು ಹಾಕಾಮಾತ ಇವರನ್ನು ಬಿಡುಗಡೆಗೊಳಿಸಿತು.

೪. ಹಾಕಾಮಾತ ಇವರು ಮೊದಲು ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದರು; ಆದರೆ ನಂತರ ಅವರು ಆರೋಪವನ್ನು ಸ್ವೀಕರಿಸಿದರು. ವಿಚಾರಣೆಯ ಸಮಯದಲ್ಲಿ ಹಾಕಾಮಾತ ಇವರಿಗೆ ಥಳಿಸಲಾಗಿತ್ತು ಮತ್ತು ಅವರಿಗೆ ಆರೋಪವನ್ನು ಸ್ವೀಕರಿಸಲು ಅನಿವಾರ್ಯ ಗೊಳಿಸಿರುವುದು ಬೆಳಕಿಗೆ ಬಂದಿತ್ತು.

ಸಂಪಾದಕೀಯ ನಿಲುವು

ಭಾರತದಲ್ಲಿ ಇಂತಹ ಅನೇಕ ಘಟನೆಗಳು ಘಟಿಸುತ್ತಿರುತ್ತವೆ; ಆದರೆ ಎಂದಿಗೂ ಸರಕಾರ ಅಥವಾ ಸಂಬಂಧಪಟ್ಟ ಇಲಾಖೆಯಿಂದ ೧ ರೂಪಾಯಿ ಕೂಡ ಪರಿಹಾರ ಸಂಬಂಧಿತರಿಗೆ ದೊರೆಯುವುದಿಲ್ಲ. ಜಪಾನ್ ಹಾಗೆ ಭಾರತದಲ್ಲಿ ಸಂವೇದನಶೀಲತೆ ಮತ್ತು ಮನುಷ್ಯತ್ವ ಯಾವಾಗ ಬರುವುದು ?