ಭಾರತದ ನಂದನವನ ವಾಗಿರುವ ಕಾಶ್ಮೀರದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸುವುದೆಂದರೆ ಒಂದು ಕಾಲದಲ್ಲಿ ಕಾರಾಗೃಹದಲ್ಲಿ ಕೊಳೆಯುವುದು ಎಂದೇ ಆಗಿತ್ತು. ಅಲ್ಲಿಯ ಮತಾಂಧ ನಾಯಕರಿಂದ ಸಾಮಾನ್ಯ ಮತಾಂಧವರೆಗೆ ಪ್ರತಿಯೊಬ್ಬರು ‘ಯಾರು ತನ್ನ ತಾಯಿಯ ಹಾಲನ್ನು ಕುಡಿದಿದ್ದಾರೆಯೋ, ಅವರು ಕಾಶ್ಮೀರದ ಲಾಲ್ ಚೌಕದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಿ’, ಎಂದು ಸವಾಲೊಡ್ಡುತ್ತಿದ್ದರು. ಸ್ವಾತಂತ್ರ್ಯ ದಿನ ಮತ್ತು ಗಣರಾಜ್ಯೋತ್ಸವ ದಿನ ಈ ಮೊದಲು ಕಾಶ್ಮೀರದ ಕಣಿವೆಯಲ್ಲಿ ಮತ್ತು ವಿಶೇಷವಾಗಿ ಶ್ರೀನಗರದಲ್ಲಿ ಈ ರೀತಿಯ ಘೋಷಣೆಯ ಭಿತ್ತಿಪತ್ರಗಳನ್ನು ಹಚ್ಚುತ್ತಿದ್ದರು. ಭಾರತೀಯರ ಸ್ವಾಭಿಮಾನ ಮತ್ತು ಗೌರವದ ಚಿಹ್ನೆಯಾಗಿರುವ ರಾಷ್ಟ್ರಧ್ವಜವನ್ನು ಅಲ್ಲಿ ಹಾರಾಡಿಸುವುದು ಕೇವಲ ಒಂದು ಕನಸಾಗಿತ್ತು; ಆದರೆ ಆಗಸ್ಟ್ 5 2019 ರಂದು ಈ ಸುವರ್ಣದಿನ ಉದಯಿಸಿತು. ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಗೃಹ ಸಚಿವ ಶ್ರೀ. ಅಮಿತ ಶಾಹ ಅವರು ತಮ್ಮ ರಾಜಕೀಯ ಇಚ್ಛಾಶಕ್ತಿಯ ಬಲದಿಂದ ಭಾರತದಿಂದ ಕಾಶ್ಮೀರವನ್ನು ಪ್ರತ್ಯೇಕಿಸುತ್ತಿದ್ದ ಮಾಡುವ ವಿಧಿ 370 ಮತ್ತು 35 ಅ ಈ ವಿಷದ ಬಳ್ಳಿಯನ್ನು ಬೇರುಸಹಿತ ಕಿತ್ತುಹಾಕಿದರು. ಎಲ್ಲ ಭಾರತೀಯರ ಅಂತಃಕರಣದಲ್ಲಿ ರಾಷ್ಟ್ರಭಕ್ತಿಯ ಸಣ್ಣದಾಗಿ ಬೆಳಗುತ್ತಿದ್ದ ಜ್ಯೋತಿಯ ಮೇಲಿನ ಮಸಿಯನ್ನು ತೆಗೆದರು. ಆದ್ದರಿಂದ ಅದೇ ರಾಷ್ಟ್ರಭಕ್ತಿಯ ಜ್ಯೋತಿಯು 2021 ರ ಸ್ವಾತಂತ್ರ್ಯ ದಿನದ ಮೊದಲೇ ಶ್ರೀನಗರದ ಲಾಲ್ ಚೌಕ್‍ನ ‘ಘಂಟಾಘರ್’ ಎಂಬ ಹೆಸರಿನ ವಾಸ್ತುವಿನಲ್ಲಿ ರಾಷ್ಟ್ರಧ್ವಜ ತ್ರಿವರ್ಣ ಬಣ್ಣಗಳಲ್ಲಿ ಹೊಳೆಯುತ್ತಿದೆ ಮತ್ತು ಸಂಪೂರ್ಣ ಜಗತ್ತಿಗೆ ‘ಅಸೇತುಹಿಮಾಚಲ ‘ಭಾರತ, ಶ್ರೇಷ್ಠ ಭಾರತ, ವಿಶ್ವವಂದ್ಯ ಭಾರತ ಮತ್ತು ವಿಶ್ವಗುರು ಭಾರತ’ ಎಂಬ ಸಂದೇಶವನ್ನು ಅಭಿಮಾನದಿಂದ ನೀಡುತ್ತಿದೆ.
Clock Tower at Srinagar’s Lal Chowk illuminated in tricolour https://t.co/MqueRmRx7D
— TOI India (@TOIIndiaNews) August 7, 2021