ಕೆಲವರು ಸಮಾಜದಲ್ಲಿ ಇನ್ನಷ್ಟು ಒಡಕು ತರಲು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜನ್ಮಸಿದ್ಧ ಹಕ್ಕು ಎಂದು ಪರಿಗಣಿಸುತ್ತಾರೆ ! – ಯೋಗಿ ಆದಿತ್ಯನಾಥ

ಕುಣಾಲ ಕಾಮ್ರಾ ಪ್ರಕರಣದಲ್ಲಿ ಯೋಗಿ ಆದಿತ್ಯನಾಥ್ ಹೇಳಿಕೆ

ಕುಣಾಲ್ ಕಾಮ್ರಾ ಮತ್ತು ಯೋಗಿ ಆದಿತ್ಯನಾಥ್

ನವದೆಹಲಿ – ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಇತರರ ಮೇಲೆ ವೈಯಕ್ತಿಕ ದಾಳಿ ಮಾಡಲು ಬಳಸಲಾಗುವುದಿಲ್ಲ; ಆದರೆ ದುರದೃಷ್ಟವಶಾತ್, ಕೆಲವರು ಸಮಾಜದಲ್ಲಿ ಇನ್ನಷ್ಟು ಒಡಕು ತರಲು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜನ್ಮಸಿದ್ಧ ಹಕ್ಕು ಎಂದು ಪರಿಗಣಿಸುತ್ತಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುಣಾಲ್ ಕಾಮ್ರಾ ಪ್ರಕರಣದಲ್ಲಿ ಹೇಳಿಕೆ ನೀಡಿದ್ದಾರೆ. “ಯಾರಿಗೂ ಸಮಾಜ ಒಡೆಯುವ ಅಥವಾ ನಿರ್ದಿಷ್ಟ ವ್ಯಕ್ತಿಯ ಬಗ್ಗೆ ಅಸಭ್ಯ ಟೀಕೆ ಮಾಡುವ ಹಕ್ಕಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹಾಸ್ಯ ಕಲಾವಿದ ಕುಣಾಲ್ ಕಾಮ್ರಾ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಬಗ್ಗೆ ಕೆಲವು ಟೀಕೆಗಳನ್ನು ಮಾಡಿದ್ದರು. ನಂತರ ಅವರ ಮೇಲೆ ಟೀಕೆಗಳು ವ್ಯಕ್ತವಾಗಿದ್ದವು.