ಕಾಶ್ಮೀರಿ ಹಿಂದೂಗಳು, ದಲಿತರು ಇತ್ಯಾದಿಗಳ ಮೇಲಾದ ಅತ್ಯಾಚಾರದ ಹಿಂದಿನ ಸತ್ಯವನ್ನು ಬೆಳಕಿಗೆ ತರಲು ಆಯೋಗವನ್ನು ಸ್ಥಾಪಿಸಬೇಕು ! – ಲೋಕಸಭೆಯಲ್ಲಿ ಭಾಜಪದ ಸಂಸದರ ಒತ್ತಾಯ

ಈ ರೀತಿ ಒತ್ತಾಯಿಸುವ ಸಮಯ ಏಕೆ ಬರುತ್ತದೆ ? ಸ್ವಾತಂತ್ರ್ಯನಂತರ 74 ವರ್ಷಗಳವರೆಗೂ ಅಧಿಕಾರದಲ್ಲಿದ್ದ ಎಲ್ಲಪಕ್ಷದ ಸರಕಾರಗಳು ಈ ರೀತಿ ವಿಚಾರಣೆ ಏಕೆ ಮಾಡಲಿಲ್ಲ ? ಕೇಂದ್ರ ಸರಕಾರವು ಸಮಯ ವ್ಯರ್ಥ ಪಡಿಸದೆ ಈ ರೀತಿಯ ಸಮಿತಿಯನ್ನು ಸ್ಥಾಪಿಸಿ ಸತ್ಯವನ್ನು ಬೆಳಕಿಗೆ ತರಬೇಕು ! -ಸಂಪಾದಕರು 

ಅರವಿಂದ ಶರ್ಮಾ

ನವ ದೆಹಲಿ – ಜಮ್ಮೂ ಕಾಶ್ಮೀರದಲ್ಲಿ ಹಿಂದೂಗಳ ಮೇಲೆ ಹಾಗೂ ದಲಿತರ ಮೇಲೆ ನಡೆದ ಅತ್ಯಾಚಾರದ ಹಿಂದಿನ ಸತ್ಯವನ್ನು ಬೆಳಕಿಗೆ ತರಲು ಸರ್ವೋಚ್ಚ ನ್ಯಾಯಾಧೀಶರ ಅಧ್ಯಕ್ಷತೆಯ ನೇತೃತ್ವದಲ್ಲಿ ಒಂದು ಸಮಿತಿಯನ್ನು ಸ್ಥಾಪಿಸಬೇಕು, ಎಂದು ಹರಿಯಾಣಾದ ರೊಹತಕದಲ್ಲಿನ ಭಾಜಪದ ಲೋಕಸಭಾ ಸಂಸದ ಅರವಿಂದ ಶರ್ಮಾ ಇವರು ಲೋಕಸಭೆಯಲ್ಲಿ ಒತ್ತಾಯಿಸಿದರು. ಅವರು ಕೇಂದ್ರ ಗೃಹಸಚಿವ ಅಮಿತ ಶಹಾರವರ ಬಳಿ ಒತ್ತಾಯಿಸಿದ್ದಾರೆ.