ಹಿಂದೂ ಧರ್ಮಕ್ಕೆ ಅಪಾಯವಿಲ್ಲ ! ಮಾಹಿತಿ ಹಕ್ಕು ಅಧಿಕಾರದಡಿಯಲ್ಲಿ ಕೇಳಿದ ಪ್ರಶ್ನೆಗೆ ಕೇಂದ್ರ ಸರಕಾರದ ಉತ್ತರ !

ಹಿಂದೂಧರ್ಮ ಅಪಾಯದಲ್ಲಿದೆ ಎಂಬ ಭಾಜಪದ ನಾಯಕರ ಹೇಳಿಕೆಗೆ ಮಾಹಿತಿ ಹಕ್ಕುಗಳ ಕಾರ್ಯಕರ್ತ ಮೋಹನೀಶ ಜಬಲಪುರೆ ಇವರ ಆಕ್ಷೇಪ

ಕೇಂದ್ರದ ಗೃಹ ಸಚಿವಾಲಯದ ಬಳಿ ಮಾಹಿತಿ ವಿಚಾರಣೆ

ದೇಶದಲ್ಲಿ ಲವ್ ಜಿಹಾದ್, ಮತಾಂತರ, ಹಿಂದುತ್ವನಿಷ್ಠರ ಹತ್ಯೆ ಮುಂತಾದ ಸಂಕಷ್ಟಗಳಿಂದ ಹಿಂದೂಗಳು ಅಪಾಯದಲ್ಲಿದ್ದಾರೆ. ಈ ನೈಜ ಸ್ಥಿತಿಯು ಜಗಜ್ಜಾಹೀರಾಗಿದೆ. ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂಗಳ ಪ್ರಭಾವಿ ಸಂಘಟನೆಯ ಅವಶ್ಯಕತೆ ಇದೆ !- ಸಂಪಾದಕರು

ಕೇಂದ್ರ ಗ್ರಹ ಮಂತ್ರಿ ಅಮಿತ ಶಹಾ

ನಾಗಪುರ – ‘ಹಿಂದೂಧರ್ಮಕ್ಕೆ ಯಾವುದೇ ತರಹದ ಅಪಾಯವಿಲ್ಲ ಮತ್ತು ಈ ಸಂದರ್ಭದಲ್ಲಿ ಯಾವುದೇ ಬಲವಾದ ಸಾಕ್ಷಾಧಾರ ಇಲ್ಲ’, ಎಂದು ಸ್ಪಷ್ಟಪಡಿಸುತ್ತಾ ಕೇಂದ್ರ ಗೃಹ ಸಚಿವಾಲಯವು ಈ ಸಂದರ್ಭದ ಎಲ್ಲಾ ಪ್ರಶ್ನೆಗಳನ್ನು ತಳ್ಳಿಹಾಕಿದೆ. `ಹಿಂದೂ ಧರ್ಮ ಅಪಾಯದಲ್ಲಿರುವ ಬಗ್ಗೆ ಸಾಕ್ಷಿಗಳನ್ನು ನೀಡಬೇಕು’, ಎಂದು ಮಾಹಿತಿ ಹಕ್ಕುಗಳ ಕಾರ್ಯಕರ್ತ ಮೋಹನಿಶ ಜಬಲಪುರೆ ಇವರು ಭಾಜಪದ ನಾಯಕ ಮತ್ತು ಕೇಂದ್ರ ಗ್ರಹ ಮಂತ್ರಿ ಅಮಿತ ಶಹಾ ಅವರ ಅಧಿಕಾರದಲ್ಲಿರುವ ಕೇಂದ್ರ ಗೃಹ ಸಚಿವಾಲಯಕ್ಕೆ ಬೇಡಿಕೆ ಇಟ್ಟಿದ್ದರು.

ಜಬಲಪುರೆ ಇವರು ಆಗಸ್ಟ್ 31 ರಂದು ಮಾಹಿತಿ ಹಕ್ಕು ಅಧಿಕಾರದ ಅಂತರ್ಗತ ಹಿಂದೂ ಧರ್ಮಕ್ಕೆ ಅಪಾಯವಿರುವ ಬಗ್ಗೆ ಮಾಹಿತಿಯನ್ನು ಕೇಳಿದ್ದರು. ಇದರ ಬಗ್ಗೆ ಗೃಹ ಸಚಿವಾಲಯದ ಮುಖ್ಯ ಮಾಹಿತಿ ಹಕ್ಕುಗಳ (ಆಂತರಿಕ ಸುರಕ್ಷೆ) ಅಧಿಕಾರಿ ವಿ.ಎಸ್.ರಾಣಾ ಇವರು ಮೇಲಿನಂತೆ ಉತ್ತರಿಸಿದರು.

‘ಮಾಹಿತಿ ಹಕ್ಕುಗಳ ಕಾನೂನಿನ ಪ್ರಕಾರ ಮಾಹಿತಿ ಅಧಿಕಾರಿಗಳು ತಮ್ಮ ಹತ್ತಿರ ಲಭ್ಯವಿರುವ ಅಥವಾ ಕಾರ್ಯಕ್ಷೇತ್ರಕ್ಕೆ ಬರುವ ಮಾಹಿತಿಯನ್ನು ಲಭ್ಯ ಮಾಡಿ ಕೊಡಬಲ್ಲರು. ಯಾವುದಾದರೂ ಸೂಚನೆಯ ವ್ಯಾಖ್ಯೆ ಮಾಡುವುದು ಅಥವಾ ಅರ್ಜಿದಾರನು ಮಂಡಿಸಿದ ಸಮಸ್ಯೆಯನ್ನು ಪರಿಹರಿಸುವುದು ಅಥವಾ ಕಾಲ್ಪನಿಕ ಪ್ರಶ್ನೆಗಳಿಗೆ ಉತ್ತರ ನೀಡುವುದು ಅಪೇಕ್ಷಿತವಿಲ್ಲ’, ಎಂದು ಸ್ಪಷ್ಟಪಡಿಸಿ ‘ರಾಣಾ’ ಇವರು ಈ ವಿಷಯ ಕಾಲ್ಪನಿಕವಾಗಿದೆ ಎಂದು ರೇಖಾಂಕಿತ ಮಾಡಿದ್ದಾರೆ’, ಎಂದು ಜಬಲಪುರೆ ಇವರು ಹೇಳಿದ್ದಾರೆ.