ಸಂಭಲ್ (ಉತ್ತರ ಪ್ರದೇಶ) – ಇಲ್ಲಿ ಮಾರ್ಚ್ 30 ರ ಈದ್ ಹಿನ್ನೆಲೆಯಲ್ಲಿ ಪೊಲೀಸರು ಮಸೀದಿ ಮತ್ತು ಈದ್ಗಾ ಮೈದಾನದಲ್ಲಿ ಮಾತ್ರ ನಮಾಜ್ ಗಾಗಿ ಅನುಮತಿ ನೀಡಿದ್ದಾರೆ. ಮನೆಗಳ ಮೇಲ್ಛಾವಣಿ, ರಸ್ತೆಗಳು, ಫುಟ್‌ಪಾತ್ ಇತ್ಯಾದಿಗಳಲ್ಲಿ ನಮಾಜ್ ನಿಷೇಧಿಸಲಾಗಿದೆ. ಈ ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಸಂಭಲ್‌ನ ಸೂಕ್ಷ್ಮ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಆಡಳಿತವು ಈದ್ ಮತ್ತು ಚೈತ್ರ ನವರಾತ್ರಿ ಉತ್ಸವಗಳ ಹಿನ್ನೆಲೆಯಲ್ಲಿ ಶಾಂತಿ ಸಮಿತಿ ಸಭೆಯನ್ನು ಕರೆದಿತ್ತು. ಅದರಲ್ಲಿ ಈ ಆದೇಶದ ಬಗ್ಗೆ ಮಾಹಿತಿ ನೀಡಲಾಯಿತು.
ಸಂಪಾದಕೀಯ ನಿಲುವುಇಡೀ ದೇಶದಲ್ಲಿ ರಸ್ತೆಗಳಲ್ಲಿ ನಮಾಜ್ ಗಾಗಿ ಎಂದಿಗೂ ಅನುಮತಿ ನೀಡಬಾರದು. ಯಾರಾದರೂ ಹಾಗೆ ಮಾಡಿದರೆ, ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಅವಶ್ಯಕ! |