ಅಮೃತಸರ (ಪಂಜಾಬ) ಇಲ್ಲಿಯ ಸ್ವರ್ಣಮಂದಿರದಲ್ಲಿ ಗುರು ಗ್ರಂಥ ಸಾಹಿಬ್‍ನ್ನು ಅವಮಾನಿಸಲು ಪ್ರಯತ್ನಿಸಿದವನು ಗುಂಪಿನಿಂದಾದ ಹಲ್ಲೆಯಲ್ಲಿ ಮೃತ

ಪಾಕಿಸ್ತಾನದಲ್ಲಿ ಈಶನಿಂದನೆ ಮಾಡುವವನನ್ನು ಗುಂಪೊಂದು ಥಳಿಸಿ ಜೀವಂತವಾಗಿ ಸುಡುತ್ತದೆ, ಪಂಜಾಬ್‍ನಲ್ಲಿ ಧಾರ್ಮಿಕ ಸ್ಥಳವನ್ನು ಅವಮಾನಿಸಿದವನನ್ನು ಗುಂಪಿನವರು ಸಾಯಿಸುತ್ತಾರೆ. ಇನ್ನೊಂದೆಡೆ ಹಿಂದೂಗಳು ಅವರ ಧಾರ್ಮಿಕ ಅಂಶಗಳನ್ನು ಅವಮಾನಿಸುವ ವಿಷಯವಾಗಿ ಕಾನೂನಿನ ಮಾರ್ಗದಿಂದ ಏನಾದರೂ ಮತ್ತು ಅದನ್ನು ಸಹ ಯಾವಾಗಲಾದರೊಮ್ಮೆ ಕೃತಿ ಮಾಡಲು ಪ್ರಯತ್ನಿಸುತ್ತಾರೆ !- ಸಂಪಾದಕರು 

ಅಮೃತಸರ (ಪಂಜಾಬ) – ಇಲ್ಲಿಯ ಸಿಕ್ಖರ ಸರ್ವೋಚ್ಚ ಧಾರ್ಮಿಕ ಸ್ಥಳವಾಗಿರುವ ಸ್ವರ್ಣಮಂದಿರದಲ್ಲಿನ ಗುರು ಗ್ರಂಥ ಸಾಹಿಬ್ (ಸಿಕ್ಖರ ಪವಿತ್ರ ಧರ್ಮಗ್ರಂಥ)ನ ಅವಮಾನಿಸಲು ಪ್ರಯತ್ನಿಸಿದವನು ಗುಂಪಿನವರು ನಡೆಸಿದ ಹಲ್ಲೆಯಿಂದಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮುಖ್ಯಮಂತ್ರಿ ಚರಣ್‍ಜೀತ ಸಿಂಹ ಚೆನ್ನಿ ಇವರು ಸಹ ಈ ಘಟನೆಯನ್ನು ಖಂಡಿಸಿ ವಿಚಾರಣೆಯ ಆದೇಶ ನೀಡಿದ್ದಾರೆ.

1. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ರೆಹರಾಸ ಸಾಹಿಬ್ ಪಾಠ (ಸಂಜೆಯ ಪ್ರಾರ್ಥನೆ) ನಡೆಯುತ್ತಿರುವಾಗ ಒಬ್ಬ ಅಪರಿಚಿತ ವ್ಯಕ್ತಿ ಕಟ್ಟಡದಿಂದ ಕೆಳಗೆ ಜಿಗಿದು ಮತ್ತು ನಾಟಕೀಯವಾಗಿ ಗುರುಗ್ರಂಥ ಸಾಹಿಬ್ ಎದುರು ಇಟ್ಟಿದ್ದ ಕತ್ತಿಗೆ ಮುಟ್ಟಿ ಅಪವಿತ್ರಗೊಳಿಸಲು ಪ್ರಯತ್ನಿಸಿದನು. ಈ ಬಗ್ಗೆ ಅಲ್ಲಿಯ ಗುಂಪಿನವರು ಯುವಕನನ್ನು ಹೊರಗೆ ಕರೆದುಕೊಂಡು ಹೋಗಿ ಮತ್ತು ಹಿಗ್ಗಾಮುಗ್ಗಾ ಥಳಿಸಿದರು. ಈ ಥಳಿತದಲ್ಲಿ ಯುವಕ ಸಾವನ್ನಪ್ಪಿದನು. ಯುವಕನ ಮೃತದೇಹವನ್ನು ಶವಪರೀಕ್ಷೆಗಾಗಿ ಕಳುಹಿಸಲಾಗಿದೆ. ಯುವಕ ಒಬ್ಬನೇ ಇದ್ದನು, ಎಂದು ಹೇಳಲಾಗುತ್ತಿದೆ.

2. ಭಾಜಪದ ನಾಯಕ ಮನಜಿಂದರ ಸಿಂಹ ಸಿರಸ ಇವರು ಇದರ ಹಿಂದೆ ಸಂಚು ಇದೆ ಎಂದು ಆರೋಪಿಸಿದ್ದಾರೆ. ಅವರು ಈ ಪ್ರಕರಣದ ಬಗ್ಗೆ ಕೇಂದ್ರದ ಗೃಹ ಸಚಿವ ಅಮಿತ ಶಹಾ ಅವರ ಜೊತೆ ಚರ್ಚಿಸಿದ್ದು, ಶಹಾ ಅವರು ಯೋಗ್ಯ ವಿಚಾರಣೆ ನಡೆಸುವ ಆಶ್ವಾಸನೆ ನೀಡಿದ್ದಾರೆ.

3. ಡಿಸೆಂಬರ್ 15 ರಂದು ಈ ಮಂದಿರದ ಸರೋವರದಲ್ಲಿ ಒಬ್ಬ ಯುವಕನು ಗುಟಕಾದ ಪ್ಯಾಕೆಟ್ ಎಸೆದಿದ್ದನು. ಆ ಸಮಯದಲ್ಲಿ ದೇವಸ್ಥಾನದ ಸೇವಕರು ಅವನನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದ್ದರು.