ಮರ ಕಡಿಯುವುದು ಮನುಷ್ಯನ ಹತ್ಯೆಗಿಂತ ಕೆಟ್ಟದ್ದು ಎಂದು ನ್ಯಾಯಾಲಯದ ಸ್ಪಷ್ಟನೆ
ನವದೆಹಲಿ – ಪರಿಸರಕ್ಕೆ ಹಾನಿ ಮಾಡುವವರ ಮೇಲೆ ದಯೆ ತೋರಿಸಬಾರದು. ದೊಡ್ಡ ಪ್ರಮಾಣದಲ್ಲಿ ಮರಗಳನ್ನು ಕಡಿಯುವುದು ಮನುಷ್ಯನ ಹತ್ಯೆಗಿಂತಲೂ ಕೆಟ್ಟದ್ದು ಎಂದು ಹೇಳಿದ ಸುಪ್ರೀಂ ಕೋರ್ಟ್, ಕಾನೂನುಬಾಹಿರವಾಗಿ ಕಡಿಯುವ ಪ್ರತಿ ಮರಕ್ಕೆ 1 ಲಕ್ಷ ರೂಪಾಯಿ ದಂಡ ವಿಧಿಸಲು ಅನುಮೋದನೆ ನೀಡಿದೆ. “ಸಂಬಂಧಿತ ಪ್ರಾಧಿಕಾರ ಅಥವಾ ಸಂಸ್ಥೆಯಿಂದ ಅನುಮತಿ ಪಡೆಯದೆ ಯಾರೂ ಮರಗಳನ್ನು ಕಡಿಯಬಾರದು” ಎಂದು ನ್ಯಾಯಾಲಯ ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದೆ. ಮರ ಕಡಿದ ವ್ಯಕ್ತಿಯೊಬ್ಬರ ಪ್ರಕರಣದಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.
1. ಕಳೆದ ವರ್ಷ ಶಿವಶಂಕರ್ ಅಗ್ರವಾಲ್ ಅವರು ಕಡಿದ 454 ಮರಗಳಿಗೆ ಪ್ರತಿ ಮರಕ್ಕೆ 1 ಲಕ್ಷ ರೂಪಾಯಿ (ಒಟ್ಟು 4 ಕೋಟಿ 54 ಲಕ್ಷ ರೂಪಾಯಿ) ದಂಡ ವಿಧಿಸಲಾಗಿತ್ತು, ಎಂದು ಕೇಂದ್ರ ಸಕ್ಷಮ ಸಮಿತಿಯ ವರದಿಯನ್ನು ನ್ಯಾಯಾಲಯವು ಅಂಗೀಕರಿಸಿತು.
2. ಅಗ್ರವಾಲ್ ಅವರ ವಕೀಲ ಮುಕುಲ್ ರೋಹತಗಿ ಅವರು ನ್ಯಾಯಾಲಯಕ್ಕೆ, ಅವರ ಕಕ್ಷಿದಾರ ತಪ್ಪು ಒಪ್ಪಿಕೊಂಡಿದ್ದಾರೆ ಮತ್ತು ಕ್ಷಮೆಯಾಚಿಸಿದ್ದಾರೆ. ಆದ್ದರಿಂದ ದಂಡದ ಮೊತ್ತವನ್ನು ಕಡಿಮೆ ಮಾಡಬೇಕು. ಮತ್ತು ಅಗ್ರವಾಲ್ ಅವರು ಆ ಭೂಮಿಯಲ್ಲಿ ಮಾತ್ರವಲ್ಲದೆ ಹತ್ತಿರದ ಸ್ಥಳಗಳಲ್ಲಿಯೂ ಮರಗಳನ್ನು ನೆಡಲು ಅನುಮತಿ ನೀಡಬೇಕು, ಎಂದು ಹೇಳದರು.
3. ಇದಕ್ಕೆ ನ್ಯಾಯಾಲಯ ದಂಡದ ಮೊತ್ತವನ್ನು ಕಡಿಮೆ ಮಾಡಲು ನಿರಾಕರಿಸಿತು. ಹತ್ತಿರದ ಪ್ರದೇಶಗಳಲ್ಲಿ ಮರಗಳನ್ನು ನೆಡಲು ಅನುಮತಿ ನೀಡಿತು.
ಸಂಪಾದಕೀಯ ನಿಲುವುಕೇವಲ ದಂಡ ವಿಧಿಸಿ ಬಿಡಬಾರದು, ಅವರನ್ನು ಜೈಲಿಗಟ್ಟಬೇಕು ! |