ಒಂದು ದೇಶ, ಒಂದು ಪೊಲೀಸ ಸಮವಸ್ತ್ರ, ಈ ಬಗ್ಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಚರ್ಚೆ ನಡೆಸಬೇಕು ! – ಪ್ರಧಾನಿ ಮೋದಿ ಅವರ ಕರೆ

ನವದೆಹಲಿ – ‘ಒಂದು ದೇಶ, ಒಂದು ಪೊಲೀಸ ಸಮವಸ್ತ್ರ’ ಈ ಪರಿಕಲ್ಪನೆಯ ಬಗ್ಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಚರ್ಚಿಸಬೇಕೆಂದು ಪ್ರಧಾನಿ ಮೋದಿಯವರು ಕರೆ ನೀಡಿದ್ದಾರೆ. ಅವರು ‘ವಿಡಿಯೋ ಕಾನ್ಫರೆನ್ಸಿಂಗ್‌’ ಮೂಲಕ ಚಿಂತನ ಶಿಬಿರದಲ್ಲಿ ರಾಜ್ಯದ ಗೃಹ ಸಚಿವರನ್ನು ಸಂಬೋಧಿಸುತ್ತ ಮಾತನಾಡುತ್ತಿದ್ದರು. ಆನ್ಲೈನ್ ಚಿಂತನ ಶಿಬಿರದಲ್ಲಿ ೮ ರಾಜ್ಯಗಳ ಮುಖ್ಯಮಂತ್ರಿ ಮತ್ತು ಗೃಹ ಸಚಿವರೊಂದಿಗೆ ೧೬ ರಾಜ್ಯದ ಉಪಮುಖ್ಯಮಂತ್ರಿಗಳು ಕೂಡ ಸಹಭಾಗಿಯಾಗಿದ್ದರು. ಈ ಶಿಬಿರದಲ್ಲಿ ಪೊಲೀಸದಳದ ಆಧುನೀಕರಣ, ಸೈಬರ್ ಅಪರಾಧಗಳ ವ್ಯವಸ್ಥಾಪನೆ, ನ್ಯಾಯ ವ್ಯವಸ್ಥೆಯಲ್ಲಿ ತಂತ್ರಜ್ಞಾನದ ಉಪಯೋಗ, ಭೂ-ಗಡಿ ವ್ಯವಸ್ಥಾಪನೆ, ಗಡಿ ಸುರಕ್ಷೆ, ಮಹಿಳಾ ಸುರಕ್ಷೆ, ಮಾದಕ ವಸ್ತುಗಳ ಕಳ್ಳ ಸಾಗಾಣಿಕೆ ಮುಂತಾದ ವಿಷಯದ ಬಗ್ಗೆ ಚರ್ಚಿಸಲಾಗುತ್ತಿದೆ.

ಪ್ರಧಾನಿ ಮೋದಿ ಅವರು ಮಾತು ಮುಂದುವರಿಸುತ್ತ, ಕಾನೂನು ಮತ್ತು ಸುವ್ಯವಸ್ಥೆಯು ಯಾವುದೇ ಒಂದು ರಾಜ್ಯದ ಮಟ್ಟಿಗೆ ಸೀಮಿತವಾಗಿಲ್ಲ, ಏಕೆಂದರೆ ಅಪರಾಧಗಳು ಅಂರ್ತರಾಜ್ಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಹೆಚ್ಚುತ್ತಿದೆ. ಆದುದರಿಂದ ರಾಜ್ಯಗಳ ಮತ್ತು ಕೇಂದ್ರದ ವ್ಯವಸ್ಥೆಗಳು ಸಮನ್ವಯ ಸಾಧಿಸುವುದು ಆವಶ್ಯಕವಾಗಿದೆ. ಈ ಅಂಶಗಳ ಮೇಲೆ ಪೊಲೀಸ ಮತ್ತು ಕೇಂದ್ರೀಯ ಸಂಸ್ಥೆಗಳಿಂದ ಸಮಾನ ಪ್ರತಿಕ್ರಿಯೆ ದೊರೆಯುವ ವರೆಗೆ ಮತ್ತು ಅದರ ವಿರುದ್ಧ ಹೋರಾಡಲು ಅವರು ಒಟ್ಟಾಗಿ ಬರುವ ವರೆಗೆ ಈ ಸಮಸ್ಯೆಗಳನ್ನು ಪರಿಹರಿಸುವುದು ಅಸಾಧ್ಯವಾಗಿದೆ ಎಂದು ಅವರು ಹೇಳಿದರು. ಎರಡು ದಿನದ ಈ ಶಿಬಿರವು ಕೇಂದ್ರ ಗೃಹಮಂತ್ರಿ ಅಮಿತ ಶಾಹ ಇವರ ಅಧ್ಯಕ್ಷತೆಯಲ್ಲಿ ನಡೆಯುತ್ತಿದೆ.