US Voter Registration Rules : ಅಮೇರಿಕಾದಲ್ಲಿ ಈಗ ಮತದಾರರ ನೋಂದಣಿಗೆ ಪೌರತ್ವದ ಪುರಾವೆ ನೀಡುವುದು ಅಗತ್ಯ

ಅಧ್ಯಕ್ಷ ಟ್ರಂಪ್ ಇವರಿಂದ ಭಾರತದ ಉಲ್ಲೇಖ

ವಾಷಿಂಗ್ಟನ್ (ಅಮೆರಿಕ) – ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿದ್ದಾರೆ. ಈಗ ಅಮೆರಿಕದ ನಾಗರಿಕರು ಮತದಾರರ ನೋಂದಣಿಗೆ ಪೌರತ್ವದ ಪುರಾವೆ ನೀಡಬೇಕಾಗಿದೆ. ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಸೇರ್ಪಡೆಯಾಗಿರುವ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವುದು ಈ ನಿರ್ಧಾರದ ಹಿಂದಿನ ಉದ್ದೇಶ ಎಂದು ಟ್ರಂಪ್ ಆಡಳಿತ ಹೇಳಿದೆ.

ಆದೇಶದಲ್ಲಿ ಅಧ್ಯಕ್ಷ ಟ್ರಂಪ್, ಭಾರತ ಮತ್ತು ಬ್ರೆಜಿಲ್ ಮತದಾರರ ಗುರುತಿನ ಚೀಟಿಗಳನ್ನು ಬಯೋಮೆಟ್ರಿಕ್ (ವ್ಯಕ್ತಿಯ ಕೈಬೆರಳಚ್ಚು, ಮುಖದ ಮೂಲಕ ಪರಿಶೀಲನೆ) ಮಾಹಿತಿಯೊಂದಿಗೆ ಜೋಡಿಸುತ್ತಿವೆ, ಆದರೆ ಅಮೆರಿಕದಲ್ಲಿ ನಾಗರಿಕರು ಇನ್ನೂ ತಮ್ಮ ಪೌರತ್ವ ಸಾಬೀತುಪಡಿಸಲು ಅಗತ್ಯವಿರುವ ದಾಖಲೆಗಳನ್ನು ಅವಲಂಬಿಸಿದ್ದಾರೆ ಎಂದು ಹೇಳಿದ್ದಾರೆ.