ಕೊರೊನಾದ ಲಸಿಕೀಕರಣ ಅಭಿಯಾನ ಮುಗಿದ ನಂತರ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ !- ಕೇಂದ್ರ ಗೃಹ ಸಚಿವ ಅಮಿತ ಶಾಹ

ಕೇಂದ್ರ ಗೃಹ ಸಚಿವ ಅಮಿತ ಶಾಹ

ಹೊಸ ದೆಹಲಿ – ಕೊರೊನಾದ ಲಸಿಕೀಕರಣ ಅಭಿಯಾನ ಮುಗಿದ ನಂತರ ತಕ್ಷಣ ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿ ಎ ಎ) ಜಾರಿ ಮಾಡಲಾಗುವುದು, ಎಂದು ಕೇಂದ್ರ ಗೃಹ ಸಚಿವ ಅಮಿತ ಶಹಾ ಇವರು ಘೋಷಣೆ ಮಾಡಿದರು. ಬಂಗಾಲದ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೆಂದು ಅಧಿಕಾರಿ ಇವರು ಅಮಿತ ಶಾಹ ಇವರನ್ನು ಭೇಟಿ ಮಾಡಿದ್ದರು. ಆಗ ಶಾಹ ಇವರು ಅಧಿಕಾರಿ ಇವರಿಗೆ ಆಶ್ವಾಸನೆ ನೀಡಿರುವುದಾಗಿ ಮಾಹಿತಿ ಅವರು ನೀಡಿದರು. ಡಿಸೆಂಬರ್ ೧೧, ೨೦೧೯ ರಂದು ಸಂಸತ್ತಿನಲ್ಲಿ ಸಿಎಎ ಕಾನೂನು ಸಮ್ಮತಿ ಪಡೆಯಿತು ಮತ್ತು ಮರುದಿನವೇ ಅಧಿಸೂಚನೆ ಜಾರಿ ಮಾಡಲಾಯಿತು. ಕೇಂದ್ರ ಸರಕಾರ ಇಲ್ಲಿಯವರೆಗೆ ಕಾನೂನಿಗಾಗಿ ನಿಯಮಾವಳಿ ತಯಾರಿಸಿಲ್ಲ. ಅನೇಕ ವಿರೋಧಿ ಪಕ್ಷದವರು ಸಿಎಎ ಗೆ ವಿರೋಧಿಸಿದರೂ ಅದನ್ನು ಜಾರಿ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಎಂದರೇನು ?

‘ಧಾರ್ಮಿಕ ಕಿರುಕುಳಕ್ಕೆ ಬೇಸತ್ತು ಅಪಘಾನಿಸ್ತಾನ್, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ಡಿಸೆಂಬರ ೩೧, ೨೦೧೪ ವರೆಗೆ ಭಾರತದಲ್ಲಿ ವಲಸೆ ಬಂದಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರಸಿ, ಮತ್ತು ಕ್ರೈಸ್ತ ಸಮುದಾಯದ ಜನರನ್ನು ಕಾನೂನು ಬಾಹಿರವಾಗಿ ವಲಸೆ ಬಂದಿರುವವರು ಎಂದು ತಿಳಿಯುವುದಿಲ್ಲ ಮತ್ತು ಅವರಿಗೆ ಭಾರತದ ನಾಗರಿಕತ್ವ ನೀಡಲು’ ಪೌರತ್ವ ತಿದ್ದುಪಡಿ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಶ್ರೀಲಂಕಾದ ತಮಿಳು, ಮ್ಯಾನ್ಮಾರದ ಮುಸಲ್ಮಾನ್ ಮತ್ತು ಪಾಕಿಸ್ತಾನದ ಮುಸಲ್ಮಾನರಲ್ಲಿರುವ ಜಾತಿಗಳ ವ್ಯಕ್ತಿಗಳಿಗೆ ಈ ಕಾನೂನಿನ ಲಾಭ ಸಿಗುವುದಿಲ್ಲ.