ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅಭಯ ಓಕ್ ನ್ಯಾಯಾಂಗಕ್ಕೆ ಕನ್ನಡಿ ತೋರಿಸಿದರು
ನವದೆಹಲಿ – ಕಳೆದ ಕೆಲವು ವರ್ಷಗಳಲ್ಲಿ, ನ್ಯಾಯಾಲಯವು ‘ಸಾಮಾನ್ಯ ಜನರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ’ ಎಂದು ಹೇಳುವ ಮೂಲಕ ತನ್ನ ಬೆನ್ನನ್ನು ತಾನೇ ತಟ್ಟಿಕೊಂಡಿದೆ; ಆದರೆ ಇದು ನಿಜವಲ್ಲ. ಒಂದು ವೇಳೆ ನಮ್ಮ ಬಳಿ ವಿವಿಧ ನ್ಯಾಯಾಲಯಗಳಲ್ಲಿ 4 ಕೋಟಿ 54 ಲಕ್ಷ ಪ್ರಕರಣಗಳು ಬಾಕಿ ಉಳಿದಿವೆ ಮತ್ತು ಅವುಗಳಲ್ಲಿ ಶೇ.25 ರಿಂದ 30 ಪ್ರಕರಣಗಳು 10 ವರ್ಷಗಳಿಗೂ ಹೆಚ್ಚು ಕಾಲ ನಡೆಯುತ್ತಿವೆ ಹೀಗಿರುವಾಗ ನಾವು ‘ಸಾಮಾನ್ಯ ಜನರಿಗೆ ನ್ಯಾಯಾಂಗದ ಮೇಲೆ ನಂಬಿಕೆ ಇದೆ’ ಎಂದು ಹೇಗೆ ಒಪ್ಪಿಕೊಳ್ಳಬಹುದು? ಎಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಅಭಯ ಓಕ್ ಪ್ರಶ್ನಿಸಿದ್ದಾರೆ. ಸಂವಿಧಾನದ 75 ನೇ ವಾರ್ಷಿಕೋತ್ಸವದ ಅಂಗವಾಗಿ ಅಡ್ವೊಕೇಟ್ಸ್ ಆನ್ ರೆಕಾರ್ಡ್ ಅಸೋಸಿಯೇಷನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ನ್ಯಾಯಮೂರ್ತಿ ಅಭಯ ಓಕ್ ಅವರು ಮಂಡಿಸಿದ ಅಂಶಗಳು
1. ದೇಶಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ 4 ಕೋಟಿ 54 ಲಕ್ಷ ಪ್ರಕರಣಗಳು ಬಾಕಿ ಇವೆ. ಇದು ನ್ಯಾಯಾಂಗ ಮತ್ತು ಸಾಮಾನ್ಯ ನಾಗರಿಕರ ನಡುವೆ ಅಂತರವನ್ನು ಸೃಷ್ಟಿಸಿದೆ. ಕಳೆದ 75 ವರ್ಷಗಳನ್ನು ಪರಿಗಣಿಸಿದರೆ, ಬಾಕಿ ಇರುವ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿದೆ. (ಕಳೆದ ಕೆಲವು ವರ್ಷಗಳಲ್ಲಿ ಈ ವಿಷಯದ ಬಗ್ಗೆ ಅನೇಕರು ಹೇಳಿಕೆಗಳನ್ನು ನೀಡಿದ್ದಾರೆ; ಆದಾಗ್ಯೂ, ಈ ಸಂಖ್ಯೆಯನ್ನು ಕಡಿಮೆ ಮಾಡಲು ಯಾರೂ ಯಾವುದೇ ಪ್ರಯತ್ನ ಮಾಡುತ್ತಿಲ್ಲ ಮತ್ತು ಸಂಖ್ಯೆ ಕಡಿಮೆಯಾಗುತ್ತಿಲ್ಲ ಎಂಬುದು ಸಹ ಅಷ್ಟೇ ಸತ್ಯ! – ಸಂಪಾದಕರು)
2. ಈ 75 ವರ್ಷಗಳಲ್ಲಿ, ನಾವು ಒಂದು ತಪ್ಪನ್ನು ಮಾಡಿದ್ದೇವೆ, ಅದೆಂದರೆ ಜಿಲ್ಲಾ ನ್ಯಾಯಾಲಯಗಳು ಮತ್ತು ಕೆಳ ನ್ಯಾಯಾಲಯಗಳು ಎಂದು ವರ್ಗೀಕರಿಸುವ ಮೂಲಕ, ನ್ಯಾಯವನ್ನು ಬಯಸುವ ಜನರನ್ನು ನಿರ್ಲಕ್ಷಿಸಿದ್ದೇವೆ. (ನ್ಯಾಯದಾನದ ವಿಶ್ಲೇಷಣೆಯನ್ನು ನ್ಯಾಯಾಧೀಶರೇ ಉತ್ತಮವಾಗಿ ವಸ್ತು ನಿಷ್ಠವಾಗಿ ವಿಶ್ಲೇಷಿಸಬಹುದು ಎಂಬುದಕ್ಕೆ ಇದು ಒಂದು ಉದಾಹರಣೆಯಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಸಮರೋಪಾದಿಯಲ್ಲಿ ನ್ಯಾಯದಾನ ಪ್ರಕ್ರಿಯೆಯನ್ನು ಸುಧಾರಿಸಬೇಕಾಗಿದೆ! – ಸಂಪಾದಕರು)
3. ನ್ಯಾಯಾಲಯಗಳಲ್ಲಿ ಅನೇಕ ಪ್ರಕರಣಗಳು ಬಾಕಿ ಉಳಿದಿವೆ ಮತ್ತು ಇದಕ್ಕೆ ಪ್ರಮುಖ ಕಾರಣ ನ್ಯಾಯವಾದಿಗಳು ನ್ಯಾಯಾಲಯದ ಕಲಾಪಗಳನ್ನು ಬಹಿಷ್ಕರಿಸುತ್ತಿರುವುದು ಆಗಿದೆ.
4. ಬಾಕಿ ಇರುವ ಪ್ರಕರಣಗಳಲ್ಲಿ ಜಾಮೀನು ಪಡೆಯುವ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದೆ ಮತ್ತು ಕಚ್ಚಾ ಕೈದಿಗಳಾಗಿ(ಇನ್ನೂ ಪ್ರಕರಣವನ್ನು ಪ್ರಾರಂಭಿಸದಿರುವವರು) ಇರುವವರ ಪ್ರಕರಣಗಳಲ್ಲಿಯೂ ಬೇಗನೆ ತೀರ್ಮಾನ ಆಗದೇ ದೀರ್ಘಕಾಲ ಜೈಲಿನಲ್ಲಿರಬೇಕಾಗುತ್ತದೆ. ಇದರಿಂದ ಅವರ ಕುಟುಂಬಕ್ಕೂ ತೊಂದರೆಯಾಗುತ್ತದೆ. ದೀರ್ಘ ಸೆರೆವಾಸದ ನಂತರ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಅಮಾಯಕ ಕೈದಿಗಳನ್ನು ಅಂತಿಮವಾಗಿ ಬಿಡುಗಡೆ ಮಾಡಲಾಗುತ್ತದೆ. (ಈ ಪರಿಸ್ಥಿತಿಗೆ ಯಾರು ಹೊಣೆ? ಇದರ ಬಗ್ಗೆಯೂ ಚರ್ಚೆಗಳು ನಡೆಯಬೇಕು! – ಸಂಪಾದಕರು)
ಸಂಪಾದಕೀಯ ನಿಲುವುನ್ಯಾಯಾಧೀಶರು ಈಗ ಸಾಮಾನ್ಯ ಜನರಲ್ಲಿ ನ್ಯಾಯಾಂಗದ ಬಗ್ಗೆ ನಂಬಿಕೆ ಮೂಡಿಸಲು ಕೃತಿಶೀಲ ಪ್ರಯತ್ನಗಳನ್ನು ಮಾಡಬೇಕು ಎಂದು ಸಾಮಾನ್ಯ ಜನರಿಗೆ ಅನಿಸುತ್ತದೆ! |