ಟರ್ಕಿ, ಪಾಕಿಸ್ತಾನ, ಸೌದಿ ಅರೇಬಿಯಾಗೆ ಹಿನ್ನಡೆ!

ವಾಷಿಂಗ್ಟನ್ (ಅಮೇರಿಕಾ) – ಭಾರತ ಸೇರಿದಂತೆ ‘ಜಿ-4’ ರಾಷ್ಟ್ರಗಳು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಇಸ್ಲಾಮಿಕ್ ರಾಷ್ಟ್ರಕ್ಕೆ ಮೀಸಲಾತಿ ನೀಡುವ ಪ್ರಸ್ತಾಪವನ್ನು ತಿರಸ್ಕರಿಸಿವೆ. ‘ಧಾರ್ಮಿಕ ಆಧಾರದ ಮೇಲೆ ಶಾಶ್ವತ ಸದಸ್ಯತ್ವ ನೀಡುವ ಪ್ರಸ್ತಾಪವು ವಿಶ್ವಸಂಸ್ಥೆಯ ನಿಯಮಗಳಿಗೆ ವಿರುದ್ಧವಾಗಿದೆ’ ಎಂದು ‘ಜಿ-4’ ರಾಷ್ಟ್ರಗಳು ಹೇಳಿವೆ.
1. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸುಧಾರಣೆಗಳನ್ನು ತರುವ ಬೇಡಿಕೆ ಬಹಳ ಸಮಯದಿಂದ ಇದೆ. ‘ಜಿ-4’ ರಾಷ್ಟ್ರಗಳು ಟರ್ಕಿಯ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗಾನ್, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಸೌದಿ ಅರೇಬಿಯಾದ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಅವರ ಇಸ್ಲಾಮಿಕ್ ರಾಷ್ಟ್ರಕ್ಕೆ ಮೀಸಲಾತಿಯನ್ನು ವಿರೋಧಿಸಿವೆ.
2. ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಪಿ. ಹರೀಶ್ ಅವರು ಏಪ್ರಿಲ್ 15 ರಂದು ‘ಜಿ-4’ ರಾಷ್ಟ್ರಗಳ ಪರವಾಗಿ ಮಾತನಾಡಿ, ‘ಧರ್ಮದ ಆಧಾರದಲ್ಲಿ ಭದ್ರತಾ ಮಂಡಳಿಯಲ್ಲಿ ಪ್ರಾತಿನಿಧ್ಯವನ್ನು ಸ್ವೀಕರಿಸಲಾಗುವುದಿಲ್ಲ’ ಎಂದು ಹೇಳಿದರು.
3. ಹರೀಶ್ ಅವರು ಯಾರ ಹೆಸರನ್ನೂ ಉಲ್ಲೇಖಿಸದೆ, ಧಾರ್ಮಿಕ ಅಂಶವನ್ನು ತರುವುದರಿಂದ ಭದ್ರತಾ ಮಂಡಳಿಯ ಸುಧಾರಣೆಯ ಪ್ರಕ್ರಿಯೆಯು ಇನ್ನಷ್ಟು ಜಟಿಲವಾಗುತ್ತದೆ ಎಂದು ಹೇಳಿದರು. ಜಿ-4 ಅರ್ಥಪೂರ್ಣ ಸುಧಾರಣೆಗಳಿಗಾಗಿ ಕೆಲಸ ಮಾಡುವ ಶಿಫಾರಸು ಗುಂಪಾಗಿದೆ ಮತ್ತು ಯಾರನ್ನು ಶಾಶ್ವತ ಸದಸ್ಯರನ್ನಾಗಿ ಮಾಡಬೇಕು ಎಂಬುದರ ಕುರಿತು ಯಾವುದೇ ನಿರ್ದಿಷ್ಟ ಸಲಹೆಗಳನ್ನು ನೀಡುವುದಿಲ್ಲ. ಜಿ-4 ಈ ಕೆಲಸವನ್ನು ವಿಶ್ವಸಂಸ್ಥೆಯ ಮಹಾಸಭೆಗೆ ಒಪ್ಪಿಸುತ್ತದೆ. ಮಹಾಸಭೆಯು ಭದ್ರತಾ ಮಂಡಳಿಯಲ್ಲಿ ಪ್ರಜಾಸತ್ತಾತ್ಮಕ ಆಧಾರದಲ್ಲಿ ಸುಧಾರಣೆಗಳನ್ನು ಮಾಡಬೇಕು ಮತ್ತು ಅದರಲ್ಲಿ ನೂತನ ಶಾಶ್ವತ ಸದಸ್ಯರನ್ನು ಸೇರಿಸಬೇಕು.
ಜಿ-4 ರಾಷ್ಟ್ರಗಳು ಯಾವುವು?
ಜಿ-4 ಎಂದರೆ ಭಾರತ, ಬ್ರೆಜಿಲ್, ಜರ್ಮನಿ ಮತ್ತು ಜಪಾನ್ ಈ 4 ರಾಷ್ಟ್ರಗಳು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವ ಪಡೆಯಲು ಈ ದೇಶಗಳು ಪರಸ್ಪರನ್ನು ಬೆಂಬಲಿಸುತ್ತವೆ.
‘ಐ.ಆರ್.ಸಿ.ಟಿ.ಸಿ.’ಯ ಹೊಸ ಜಾಲತಾಣ ಕಾರ್ಯಾರಂಭ : ಟಿಕೆಟ್ ಕಾಯ್ದಿರಿಸುವಿಕೆ ಮತ್ತಷ್ಟು ಸುಲಭ
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump