ಭೂಮಿಯಲ್ಲಿನ ವಿಷಕಾರಿ ಲೋಹಗಳಿಂದ ವಿಶ್ವಾದ್ಯಂತ 140 ಕೋಟಿ ಜನರ ಆರೋಗ್ಯಕ್ಕೆ ಕುತ್ತು!

ವಿಶ್ವಾದ್ಯಂತ ಅಂದಾಜು ಶೇಕಡಾ 14 ರಿಂದ 17 ರಷ್ಟು ಕೃಷಿಯೋಗ್ಯ ಭೂಮಿ ಹೆಚ್ಚು ಕಲುಷಿತಗೊಂಡಿದೆ ಎಂಬ ಮಾಹಿತಿ

ವಾಷಿಂಗ್ಟನ್ – ಆರ್ಸೆನಿಕ್, ಕ್ಯಾಡ್ಮಿಯಮ್, ಕೋಬಾಲ್ಟ್, ಕ್ರೋಮಿಯಮ್, ಕಾಪರ್, ನಿಕ್ಕಲ್, ಸೀಸ ಮುಂತಾದ ವಿಷಕಾರಿ ಲೋಹಗಳಿಂದ ಕಲುಷಿತಗೊಂಡ ಭೂಮಿಯಲ್ಲಿ ವಿಶ್ವಾದ್ಯಂತ ಅಂದಾಜು 140 ಕೋಟಿ ಜನರು ವಾಸಿಸುತ್ತಿದ್ದಾರೆ. ಇದರಿಂದ ಅವರ ಆರೋಗ್ಯಕ್ಕೆ ಅಪಾಯ ಉಂಟಾಗಿದೆ ಎಂದು ‘ಸೈನ್ಸ್’ ನಿಯತಕಾಲಿಕದಲ್ಲಿ ಪ್ರಕಟವಾದ ವರದಿಯೊಂದು ತಿಳಿಸಿದೆ. ಈ ಅಧ್ಯಯನ ತಂಡವನ್ನು ಡೈಯಿ ಹೊ ಅವರು ಮುನ್ನಡೆಸಿದ್ದು, ಅವರು ಮತ್ತು ಅವರ ಸಹೋದ್ಯೋಗಿಗಳು ವಿಶ್ವಾದ್ಯಂತ ಸುಮಾರು 8 ಲಕ್ಷ ಮಣ್ಣಿನ ಮಾದರಿಗಳನ್ನು ವಿಶ್ಲೇಷಿಸಿದ್ದಾರೆ. ಈ ಅಧ್ಯಯನದ ಪ್ರಕಾರ, ವಿಶ್ವಾದ್ಯಂತ ಅಂದಾಜು ಶೇಕಡ 14 ರಿಂದ 17 ರಷ್ಟು ಕೃಷಿಯೋಗ್ಯ ಭೂಮಿ, ಅಂದರೆ ಅಂದಾಜು 242 ದಶಲಕ್ಷ ಹೆಕ್ಟೇರ್ ಭೂಮಿ ಒಂದು ನಿರ್ದಿಷ್ಟ ವಿಷಕಾರಿ ಲೋಹದಿಂದ ಸುರಕ್ಷತಾ ಮಿತಿಗಿಂತ ಹೆಚ್ಚು ಕಲುಷಿತಗೊಂಡಿರುವುದು ಕಂಡುಬಂದಿದೆ.

1. ಈ ಭೂಮಿಯಲ್ಲಿನ ಮಾಲಿನ್ಯವು ಆಹಾರ ಭದ್ರತೆ ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುತ್ತದೆ. ಬೆಳೆ ಉತ್ಪಾದನೆಯಲ್ಲಿ ಇಳಿಕೆ ಕಂಡುಬರುತ್ತದೆ ಮತ್ತು ಆಹಾರ ಸರಪಳಿಗೆ ವಿಷಕಾರಿ ಲೋಹಗಳು ಸೇರಿಕೊಳ್ಳುತ್ತವೆ. ಇದರಿಂದ ಮೂತ್ರಪಿಂಡದ ಕಾಯಿಲೆಗಳು, ಕ್ಯಾನ್ಸರ್, ನರಮಂಡಲದ ಬೆಳವಣಿಗೆಗೆ ಸಂಬಂಧಿಸಿದ ಸಮಸ್ಯೆಗಳು ಉಂಟಾಗುವ ಅಪಾಯವಿದೆ.

2. ಕ್ಯಾಡ್ಮಿಯಮ್ ಅತಿ ಹೆಚ್ಚು ಕಂಡುಬರುವ ಮತ್ತು ಅಪಾಯಕಾರಿ ಲೋಹವಾಗಿದ್ದು, ದಕ್ಷಿಣ ಮತ್ತು ಪೂರ್ವ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಭಾಗಗಳಲ್ಲಿ ಬೃಹತ್ ಪ್ರಮಾಣದಲ್ಲಿ ಕಂಡುಬರುತ್ತದೆ.

3. ತಂತ್ರಜ್ಞಾನಕ್ಕೆ ಅಗತ್ಯವಿರುವ ಪ್ರಮುಖ ಲೋಹಗಳಿಗೆ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಮಣ್ಣಿನ ಮಾಲಿನ್ಯವು ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

4. ಈ ವರದಿಯ ನಂತರ, ಅಧ್ಯಯನಕಾರರು ಪರಿಸರ ಸಂರಕ್ಷಣೆಗಾಗಿ ಕಠಿಣ ನಿಯಮಾವಳಿಗಳು, ಸುಸ್ಥಿರ ಕೃಷಿ ಪದ್ಧತಿ ಮತ್ತು ಜಾಗೃತಿ ಅಭಿಯಾನವನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

ಸಂಪಾದಕೀಯ ನಿಲುವು

ಎಲ್ಲಿ ವರ್ಷಾನು ವರ್ಷ ಭೂಮಿಯನ್ನು ಮಾಲಿನ್ಯ ಮುಕ್ತವಾಗಿಟ್ಟ ಹಿಂದೂ ಸಂಸ್ಕೃತಿ, ಎಲ್ಲಿ ಕೇವಲ 100 ವರ್ಷಗಳಲ್ಲಿ ಅದನ್ನು ಕಲುಷಿತಗೊಳಿಸಿದ ಆಧುನಿಕ ವಿಜ್ಞಾನ!