America Developing Powerful Nuclear Bomb : ಕೇವಲ ೨ ನಿಮಿಷಗಳಲ್ಲಿ ಅಣುಬಾಂಬ್ ಹಾಕುವ ಸಿದ್ಧತೆ ಮಾಡಿ ! – ಅಮೇರಿಕಾದ ಆದೇಶ

ವಾಷಿಂಗ್ಟನ – ಅಮೇರಿಕಾದ ರಕ್ಷಣಾ ಇಲಾಖೆಯ ಮುಖ್ಯ ಕಚೇರಿಯಾಗಿರುವ ಪೆಂಟಗಾನ್ 2 ನಿಮಿಷಗಳಲ್ಲಿ ಅಣುಬಾಂಬ್ ಬಳಸಲು ಸಿದ್ಧತೆಯಲ್ಲಿರುವಂತೆ ಹೊಸ ಆದೇಶವನ್ನು ನೀಡಿದೆ. ಪೆಂಟಗಾನ್‌ ಆದೇಶದ ಪ್ರಕಾರ, ಸಂದೇಶ ತಲುಪಿದ ನಂತರ ಎರಡು ನಿಮಿಷಗಳ ಒಳಗೆ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಅಣ್ವಸ್ತ್ರಗಳನ್ನು ಬಳಸಬೇಕಾಗುತ್ತದೆ. ಅಮೇರಿಕಾ ವರ್ಷ 2026 ರ ವೇಳೆಗೆ ‘ಬಿ 61-13’ ಎಂಬ ಅಪಾಯಕಾರಿ ಅಣುಬಾಂಬ್ ತಯಾರಿಸುವಲ್ಲಿ ನಿರತವಾಗಿದೆ. ಒಂದು ವರದಿಯ ಪ್ರಕಾರ, ಈ ಅಣುಬಾಂಬ್ ಹಿರೋಷಿಮಾದ ಮೇಲೆ ಹಾಕಲಾದ ಅಣುಬಾಂಬ್‌ಗಿಂತ ೨೪ ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದ್ದು, ಅದರ ಸಾಮರ್ಥ್ಯ 360 ಕಿಲೋಟನ್ ಆಗಿದೆ.

ಅಮೇರಿಕಾದ ‘ಜಾಯಿಂಟ್ ಚೀಫ್ಸ್ ಆಫ್ ಸ್ಟಾಫ್’ನ ಅಧ್ಯಕ್ಷರು ಆದೇಶವೊಂದನ್ನು ಹೊರಡಿಸಿದ್ದಾರೆ. ‘ಎಮರ್ಜೆನ್ಸಿ ಆಕ್ಷನ್ ಮೆಸೇಜ’ ಎಂಬ ಶೀರ್ಷಿಕೆಯಡಿಯಲ್ಲಿ ಹೊರಡಿಸಲಾದ ಈ ಆದೇಶದಲ್ಲಿ, ಎರಡು ನಿಮಿಷಗಳಲ್ಲಿ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ಅಣುಬಾಂಬ್ ಕಮಾಂಡ್, ನಿಯಂತ್ರಣ ಮತ್ತು ಸಂವಹನ ಕಾರ್ಯಾಚರಣೆ ಪ್ರಾರಂಭವಾಗಬೇಕು ಎಂದು ಹೇಳಲಾಗಿದೆ. ‘ಸ್ಯಾಂಡಿಯಾ ನ್ಯಾಷನಲ್ ಲ್ಯಾಬೊರೇಟರಿ’ ‘ಬಿ 61-13’ ಬಾಂಬ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಇಂದಿನ ಕಾಲವನ್ನು ಗಮನದಲ್ಲಿಟ್ಟುಕೊಂಡು ಈ ಬಾಂಬ್ ಅನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಅವರು ಹೇಳುತ್ತಾರೆ. ಅವರ ಪ್ರಕಾರ, ಇದು ಶತ್ರುಗಳನ್ನು ಹೆದರಿಸುತ್ತದೆ ಮತ್ತು ಮಿತ್ರ ರಾಷ್ಟ್ರಗಳಿಗೆ ಧೈರ್ಯ ತುಂಬುತ್ತದೆ.