US Vice President Vance Visit India : ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಮ್ಮ ಪತ್ನಿಯೊಂದಿಗೆ ಜೈಪುರಕ್ಕೆ ಭೇಟಿ

ಜೈಪುರ (ರಾಜಸ್ಥಾನ) – ಅಮೆರಿಕದ ಉಪಾಧ್ಯಕ್ಷ ಜೇಮ್ಸ್ ಡೇವಿಡ್ ವ್ಯಾನ್ಸ್ ಏಪ್ರಿಲ್ 21 ರಂದು ಜೈಪುರಕ್ಕೆ ಭೇಟಿ ನೀಡಲಿದ್ದಾರೆ. ಅವರು 3 ದಿನಗಳ ಕಾಲ ಜೈಪುರದಲ್ಲಿ ತಂಗಲಿದ್ದಾರೆ. ಈ ಅವಧಿಯಲ್ಲಿ ಅವರು ಆಗ್ರಾದಲ್ಲಿನ ತಾಜ್ ಮಹಲ್ ನೋಡಲು ಹೋಗುವರು. ವ್ಯಾನ್ಸ್ ಅವರೊಂದಿಗೆ ಅವರ ಭಾರತೀಯ ಮೂಲದ ಪತ್ನಿ ಉಷಾ ಚಿಲುಕುರಿ ಕೂಡ ಇರುತ್ತಾರೆ. ಅವರು ಜೈಪುರದ ಅಮೇರ್ ಪ್ಯಾಲೇಸ್ ಮತ್ತು ಜಂತರ್ ಮಂತರ್‌ನಂತಹ ಪಾರಂಪರಿಕ ತಾಣಗಳಿಗೂ ಭೇಟಿ ನೀಡಲಿದ್ದಾರೆ. ಮೂಲಗಳು ನೀಡಿದ ಮಾಹಿತಿ ಪ್ರಕಾರ, ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲು ವ್ಯಾನ್ಸ್ ಅವರ ಜೊತೆಗೆ ಜೈಪುರಕ್ಕೆ ಬರಬಹುದು.