Khalistani Terrorist Arrested : ಖಲಿಸ್ತಾನಿ ಭಯೋತ್ಪಾದಕ ಹ್ಯಾಪಿ ಪಾಸಿಯಾ ಅಮೇರಿಕದಲ್ಲಿ ಬಂಧನ!

ವಾಷಿಂಗ್ಟನ್ (ಅಮೇರಿಕಾ) – ಅಮೇರಿಕದ ಪೊಲೀಸರು ಖಲಿಸ್ತಾನಿ ಭಯೋತ್ಪಾದಕ ಹರಪ್ರೀತ್ ಸಿಂಗ್ ಅಲಿಯಾಸ್ ಹ್ಯಾಪಿ ಪಾಸಿಯಾನನ್ನು ಬಂಧಿಸಿದ್ದಾರೆ. ಆತನ ಬಂಧನದ ಚಿತ್ರಗಳು ಪ್ರಸಾರವಾಗಿವೆ. ಇದರೊಂದಿಗೆ, ‘ಇಂದು ಭಾರತದ ಪಂಜಾಬ್‌ನಲ್ಲಿ ಭಯೋತ್ಪಾದಕ ದಾಳಿಗಳಿಗೆ ಕಾರಣನಾದ ಭಯೋತ್ಪಾದಕ ಹರಪ್ರೀತ್ ಸಿಂಗ್ ನನ್ನು ಸ್ಯಾಕ್ರಮೆಂಟೊದಲ್ಲಿ ಬಂಧಿಸಲಾಗಿದೆ’ ಎಂದು ಹೇಳಲಾಗಿದೆ.

1. ಹ್ಯಾಪಿ ಪಾಸಿಯಾ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ. (ಇಂಟರ್ ಸರ್ವೀಸ್ ಇಂಟೆಲಿಜೆನ್ಸ್) ಗೆ ಬಹಳ ಹತ್ತಿರವಾಗಿದ್ದನೆಂದು ನಂಬಲಾಗಿದೆ. ಆತ ಬಬ್ಬರ್ ಖಲ್ಸಾ ಇಂಟರ್ ನ್ಯಾಷನಲ್ ಮತ್ತು ಭಯೋತ್ಪಾದಕ ರಿಂಡಾ ಅವನೊಂದಿಗೆ ಪಂಜಾಬ್‌ನಲ್ಲಿ ಅನೇಕ ಗ್ರೆನೇಡ್ ದಾಳಿಗಳು ಮತ್ತು ಭಯೋತ್ಪಾದಕ ಕೃತ್ಯಗಳನ್ನು ನಡೆಸಿದ್ದಾನೆ.

2. ರಾಷ್ಟ್ರೀಯ ತನಿಖಾ ದಳ (ಎನ್ಐಎ) ಜನವರಿ 2025 ರಲ್ಲಿ ಹ್ಯಾಪಿ ಪಾಸಿಯಾ ಮೇಲೆ 5 ಲಕ್ಷ ರೂಪಾಯಿಗಳ ಬಹುಮಾನವನ್ನು ಘೋಷಿಸಿತ್ತು.