ಏಲಿಯನ್ಸ್ ವಾಸಿಸುವ ಗ್ರಹವನ್ನು ಕಂಡುಹಿಡಿದಿರುವುದಾಗಿ ವಿಜ್ಞಾನಿಗಳ ದಾವೆ!

(ಏಲಿಯನ್ಸ್ ಎಂದರೆ ಇತರ ಗ್ರಹದಲ್ಲಿರುವ ಜೀವಿ ಅಥವಾ ಪ್ರಾಣಿ)


ಲಂಡನ್ – ಭೂಮಿಯ ಮೇಲೆ ಹೇಗೆ ಜೀವಿಗಳ ಸೃಷ್ಟಿ ಇದೆಯೋ ಅದೇ ರೀತಿ ಇತರ ಗ್ರಹಗಳಲ್ಲೂ ಜೀವಿಗಳ ಸೃಷ್ಟಿ ಇದ್ದು ಅಲ್ಲಿ ಏಲಿಯೆನ್ಸ್ (ಅನ್ಯಗ್ರಹ ಜೀವಿಗಳು) ವಾಸಿಸುತ್ತಿವೆ ಎಂದು ಅನೇಕ ಸಲ ವಿಜ್ಞಾನಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಏಲಿಯನ್ಸ್ ಯಾವ ಗ್ರಹದಲ್ಲಿ ವಾಸಿಸುತ್ತಿದೆ, ಇದನ್ನು ಕಂಡು ಹಿಡಿಯುವಲ್ಲಿ ವಿಜ್ಞಾನಿಗಳಿಗೆ ದೊಡ್ಡ ಯಶಸ್ಸು ಸಿಕ್ಕಿದೆ. ಬ್ರಿಟಿಷ್ ವಿಜ್ಞಾನಿಗಳು ‘ಕೆ2-18 ಬಿ’ ಹೆಸರಿನ ಗ್ರಹವನ್ನು ಕಂಡುಹಿಡಿದಿದ್ದಾರೆ. ಈ ಗ್ರಹದಲ್ಲಿ ಜೀವಿಗಳಿವೆ ಎಂಬುದಕ್ಕೆ ಹಲವು ಸೂಚನೆಗಳು ಸಿಕ್ಕಿವೆ, ಎಂದು ವಿಜ್ಞಾನಿಗಳು ಹೇಳಿದ್ದಾರೆ. ವಿಜ್ಞಾನಿಗಳು ನೀಡಿದ ಮಾಹಿತಿಯ ಆಧಾರದ ಮೇಲೆ ಬ್ರಿಟಿಷ್ ಸುದ್ದಿಪತ್ರಿಕೆ ‘ದಿ ಸನ್’ ಈ ಮಾಹಿತಿಯನ್ನು ನೀಡಿದೆ. ವಿಜ್ಞಾನಿಗಳ ಪ್ರಕಾರ, ಈ ಗ್ರಹವು ಭೂಮಿಯಿಂದ 120 ಬೆಳಕಿನ ವರ್ಷಗಳ ದೂರದಲ್ಲಿದೆ ಮತ್ತು ಭೂಮಿಗಿಂತ ಎರಡೂವರೆ ಪಟ್ಟು ದೊಡ್ಡದಾಗಿದೆ. ಈ ಗ್ರಹವನ್ನು ಅಧ್ಯಯನ ಮಾಡುವ ವಿಜ್ಞಾನಿಗಳ ನೇತೃತ್ವವನ್ನು ಭಾರತೀಯ ಮೂಲದ ಬ್ರಿಟಿಷ್ ವಿಜ್ಞಾನಿ ಪ್ರೊ. ಡಾ. ನಿಕ್ಕು ಮಧುಸೂದನ್ ಮಾಡುತ್ತಿದ್ದಾರೆ. “ಈ ಗ್ರಹವು ಸಾಗರಗಳಿಂದ ಆವೃತವಾಗಿರುವ ಸಾಧ್ಯತೆಯಿದೆ” ಎಂದು ಡಾ. ಮಧುಸೂದನ್ ಹೇಳಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂ ಧರ್ಮಗ್ರಂಥಗಳಲ್ಲಿ ಅನಂತಕೋಟಿ ಬ್ರಹ್ಮಾಂಡಗಳಿವೆ, ಎಂದು ಹೇಳಲಾಗಿದೆ. ಅದರ ಹುಡುಕಾಟವನ್ನು ವಿಜ್ಞಾನ ಈಗ ಪ್ರಾರಂಭಿಸಿದೆ!